ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರ ಮಾನಸಿಕ ಆರೋಗ್ಯದ ತೊಂದರೆಗಳ ವರದಿಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ವಾರ್ಸಿಟಿಯ ಮನೋವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಕರೇಸ್ತಾನ್ ಕೊಯೆನೆನ್ ಹೇಳಿದ್ದಾರೆ.
ಗರ್ಭಿಣಿಯರು ತಮ್ಮ ಮಕ್ಕಳ ಅಥವಾ ಕುಟುಂಬದ ಆರೋಗ್ಯದ ಜೊತೆಗೆ ಆತಂಕಕ್ಕೊಳಗಾಗಬಹುದು. ಅವರ ಮಕ್ಕಳ ಆರೋಗ್ಯದ ಹಲವು ಬಗೆಯ ಪ್ರಶ್ನೆಗಳನ್ನು ಹೊಂದಿರಬಹುದು ಎಂದರು.
ಸಾಂಕ್ರಾಮಿಕ ಸಮಯದಲ್ಲಿ ಈ ಹಿಂದೆ ಪ್ರಕಟವಾದ ರೋಗಲಕ್ಷಣಗಳಿಗಿಂತ ಗಮನಾರ್ಹವಾಗಿ ಮಹಿಳೆಯರ ಸಂಖ್ಯೆ ಹೆಚ್ಚು ದೊಡ್ಡದಾಗಿದೆ ಎಂಬ ಅಂಶವನ್ನು ಪ್ಲೊಂಸ್ ಒನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಸಾಂಕ್ರಾಮಿಕ ಸಮಯದಲ್ಲಿ ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರ ಮಾನಸಿಕ ಆರೋಗ್ಯ ಅಳೆಯಲು, ಈ ತಂಡವು 2020ರ ಮೇ 26 ಮತ್ತು 2020ರ ಜೂನ್ 13ರ ನಡುವೆ 64 ದೇಶಗಳಲ್ಲಿ ಸಮೀಕ್ಷೆ ನಡೆಸಿತು.
ಭಾಗವಹಿಸಿದ 6,894 ಜನರಲ್ಲಿ ಕೋವಿಡ್ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಆತಂಕ,ಖಿನ್ನತೆ (31 ಪ್ರತಿಶತ), ಒಂಟಿತನ (53 ಪ್ರತಿಶತ) ಮತ್ತು ಕೋವಿಡ್-19 ನಂತರದ ಆಘಾತಕಾರಿ ಒತ್ತಡಗಳ (43 ಪ್ರತಿಶತ) ಎಂಬುದು ತಿಳಿದು ಬಂದಿದೆ.
ಕೇವಲ 117 ಮಹಿಳೆಯರು (2 ಪ್ರತಿಶತ) ಮಾತ್ರ ಕೋವಿಡ್ -19 ರೋಗನಿರ್ಣಯ ಮಾಡಿದ್ದರು. 510 (7 ಪ್ರತಿಶತ) ಕೋವಿಡ್-19 ಹೊಂದಿರುವ ಯಾರೊಂದಿಗಾದರೂ ಸಂಪರ್ಕದಲ್ಲಿದ್ದರು.
ಸಾಂಕ್ರಾಮಿಕ ಸಮಯದಲ್ಲಿ ಸಾಮಾನ್ಯ ಜನರಲ್ಲಿ ಮತ್ತು ಸಾಂಕ್ರಾಮಿಕ ರೋಗದ ಮೊದಲು ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರಲ್ಲಿ ಮನೋವೈದ್ಯಕೀಯ ತೊಂದರೆಯ ಮಟ್ಟವು ಈ ಹಿಂದೆ ಪ್ರಕಟವಾದ ದತ್ತಾಂಶಕ್ಕಿಂತ ಗಮನಾರ್ಹವಾಗಿ ಏರಿಕೆಯಾಗಿದೆ.
ಯಾವುದೇ ಮೂಲದಿಂದ ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಪಡೆಯುವುದು ಕೋವಿಡ್ 19 ಮತ್ತು ಆತಂಕ,ಖಿನ್ನತೆಗೆ ಸಂಬಂಧಿಸಿದಂತೆ ಆಘಾತಕಾರಿ ಒತ್ತಡ ಎರಡು ಪಟ್ಟು ಹೆಚ್ಚಾಗಿದೆ. ಮಕ್ಕಳ ಚಿಂತೆ ಮತ್ತು ಮಕ್ಕಳ ಆರೈಕೆ ಹಾಗೂ ಆರ್ಥಿಕ ಚಿಂತೆ ಮಹಿಳೆಯರ ಮಾನಸಿಕ ಆರೋಗ್ಯದಲ್ಲಿ ಪ್ರಭಾವ ಬೀರಿದ ಪ್ರಮುಖ ಅಂಶಗಳಾಗಿವೆ.