ಸೌಂದರ್ಯ ಕಾಳಜಿ ಉಳ್ಳವರು ಮೊಡವೆಗಳಿಗೆ ಹೆಚ್ಚು ಕಂಗಾಲಾಗುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಮೊಡವೆಗಳು ದೇಹದಲ್ಲಿರುವ ಎಣ್ಣೆಯ ಅಂಶ, ಬ್ಯಾಕ್ಟೀರಿಯಾಗಳು ಮತ್ತು ಸತ್ತ ಚರ್ಮದ ಕೋಶಗಳ ಕಾರಣದಿಂದಾಗಿ ಕಾಣಿಸುತ್ತವೆ. ಮುಖ, ಭುಜ, ಬೆನ್ನು, ಕುತ್ತಿಗೆ, ಎದೆ ಮತ್ತು ತೋಳುಗಳ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಇಂತಹ ಮೊಡವೆಗಳನ್ನು ಚಳಿಗಾಲದಲ್ಲಿ ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
- ಹೈಡ್ರೇಟ್ ಆಗಿರಿ..
ಚಳಿಗಾಲದಲ್ಲಿ ನೀವು ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀರು ಕಡಿಮೆ ಕುಡಿಯುತ್ತಿರುವುದೇ ಮುಖ್ಯ ಕಾರಣವಾಗಿರುತ್ತದೆ. ಚಳಿಗಾಲದ ವಾತಾವರಣದಲ್ಲಿ ನಿಮ್ಮ ಚರ್ಮವು ಒಣಗಿರುತ್ತದೆ. ಆದ್ದರಿಂದ ನೀವು ನೀರು ಕುಡಿಯುವುದನ್ನು ಹೆಚ್ಚು ಮಾಡಿದರೆ, ಮೊಡವೆ ಉಂಟು ಮಾಡುವ ಟಾಕ್ಸಿನ್ಗಳು ನೀರಿನ ಮೂಲಕವೇ ಹೊರ ಹೋಗುತ್ತವೆ. ಅದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗಿ ಮೊಡವೆಗಳು ಉಂಟಾಗುವುದು ಕಡಿಮೆಯಾಗುತ್ತದೆ.
- ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಮೊಡವೆಗಳನ್ನು ನಿಯಂತ್ರಿಸಲು ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಫೇಸ್ ವಾಶ್ ಅಥವಾ ಫೇಸ್ ಕ್ಲೆನ್ಸರ್ (face cleanser)ಅನ್ನು ಬಳಸಬಹುದು. ಇದರಿಂದ ಚರ್ಮ ಒಣಗುವುದು ಕಡಿಮೆಯಾಗುತ್ತದೆ. ಇದರ ಜೊತೆಗೆ ಗಾಳಿಯಲ್ಲಿರುವ ಮಾಲಿನ್ಯಕಾರಕಗಳಿಂದ ಮುಖವನ್ನು ರಕ್ಷಣೆ ಮಾಡಿಕೊಳ್ಳಬಹುದು.
- ಮಾಯಿಶ್ಚರೈಸ್ ಅತಿ ಮುಖ್ಯ
ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ತೇವಗೊಳಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ನಿಮ್ಮದು ಎಣ್ಣೆಯ ಚರ್ಮವಾಗಿದ್ದರೆ, ನೀರು ಅಥವಾ ಫೇಶಿಯಲ್ ಜೆಲ್ ಅನ್ನು ಬಳಸಿ ಮಾಯಿಶ್ಚರೈಸ್ಮಾಡಿಕೊಳ್ಳಿ. ನಿಮ್ಮ ಚರ್ಮಕ್ಕೆ ಬೇಕಾದ ಫೇಶಿಯಲ್ ಅಥವಾ ಫೇಸ್ ಪ್ಯಾಕ್‌ಗಳನ್ನು ಬಳಸಬಹುದು. ಹಣ್ಣಿನ ಫೇಶಿಯಲ್ ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು.
- ವ್ಯಾಯಾಮ ಮಾಡಿ..