ನವದೆಹಲಿ: ಪ್ರತಿನಿತ್ಯ ಗ್ಲಾಸ್ ಕ್ಲೀನರ್, ಏರ್ ಫ್ರೆಶನೆಸ್ ಸೇರಿದಂತೆ ಸ್ವಚ್ಛತೆಯಲ್ಲಿ ಬಳಕೆ ಮಾಡುವ ಅನೇಕ ಉತ್ಪನ್ನಗಳು ವಿಒಸಿ ಯಂತಹ ಅಪಾಯಕಾರಿಯಾದ ರಾಸಾನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ವಿಒಸಿ ಎಂಬುದು ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮವನ್ನು ಹೊಂದಿದೆ. ಇದು ಕಣ್ಣು, ಮೂಗು ಮತ್ತು ಗಂಟಲಿನ ಕೆರೆತ, ತಲೆನೋವು, ತಲೆ ಸುತ್ತು, ಯಕೃತ್, ಮೂತ್ರಪಿಂಡ ಮತ್ತು ಕೇಂದ್ರ ನರ ವ್ಯವಸ್ಥೆ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವು ರಾಸಾಯನಿಗಳು ಪ್ರಾಣಿಗಳಲ್ಲಿ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮತ್ತೆ ಕೆಲವು ಮನುಷ್ಯರಲ್ಲೂ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಅಮೆರಿಕದ ಎನ್ವರಮೆಂಟಲ್ ವರ್ಕಿಂಗ್ ಗ್ರೂಪ್ ಸಂಶೋಧಕರು ಅನೇಕ ಮನೆ ಬಳಕೆ ಉತ್ಪನ್ನಗಳನ್ನು ಮತ್ತು ಗ್ರೀನ್ ಶುಚಿತ್ವ ಉತ್ಪನ್ನಗಳನ್ನು ಪರೀಕ್ಷೆ ಮಾಡಿದ್ದಾರೆ. 30 ಉತ್ಪನ್ನಗಳಲ್ಲಿ 530 ವಿಶಿಷ್ಟ ವಿಒಸಿಗಳು ಪತ್ತೆಯಾಗಿವೆ.
ಇದರಲ್ಲಿ 193 ವಿಒಸಿಗಳು ಅಪಾಯಕಾರಿಯಾಗಿದ್ದು, ಇದು ಉಸಿರಾಟ ವ್ಯವಸ್ಥೆ ಹಾನಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವುದು ಪತ್ತೆಯಾಗಿದೆ. ಜೊತೆಗೆ ಕ್ಯಾನ್ಸರ್ ಅಪಾಯ ಮತ್ತು ಅಭಿವೃದ್ಧಿಗೆ ಇದು ಪರಿಣಾಮ ಬೀರುತ್ತದೆ.
ಕೆಮೊಸ್ಫೇರೆ ಎಂಬ ಜರ್ನಲ್ನಲ್ಲಿ ಈ ಸಂಶೋಧನೆ ಪ್ರಕಟಿಸಲಾಗಿದ್ದು, ಮನೆಯ ಒಳಾಂಗಣ ಮತ್ತು ಹೊರಾಂಗಣದ ಗಾಳಿಯ ಗುಣಮಟ್ಟದ ಮೇಲೆ ಶುಚಿ ಉತ್ಪನ್ನಗಳಲ್ಲಿರುವ ವಿಒಸಿ ಪರಿಣಾಮ ಬೀರುತ್ತದೆ. ಮತ್ತೊಂದು ಅಂಶ ಎಂದರೆ, ಇವು ಹೊರಾಂಗಣ ಗಾಳಿಗಿಂತ ಮನೆಯೊಳಗಿನ ಗಾಳಿಯನ್ನು ಎರಡರಿಂದ ಐದು ಪಟ್ಟು ಕಲುಷಿತಗೊಳಿಸುತ್ತವೆ. ಕೆಲವು ಉತ್ಪನ್ನಗಳು ಕೆಲವು ದಿನ, ವಾರ ಮತ್ತು ತಿಂಗಳ ಕಾಲ ವಿಒಸಿಯನ್ನು ಬಿಡುಗಡೆ ಮಾಡುತ್ತವೆ.
ಗ್ರಾಹಕರೇ ಎಚ್ಚರ: ಈ ಅಧ್ಯಯನವೂ ಗ್ರಾಹಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಸಂಶೋಧಕರು ಮತ್ತು ನಿಯಂತ್ರಕರು, ನಮ್ಮ ಒಳಾಂಗಣ ಗಾಳಿಗೆ ಹಲವಾರು ರಾಸಾಯನಿಕಗಳು ಪ್ರವೇಶಿಸುವುದರ ಜೊತೆಗೆ ಅಪಾಯವನ್ನು ಬೀರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ಹೊಂದಬೇಕಿದೆ ಎಂದು ಇಡಬ್ಲ್ಯೂಜಿಯ ಸೀನಿಯರ್ ಟೊಕ್ಸಿಕೊಲೊಜಿಸ್ಟ್ ಅಲೆಕ್ಸಿಸ್ ಟೆಮ್ಕಿನ್ ತಿಳಿಸಿದ್ದಾರೆ.