ವಾಷಿಂಗ್ಟನ್(ಅಮೆರಿಕ): ಮಧ್ಯವಯಸ್ಕ ಪುರುಷರಲ್ಲಿ ಒಂಟಿತನವು ಕ್ಯಾನ್ಸರ್ ಖಾಯಿಲೆ ತಂದೊಡ್ಡುವ ಸಾಧ್ಯತೆ ಇದೆ ಎಂದು ಈಸ್ಟರ್ನ್ ಫಿನ್ಲ್ಯಾಂಡ್ ವಿಶ್ವವಿದ್ಯಾನಿಲಯ ನಡೆಸಿದ ಇತ್ತೀಚಿನ ಅಧ್ಯಯನದ ಸಂಶೋಧನೆಗಳಲ್ಲಿ ತಿಳಿದುಬಂದಿದೆ.
ಸಂಶೋಧಕರ ಪ್ರಕಾರ, ಒಂಟಿತನ ಮತ್ತು ಸಾಮಾಜಿಕ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಸಂಬಂಧ ನಡೆದ ಸಂಶೋಧನೆಯನ್ನು 'ಸೈಕಿಯಾಟ್ರಿ ರಿಸರ್ಚ್' ಎಂಬ ಸಂಶೋಧನಾ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅಧ್ಯಯನಗಳ ಆಧಾರದ ಮೇಲೆ, ಒಂಟಿತನವು ವ್ಯಕ್ತಿಯು ಧೂಮಪಾನ ಮಾಡುವುದರಿಂದ ಮತ್ತು ಅಧಿಕ ತೂಕ ಇರುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳಷ್ಟೇ ಪರಿಣಾಮ ಬೀರುತ್ತದೆ ಎಂದು ಅಂದಾಜು ಮಾಡಲಾಗಿದೆ ಎಂದು ಸಂಶೋಧಕ ಈಸ್ಟರ್ನ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಿರ್ರಿ ಲಿಸ್ಸಿ ಕ್ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಕೊರೊನಾ ಲಾಕ್ಡೌನ್: ಬೇಸರದಿಂದ ಹೊರಬರಲು ಎಮ್ಮೆ ಸಾಕಣೆಗೆ ಮುಂದಾದ ಸ್ನಾತಕೋತ್ತರ ವಿದ್ಯಾರ್ಥಿ !