ಅನೇಕ ಮಂದಿ ತಮ್ಮ ದೇಹ ತೂಕ ನಿರ್ವಹಣೆಗೆ ಸಕ್ಕರೆ ತ್ಯಜಿಸುವುದೇ ಪರಿಹಾರ ಮಾರ್ಗ ಎಂದು ಭಾವಿಸುತ್ತಾರೆ. ಆದರೆ ಆರೋಗ್ಯಕರ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ನಿರ್ವಹಣೆಗೆ ಸಿಹಿ ದೇಹಕ್ಕೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನಿಮ್ಮಿಷ್ಟದ ಸಿಹಿ ತಿಂಡಿಗಳನ್ನು ತ್ಯಜಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಕ್ಕರೆ ಬಿಡುವುದರಿಂದ ನಿಮ್ಮ ಆರೋಗ್ಯ ವೃದ್ಧಿ ಆಗುವುದಿಲ್ಲ. ಸಕ್ಕರೆರಹಿತ ಡಯಟ್ ಅನ್ನು ಸಂಶೋಧನೆ ಶಿಫಾರಸು ಮಾಡುವುದಿಲ್ಲ ಎಂದಿದ್ದಾರೆ.
ವ್ಯಕ್ತಿಯ ಉತ್ತಮ ಮತ್ತು ಕೆಟ್ಟ ಆಹಾರಗಳೊಂದಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಬಂಧ ಹೊಂದಿರುತ್ತದೆ. ಹೀಗಾಗಿ ಸಿಹಿ ಸೇವಿಸುವುದನ್ನು ನಿಲ್ಲಿಸಿದರೆ, ಅದಕ್ಕೆ ಪರ್ಯಾಯ ಆಹಾರ ವಿಧಾನ ಆರಿಸಿಕೊಳ್ಳಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಿಹಿ ಸೇವಿಸುವುದರಿಂದ ತೂಕ ಹೆಚ್ಚಳ ಕೂಡ ಆಗುವುದಿಲ್ಲ. ನಮ್ಮ ಮಾನಸಿಕ ಮತ್ತು ಭಾವಾನಾತ್ಮಕ ಯೋಗಕ್ಷೇಮಗಳು ಆಹಾರದೊಂದಿಗೆ ಸಂಬಂಧ ಹೊಂದಿರುವ ಜೊತೆಗೆ ದೈಹಿಕ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕು.
ಅತಿ ಹೆಚ್ಚಿನ ಸಕ್ಕರೆ ತಪ್ಪಿಸುವುದು: ತೂಕ ನಿರ್ವಹಣೆಗೆ ಸಕ್ಕರೆ ಸೇವನೆಯನ್ನು ನಿಯಮಿತ ಮಾಡಬೇಕು. ಜೊತೆಗೆ, ಸಕ್ಕರೆ ಅಂಶ ಹೊಂದಿರುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸಕ್ಕರೆ ಆಧಾರಿತ ಪಾನೀಯಗಳ ಬದಲಾಗಿ, ಸಿಹಿ ಅಂಶ ಇಲ್ಲದ ಪಾನೀಯಗಳಿಗೆ ಮುಂದಾಗಬೇಕು.
ಕಡಿಮೆ ಸಕ್ಕರೆ: ಡಯಟ್ನಲ್ಲಿ ಸ್ವಲ್ಪ ಪ್ರಮಾಣದ ಸಕ್ಕರೆ ಸೇರಿಸುವುದು ಉತ್ತಮ. ಈ ವೇಳೆ ಸಕ್ಕರೆಯ ಕ್ಯಾಲೋರಿಯನ್ನು ಮೌಲ್ಯಮಾಪನ ಮಾಡಬೇಕು. ಈ ಕ್ಯಾಲೋರಿಯ ಒಟ್ಟಾರೆ ಮೊತ್ತವನ್ನು ಗಮನದಲ್ಲಿರಿಸಿಕೊಂಡು ಅದರ ಆಯ್ಕೆ ಮಾಡಬೇಕು. ಕಡಿಮೆ ಮಟ್ಟದ ಕ್ಯಾಲೋರಿ ಅಥವಾ ಫೈಬರ್ ಅಥವಾ ಕ್ಯಾಲೋರಿ ರಹಿತ ಸಿಹಿಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಸಕ್ಕರೆ ಅಂಶ ಇರುವ ಹಿನ್ನೆಲೆಯಲ್ಲಿ ಅನೇಕ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ಕಡಿಮೆ ಮಾಡುವುದರಿಂದ ವಿಟಮಿನ್ ಕೊರತೆ ಕಾಡುತ್ತದೆ. ಡೈರಿ ಉತ್ಪನ್ನದಿಂದಾಗಿ ನೈಸರ್ಗಿಕವಾದ ಸಿಹಿ ಅಂಶಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.