ಕರ್ನಾಟಕ

karnataka

ETV Bharat / sukhibhava

ಋತುಮಾನದ ಇನ್​ಫ್ಲುಯೆಂಜಾ ಸೋಂಕಿಗಿಂತ ಓಮ್ರಿಕಾನ್​ ಮಾರಾಣಾಂತಿಕ - ಋತುಮಾನದ ಸೋಂಕುಗಳು ಕೂಡ ಸಾಕಷ್ಟು

ಕೋವಿಡ್​ನ ರೂಪಾಂತರ ತಳಿಯಾದ ಓಮ್ರಿಕಾನ್​ ಋತುಮಾನದ ಸೋಂಕಾದ ಇನ್​ಫ್ಲುಯೆಂಜಾಗಿಂತ ಮಾರಾಣಾಂತಿಕವಾಗಿದೆ ಎಂದು ಅಧ್ಯಯನ ತಿಳಿಸಿದೆ.

http://10.10.50.85:6060/reg-lowres/08-April-2023/omicron_0804newsroom_1680926848_1036.jpg
http://10.10.50.85:6060/reg-lowres/08-April-2023/omicron_0804newsroom_1680926848_1036.jpg

By

Published : Apr 8, 2023, 10:38 AM IST

ನವದೆಹಲಿ: ಕೋವಿಡ್​ ಸೋಂಕಿನ ಉಪತಳಿಗಳಾದ ಓಮ್ರಿಕಾನ್​ ಸೋಂಕು ಜನರನ್ನು ಹೆಚ್ಚು ಭಾದಿಸಿದ್ದಂತೂ ಸುಳ್ಳಲ್ಲ ಬಿಡಿ. ಈ ನಡುವೆ ಋತುಮಾನದ ಸೋಂಕುಗಳು ಕೂಡ ಸಾಕಷ್ಟು ಆತಂಕ ಮೂಡಿಸಿದ್ದವು. ಈ ಸೋಂಕಿಗೆ ತುತ್ತಾದವರಲ್ಲಿ ಸಾವಿನ ಪ್ರಮಾಣದ ಕುರಿತು ಇಸ್ರೇಲ್​ನಲ್ಲಿ ಅಧ್ಯಯನ ನಡೆಸಲಾಗಿದೆ. ಅದರ ಅನುಸಾರ ಕೋವಿಡ್​ನ ರೂಪಾಂತರ ತಳಿಯಾದ ಓಮ್ರಿಕಾನ್​ ಋತುಮಾನದ ಸೋಂಕಾದ ಇನ್​ಫ್ಲುಯೆಂಜಾಗಿಂತ ಮಾರಾಣಾಂತಿಕವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ದಾಖಲಾದ ಇನ್​ಫ್ಲುಯೆಂಜಾ ಸೋಂಕಿತರಿಗಿಂತ ಓಮ್ರಿಕಾನ್​ ಸೋಂಕಿತರ ಸಾವಿನ ಪ್ರಮಾಣ ಅಧಿಕವಾಗಿದೆ ಎಂದು ವರದಿ ತಿಳಿಸಿದೆ. ಆದರೂ ಕೂಡ ಓಮ್ರಿಕಾನ್​ ಡೆಲ್ಟಾ ಮತ್ತು ಅಲ್ಫಾ ತಳಿಗೆ ಹೋಲಿಕೆ ಮಾಡಿದಾಗ ಈ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಇಸ್ಟೇಲ್​ನ ಬೆಲಿನಿಸನ್​ ಆಸ್ಪತ್ರೆಯ ರಾಬಿನ್ ಮೆಡಿಕಲ್ ಸೆಂಟರ್‌ನ ಡಾ ಅಲಾ ಆಟಮ್ನಾ ಮತ್ತು ಅವರ ಸಹೋದ್ಯೋಗಿಗಳು ಅಧ್ಯಯನ ನಡೆಸಿದ್ದಾರೆ.

18 ವರ್ಷ ಮೇಲ್ಪಟ್ಟವರ ಪರಿಣಾಮ:ಈ ಅಧ್ಯಯನದಲ್ಲಿ ಇನ್​​ಫ್ಲುಯೆಂಜಾ ಸೋಂಕಿನಿಂದ 18 ವರ್ಷಕ್ಕಿಂತ ದಾಖಲಾದವರು ಮತ್ತು 2021-2022ರಲ್ಲಿ ಓಮ್ರಿಕಾನ್​ ಸೋಕಿನಿಂದ ದಾಖಲಾದವರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ವೇಳೆ, ಓಮ್ರಿಕಾನ್​ ಸೋಂಕಿಗೆ ತುತ್ತಾದವರ ಸಾವಿನ ಪ್ರಮಾಣ ಶೇ 55ರಷ್ಟಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಇನ್​ಫ್ಲುಯೆಂಜಾ ಸೋಂಕಿಗಿಂದ ಓಮ್ರಿಕಾನ್​ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಸೋಂಕಿತರ ಸಾವಿನ ಪ್ರಮಾಣ: ಇನ್​ಫ್ಲುಯೆಂಜಾ ಮತ್ತು ಕೋವಿಡ್​-19 ಎರಡೂ ಸೋಂಕುಗಳು ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಈ ಸಂಬಂಧ ಹೆಚ್ಚಿನ ಅಧ್ಯಯನ ನಡೆಲು ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ವೈದ್ಯಕೀಯ ಫಲಿತಾಂಶ ಪಡೆಯಲಾಗಿದೆ. ಈ ವೇಳೆ, ಆಸ್ಪತ್ರೆಗೆ ದಾಖಲಾದ ಸೋಂಕಿತರಲ್ಲಿ 63 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಇನ್​ಫ್ಲುಯೆಂಜಾ ಸೋಂಕಿತರು 19 ಮಂದಿ ಇದ್ದರೆ, 44 ಮಂದಿ ಓಮ್ರಿಕಾನ್​ ಸೋಂಕಿತರು ಆಗಿದ್ದಾರೆ

ಅನೇಕ ಸಮಸ್ಯೆಗಳು ಗೋಚರ: ಓಮ್ರಿಕಾನ್​ ಸೋಂಕಿತರು ಹೆಚ್ಚಿನ ಕೊಮಾರ್ಬಿಡಿಟಿ ಸ್ಕೋರ್​ ಹೊಮದಿದ್ದರು. ಇವರಿಗೆ ದೈನಂದಿನ ಚಟುವಟಿಕೆ ನಿರ್ವಹಣೆಯಲ್ಲಿ ಸಹಾಯದ ಅಗತ್ಯ ಕಂಡು ಬಂದಿದೆ. ಜೊತೆಗೆ ಇವರಲ್ಲಿ ಅಧಿಕರ ರಕ್ತದ ಒತ್ತಡ ಮತ್ತು ಮಧುಮೇಹ ಹೊಂದಿರುವ ಸಾಧ್ಯತೆ ಇದೆ. ಇನ್ನು ಇನ್​ಫ್ಲುಯೆಂಜಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಅಸ್ತಮಾ ಸಾಮಾನ್ಯವಾಗಿದೆ.

ಋತುಮಾನದ ಇನ್​ಫ್ಲುಯೆಂಜಾಗಿಂತ ಓಮ್ರಿಕಾನ್​ ಪ್ರಕರಣದಲ್ಲಿ ಉಸಿರಾಟದ ತೊಂದರೆ, ಆಮ್ಲಜನಕದ ಕೊರತೆ ಕಂಡು ಬಂದಿದೆ. ಓಮ್ರಿಕಾನ್​ ರೋಗಿಗಳ ಸಾವಿಗೆ ಪ್ರಮುಖ ಕಾರಣವೆಂದರೆ, ಅವರಲ್ಲಿ ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ಪ್ರಮುಖ ರೋಗಗಳು ಕಂಡು ಬಂದಿದ್ದು, ಅವರ ವಯಸ್ಸು ಕೂಡ ಪ್ರಮುಖ ಪಾತ್ರವಹಿಸಿದೆ ಎಂದು ವೈದ್ಯರಾದ ಆಟಮ್ನಾ ತಿಳಿಸಿದ್ದಾರೆ.

ಇದನ್ನೂ ಓದಿ: ವಾಯುಮಾಲಿನ್ಯಕ್ಕೆ ತುತ್ತಾದವರ ಮೇಲೆ ಕೋವಿಡ್​ ಲಸಿಕೆ ಹೆಚ್ಚು ಪರಿಣಾಮ ಬೀರದು: ಅಧ್ಯಯನ

ABOUT THE AUTHOR

...view details