ವಿವಾಹದ ನಂತರ ದಂಪತಿ ಬಹುತೇಕ ಅನ್ಯೋನ್ಯವಾಗಿರುತ್ತಾರೆ. ಆದರೂ ಕೆಲವೊಮ್ಮೆ ವಿವಾಹದ ನಂತರದಲ್ಲಿಯೂ ಕೆಲ ಸಮಸ್ಯೆಗಳು ಅವರನ್ನು ಕಾಡುತ್ತವೆ. ಒಮ್ಮೊಮ್ಮೆ ಅವರು ಲೈಂಗಿಕ ಸುಖ ಅನುಭವಿಸುವುದಕ್ಕೂ ಸಾಧ್ಯವಾಗಲ್ಲ. ಲೈಂಗಿಕ ಕ್ರಿಯೆ ನಡೆಸುವಾಗ ಮಹಿಳೆಯರಲ್ಲಿ ಅತಿಯಾದ ನೋವು ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಅವರು ಲೈಂಗಿಕ ಕ್ರಿಯೆ ಅನುಭವಿಸಲು ಸಾಧ್ಯವಾಗುವುದಿಲ್ಲ ಏಕೆ ಎಂದು ತಿಳಿಯೋಣ.
ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕಾದರೆ ಮಹಿಳೆಯರು ಮತ್ತು ಪುರುಷರು ಮಾನಸಿಕವಾಗಿ ಸಜ್ಜಾಗ ಬೇಕಾಗಿರಬೇಕಾಗುತ್ತದೆ. ಸಂಭೋಗಿಸುವಾಗ ಮಹಿಳೆಯರಲ್ಲಿ ಯೋನಿಯು ಲೂಬ್ರಿಕೆಂಟ್ ರೀತಿಯ ದ್ರವವೊಂದನ್ನು ಬಿಡುಗಡೆ ಮಾಡುತ್ತದೆ. ಈ ದ್ರವದ ಕಾರಣವೇ ಸಂಭೋಗದ ಸಮಯದಲ್ಲಿ ಮಹಿಳೆಯರಿಗೆ ನೋವಿನ ಪ್ರಮಾಣ ಕಡಿಮೆ ಇರುತ್ತದೆ.