ಮೆಲ್ಬೋರ್ನ್ (ಆಸ್ಟ್ರೇಲಿಯಾ): ವಿಶ್ವಾದ್ಯಂತ ಹಲವು ದೇಶಗಳಲ್ಲಿ ಆತಂಕ ಮೂಡಿಸುತ್ತಿರುವ ಮಂಕಿಪಾಕ್ಸ್ ವೈರಸ್ ಅನ್ನು ಪರಿಣಾಮಕಾರಿಯಾಗಿ ವ್ಯಾಕ್ಸಿನಿಯಾ ವೈರಸ್ (ವಿಎಸಿವಿ) ಆಧಾರಿತ ಲಸಿಕೆಗಳು ಎದುರಿಸಬಲ್ಲವು ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಂಶೋಧಕರು ದೃಢಪಡಿಸಿದ್ದಾರೆ.
ವಿಎಸಿವಿ ಲಸಿಕೆಗಳು ಬಲವಾದ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ವ್ಯಾಕ್ಸಿನಿಯಾ ಎಂಬ ವೈರಸ್‌ನಿಂದ ಈ ಲಸಿಕೆ ತಯಾರಿಸಲಾಗುತ್ತದೆ. ಇದು ಸಿಡುಬಿಗೆ ಹೋಲುವ ಪಾಕ್ಸ್‌ವೈರಸ್ ಆಗಿದೆ. ಆದರೆ ಕಡಿಮೆ ಹಾನಿಕಾರಕವಾಗಿದೆ. ಇದನ್ನು ಆಧರಿಸಿದ ಲಸಿಕೆಗಳು ಹಿಂದೆ ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ ಎಂದು ಅವರು ಹೇಳಿದ್ದಾರೆ.