ಹೈದರಾಬಾದ್: ಜುಂಬ ನೃತ್ಯ ಶೈಲಿಯ ದೈಹಿಕ ವ್ಯಾಯಾಮವಾಗಿದ್ದು, ಇದು ಕೂಡ ಏರೋಬಿಕ್ ವರ್ಗಕ್ಕೆ ಸೇರಲಿದ್ದು, ಒಟ್ಟಾರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡಲಿದೆ. ಹೃದಯದ ಆರೋಗ್ಯಕ್ಕೆ ಜುಂಬ ಅತ್ಯುತ್ತಮ ವ್ಯಾಯಾಮ ಚಟುವಟಿಕೆ ಆಗಿದೆ. ನಿಯಮಿತವಾಗಿ ಇದನ್ನು ಅಭ್ಯಾಸ ಮಾಡುವುದರಿಂದ ಹೃದಯ ಆರೋಗ್ಯ ಕಾಪಾಡಬಹುದಾಗಿದೆ. ಇದರ ಹೊರತಾಗಿ ಇದು ನಿಮ್ಮ ಸ್ಟ್ಯಾಮಿನಅ (ಸಾಮರ್ಥ್ಯವನ್ನು) ಹೆಚ್ಚಿಸುವ ಜೊತೆಗೆ ತೂಕ ನಿರ್ವಹಣೆ ಮಾಡಲಿದೆ. ಅಷ್ಟೇ ಅಲ್ಲದೇ, ಸ್ನಾಯುಗಳ ಆರೋಗ್ಯಕ್ಕೆ, ಸರಾಗ ಚಲನೆಗೆ ಇದು ಅನುಕೂಲಕಾರಿಯಾಗಿದೆ.
ಜುಂಬ ಚಟುವಟಿಕೆಯ ಲಾಭದ ಕುರಿತು ಮಾತನಾಡಿರುವ ಮಧ್ಯ ಪ್ರದೇಶದ ಜೂಂಬಾ ತರಬೇತುದಾರ ಮಹೇಶ್ ರಾಣೆ, ಜುಂಬ ಒಂದು ಮಧ್ಯಂತರ ತರಬೇತಿ ಅವಧಿಯಾಗಿದೆ. ಈ ಅವಧಿಯಲ್ಲಿ ಇದನ್ನು ನಿಧಾನ ಮತ್ತು ಜೋರಾಗಿ ಮಾಡಲಾಗುವುದು. ಉದಾಹರಣೆ, ವರ್ಕ್ಔಟ್ ಅನ್ನು ನಿಧಾನವಾಗಿ ಆರಂಭವಿಸಿ, ಬಳಿಕ ಹೆಚ್ಚಿಗೆ ಮಾಡಲಾಗುವುದು. ಜುಂಬದ ಮತ್ತೊಂದು ಪ್ರಯೋಜನ ಎಂದರೆ, ಇದಕ್ಕೆ ಯಾವುದೇ ರೀತಿಯ ಉಪಕರಣಗಳು ಬೇಡ. ಇದನ್ನು ಸುಲಭವಾಗಿ ಮನೆಯಲ್ಲಿ ಮಾಡಬಹುದು. ಎಲ್ಲ ನೃತ್ಯ ಶೈಲಿಗಳನ್ನು ಜೂಂಬಾದಲ್ಲಿ ಸೇರಿಸಬಹುದು. ಸದ್ಯ ಬಾಲಿವುಡ್ ಜುಂಬ ಟ್ರೆಂಡ್ ಹೆಚ್ಚು ಪ್ರಖ್ಯಾತಿ ಹೊಂದಿದ್ದು. ಬಾಲಿವುಡ್ನ ಫಾಸ್ಟ್ ಬೀಟ್ ಹಾಡಿನ ಜೊತೆಗೆ ಭಾಂಗ್ರಾವನ್ನು ಸೇರಿಸಿ ಪ್ರದರ್ಶಿಸಲಾಗುವುದು.
ಜುಂಬದ ನಿಯಮಿತ ಅಭ್ಯಾಸವೂ ಆರೋಗ್ಯದ ಮೇಲೆ ಹಲವು ವಿಧದಲ್ಲಿ ಪ್ರಯೋಜನ ನೀಡುತ್ತದೆ. ಜುಂಬ ಸ್ನಾಯುಗಳಿಗೆ ವಿಶ್ರಾಂತಿ ನೀಡುವುದರ ಜೊತೆಗೆ, ಸರಾಗ ಚಲನೆಗೆ ಹೆಚ್ಚಿಸುತ್ತದೆ. ಕ್ಯಾಲೋರಿ ಬರ್ನ್ ಆಗುತ್ತದೆ. ಇದು ಹೃದಯ ಆರೋಗ್ಯಕ್ಕೆ ಅನುಕೂಲ ಜೊತೆಗೆ ದೇಹದ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ತೂಕ ನಷ್ಟಕ್ಕೆ ಇದು ಪರಿಣಾಮಕಾರಿಯಾಗಿದೆ. ಫಿಟ್ನೆಸ್ ಮತ್ತು ಆರೋಗ್ಯ ತಜ್ಞರ ಪ್ರಕಾರ ಜುಂಬದ ಆರೋಗ್ಯ ಪ್ರಯೋಜನಗಳು ಹೀಗಿದೆ.
ಹೃದಯದ ಆರೋಗ್ಯ: ಜೂಂಬಾ ವರ್ಕ್ಔಟ್ ವೇಳೆ ದೀರ್ಘವಾಧಿಯವರೆಗೆ ನಿರಂತರವಾಗಿ ನಿರ್ಧಿಷ್ಟ ಸಮಯದವರೆಗೆ ವೇಗದಲ್ಲಿ ಡ್ಯಾನ್ಸ್ ಮಾಡುವುದರಿಂದ ಹೃದಯ ಬೇಗ ರಕ್ತ ಪಂಪ್ ಮಾಡಲು ಸಾಧ್ಯವಾಗುತ್ತದೆ. ಇದು ಆಮ್ಲಜನಕ ಮಟ್ಟವನ್ನು ರಕ್ತದಲ್ಲಿ ಹೆಚ್ಚಿಸಿ, ದೇಹಕ್ಕೆ ಪರಿಚಲನೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ. ಹೃತ್ಕರ್ಣಗಳು ಆರೋಗ್ಯವಾಗಿದ್ದು, ಒತ್ತಡ ನಿಯಂತ್ರಣದಲ್ಲಿ ಇರುತ್ತದೆ. ಉಸಿರಾಟವನ್ನು ಇದು ಅಭಿವೃದ್ಧಿಪಡಿಸುತ್ತದೆ.