ನ್ಯೂಯಾರ್ಕ್: ಕೋವಿಡ್ 19 ಸೋಂಕಿನ ಪರಿಣಾಮ ಕುರಿತು ಹಲವಾರು ಅಧ್ಯಯನಗಳು ಹೊರ ಬಂದಿದ್ದು, ಇದೀಗ ಹೊಸ ಅಧ್ಯಯನವೊಂದು ಈ ಕೋವಿಡ್ ಲಸಿಕೆಗಳು ನಿದ್ರೆಯ ಚಕ್ರದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿವೆ. ಕಡಿಮೆ ನಿದ್ರೆ ಹೊಂದಿರುವವರಲ್ಲಿ ಅದರಲ್ಲೂ ಕೋವಿಡ್-19 ಲಸಿಕೆ ಪಡೆದ ವಾರಗಳಲ್ಲಿ ರಾತ್ರಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಹೊಂದಿರುವರಲ್ಲಿ, ಅದು ಮೊಂಡಾದ ಪ್ರತಿಕಾಯ ಪ್ರತಿಕ್ರಿಯೆ ಹೊಂದಿರುತ್ತದೆ.
ಇನ್ಫ್ಲುಯೆನ್ಸ ಮತ್ತು ಹೆಪಟೈಟಿಸ್ನಂತಹ ವೈರಲ್ ಕಾಯಿಲೆಗಳ ವಿರುದ್ಧ ವ್ಯಾಕ್ಸಿನೇಷನ್ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ನಿದ್ರೆಯ ಅವಧಿಯ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಚಿಕಾಗೋ ಯುನಿವರ್ಸಿಟಿ ಮತ್ತು ಫ್ರೆಂಚ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಮಡ್ ಮೆಡಿಕಲ್ ರಿಸರ್ಚ್, ಮೆಟಾ ಅನಾಲಿಸಿಸ್ ನಡೆಸಿ ಅಂಶವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಈ ಫಲಿತಾಂಶವನ್ನು ಫೈಜಾರ್ - ಬಯೋಟೆಕ್ ಕೋವಿಡ್ 19 ಲಸಿಕೆ ಪ್ರತಿಕಾಯ ಪ್ರತಿಕ್ರಿಯೆಯಲ್ಲಿ ತಿಳಿದಿರುವ ಡೇಟಾಗಳನ್ನು ಹೋಲಿಸಿ ಅಧ್ಯಯನ ನಡೆಸಲಾಗಿದೆ. ಕಡಿಮೆ ನಿದ್ರೆ ಹೊಂದಿರುವವರಲ್ಲಿ ದುರ್ಬಲಗೊಂಡ ಪ್ರತಿಕಾಯ ಪ್ರತಿಕ್ರಿಯೆಯು ತುಂಬಾ ಆಳವಾಗಿರುತ್ತದೆ. ಇದು ಲಸಿಕೆ ಹಾಕಿದ ಎರಡು ತಿಂಗಳ ನಂತರ ಕೋವಿಡ್ 19 ಪ್ರತಿಕಾಯಗಳಲ್ಲಿನ ಕುಸಿತಕ್ಕೂ ಕಾರಣವಾಗುತ್ತದೆ. ಈ ಸಂಬಂಧ ಜರ್ನಲ್ ಕರೆಂಟ್ ಬಯಾಲಜಿಯಲ್ಲಿ ಸಂಶೋಧನೆ ಪ್ರಕಟವಾಗಿದೆ. ಪ್ರತಿರಕ್ಷಣೆಗಿಂತ ಮುಂಚಿತವಾಗಿ ಆರೋಗ್ಯಕರ ನಿದ್ರೆಯ ಅವಧಿಯನ್ನು ಉತ್ತೇಜಿಸುವ ಪ್ರಯತ್ನಗಳು ಲಸಿಕೆ ಪರಿಣಾಮಕಾರಿಯಾಗಿ ಸುಧಾರಿಸಲು ಸುಲಭವಾದ ಮಾರ್ಗವಾಗಿದೆ ಎಂದು ಸೂಚಿಸುತ್ತದೆ.