ಹಿಂದೂ ಹಬ್ಬಗಳಲ್ಲಿ ಒಂದಾದ ರಾಮ ನವಮಿಯನ್ನು ಹಿಂದೂ ಕ್ಯಾಲೆಂಡರ್ನ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಅವತಾರವಾಗಿ ರಾಮನ ಜನ್ಮವಾದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸವಿದ್ದು, ಕನ್ಯಾ ಪೂಜೆಯನ್ನು ಮಾಡುತ್ತಾರೆ. ಯಾವುದೇ ಹಬ್ಬಗಳಲ್ಲಿ ಪೂಜಾ ಕೈಂಕರ್ಯಗಳು ಹೇಗೆ ಒಂದು ಭಾಗವಾಗಿರುತ್ತದೆಯೋ ಹಾಗೆಯೇ, ಸಿಹಿ, ಆಹಾರವಿಲ್ಲದೆ ಅಪೂರ್ಣ. ಆದ್ದರಿಂದ ಹಬ್ಬದ ಸಾಂಪ್ರಾದಾಯಿಕ ಆಚರಣೆಯ ನಂತರ ನೀವು ಸವಿಯಬಹುದಾದ ಭಕ್ಷ್ಯಗಳ ಪಟ್ಟಿ ಇಲ್ಲಿದೆ.
ಆಲೂ ಕರಿ: ಸರಳವಾದರೂ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹೆಚ್ಚಿನ ಮಸಾಲೆಗಳನ್ನು ಬಳಸದೆ ಟೊಮೆಟೊ ಸಾಸ್‌ನಲ್ಲಿ ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಈ ಮೇಲೋಗರವನ್ನು ತಯಾರಿಸುವುದು ಸರಳವಾಗಿರುವುದರಿಂದ ಹಬ್ಬಗಳ ಸಮಯದಲ್ಲಿಯೂ ಮಾಡಲಾಗುತ್ತದೆ. ಇದು ಪೂರಿ, ಪರಾಠ ಅಥವಾ ರೋಟಿ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಸಿಂಘಾರ ಪೂರಿ:ಆಲೂಗಡ್ಡೆ ಮತ್ತು ವಾಟರ್ ಚೆಸ್ಟ್ನಟ್ ಹಿಟ್ಟನ್ನು ಈ ಪೂರಿ ಅಥವಾ ಪಫಿ ಬ್ರೆಡ್ ಮಾಡಲು ಬಳಸಲಾಗುತ್ತದೆ. ನೀವು ಇದನ್ನು ಕಢಿ, ಖಟ್ಟಾ ಮೀಠಾ ಕದ್ದು, ಕುಂಬಳಕಾಯಿ ಸಬ್ಜಿ ಅಥವಾ ಆಲೂ-ಪಾಲಕ್ ಸಬ್ಜಿಯೊಂದಿಗೆ ಸೇವಿಸಬಹುದು.
ಕಡ್ಲೆ ಬೇಳೆ ಹೋಳಿಗೆ:ಈ ರುಚಿಕರವಾದ ಮಹಾರಾಷ್ಟ್ರದ ಖಾದ್ಯ ಖಂಡಿತವಾಗಿಯೂ ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಕಡ್ಲೆ ಬೇಳೆ ಹೋಳಿಗೆ ಬೆಲ್ಲ, ತೆಂಗಿನಕಾಯಿ, ಏಲಕ್ಕಿ, ಮತ್ತು ಬೆಣ್ಣೆ ಅಥವಾ ತುಪ್ಪ ಸೇರಿಸಿ ಕಡ್ಲೆ ಬೇಳೆಯಿಂದ ಮಾಡಿದ ಸಿಹಿಯಾದ ಖಾದ್ಯ.