ಹೈದರಾಬಾದ್: ಟೈಪ್ 1 ಡಯಾಬಿಟಿಸ್ (ಟಿ1ಡಿ) ಹೊಂದಿರುವ ವ್ಯಕ್ತಿಗಳಲ್ಲಿನ ಮೂತ್ರಪಿಂಡ ಕಾಯಿಲೆ ತಪಾಸಣೆಯನ್ನು ಸ್ಕ್ರೀನಿಂಗ್ ವಿಧಾನದ ಮೂಲಕ ಮಾಡಬಹುದಾಗಿದೆ. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಪತ್ತೆಹಚ್ಚುವ ಸಮಯ ಕಡಿಮೆ ಮಾಡುತ್ತದೆ ಎಂದು ಎಪಿಡೆಮಿಯಾಲಜಿ ಆಫ್ ಡಯಾಬಿಟಿಸ್ ಇಂಟರ್ವೆನ್ಶನ್ಸ್ ಮತ್ತು ಕಾಂಪ್ಲಿಕೇಶನ್ ಅಧ್ಯಯನ ತಂಡ ತಿಳಿಸಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಭಾಗವಾಗಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ (NIDDK) ನಿಂದ ಇದು ಧನಸಹಾಯ ಪಡೆದಿದೆ. ಡಯಾಬಿಟಿಸ್ ಕೇರ್‌ನಲ್ಲಿ ಪ್ರಕಟವಾದ ಸಂಶೋಧನೆಯು T1D ಯೊಂದಿಗಿನ ಜನರಿಗೆ ಮೊದಲ ಪುರಾವೆ ಆಧಾರಿತ ಮೂತ್ರಪಿಂಡ ಸ್ಕ್ರೀನಿಂಗ್ ಮಾದರಿಗೆ ಆಧಾರವನ್ನು ಒದಗಿಸುತ್ತದೆ.
ಪ್ರಸ್ತುತ ಕ್ರಾನಿಂಕ್ ಕಿಡ್ನಿ ಡಿಸೀಜ್ ಸ್ಕ್ರೀನಿಂಗ್ ಕನಿಷ್ಠ ಐದು ವರ್ಷಗಳ ಕಾಲ T1D ಹೊಂದಿರುವ ವ್ಯಕ್ತಿಗಳ ಯೂರಿನರಿ ಅಲ್ಬುಮಿನ್ ವಿಸರ್ಜನೆ ದರ (AER) ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಅಲ್ಬುಮಿನ್ ರಕ್ತದಲ್ಲಿ ಕಂಡುಬರುವ ಪ್ರೋಟೀನ್ ಮತ್ತು ಮೂತ್ರದಲ್ಲಿ ಹೆಚ್ಚು ಅಲ್ಬುಮಿನ್ ಇರುವುದು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿದೆ.