ಕರ್ನಾಟಕ

karnataka

ETV Bharat / sukhibhava

ಭಾರತೀಯ ರೋಗಿಗಳಲ್ಲಿ ಓಮಿಕ್ರಾನ್​ XBB ಸೌಮ್ಯವಾದ ರೋಗ ಲಕ್ಷಣ ಹೊಂದಿದೆ: INSACOG - ಕೋವಿಡ್

ಕೋವಿಡ್​-19 ನ ಓಮಿಕ್ರಾನ್​​ ಉಪ-ತಳಿ XBB ಸೋಂಕಿಗೆ ಒಳಗಾದ ಭಾರತೀಯ ರೋಗಿಗಳು ಸೌಮ್ಯವಾದ ರೋಗ ಲಕ್ಷಣವನ್ನು ಹೊಂದಿರುತ್ತಾರೆ. ರೋಗದಲ್ಲಿ ಯಾವುದೇ ರೀತಿ ಹೆಚ್ಚಳ ಕಂಡುಬರುವುದಿಲ್ಲ ಎಂದು INSACOG ಹೇಳಿದೆ.

Omicron's XBB variant
Omicron's XBB variant

By

Published : Nov 2, 2022, 7:10 PM IST

ನವದೆಹಲಿ:ಕೋವಿಡ್-19ನ ಓಮಿಕ್ರಾನ್ ಉಪ-ತಳಿ XBB ಸೋಂಕಿತ ಭಾರತೀಯ ರೋಗಿಗಳು ಸೌಮ್ಯವಾದ ರೋಗ ಲಕ್ಷಣವನ್ನು ಹೊಂದಿರುತ್ತಾರೆ. ಈ ಸೋಂಕು ಅವರಲ್ಲಿ ಹೆಚ್ಚಾಗುವುದಿಲ್ಲ ಎಂದು INSACOG ಹೇಳಿದೆ. ಎಕ್ಸ್‌ಬಿಬಿ ರೂಪಾಂತರವು ದೇಶದ ಅನೇಕ ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದು ತಜ್ಞರ ಸಮಿತಿ ತಿಳಿಸಿದೆ.

ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) XBB ಮತ್ತು XBB.1 ಯಾವುದಾದರೂ, ಹೊಸ ಉಪ-ತಳಿ ಹೊರಹೊಮ್ಮುವಿಕೆ ಮತ್ತು ವಿಕಸನಕ್ಕೆ ಕಾರಣವಾಗುತ್ತದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಹಾಗೂ ಮೇಲ್ವಿಚಾರಣೆ ಮಾಡುತ್ತಿದೆ. ಈ ಉಪ ತಳಿಗೆ ಭಯಪಡುವ ಅಗತ್ಯವಿಲ್ಲ. ಬದಲಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ಹೇಳಿದೆ.

ಭಾರತೀಯ ರೋಗಿಗಳಲ್ಲಿ ಈ ರೋಗವು ಇತರ ಓಮಿಕ್ರಾನ್ ಉಪ-ವಂಶಗಳಂತೆಯೇ ಸೌಮ್ಯವಾಗಿರುತ್ತದೆ ಮತ್ತು ತೀವ್ರತೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಸಮಿತಿ ಹೇಳಿದೆ. ಸಾಂಕ್ರಾಮಿಕ ರೋಗದ ಪ್ರಸ್ತುತ ಹಂತದಲ್ಲಿ, SARS-CoV-2 ವೈರಸ್ ನಿರಂತರವಾಗಿ ರೂಪಾಂತರಗಳನ್ನು ಸಂಗ್ರಹಿಸುತ್ತಿದೆ ಎಂದು INSACOG ಹೇಳಿದೆ.

ಇದನ್ನೂ ಓದಿ:ಅತ್ಯಧಿಕ ಸಾಂಕ್ರಾಮಿಕ ಹೊಸ ಓಮಿಕ್ರಾನ್ ಉಪ ರೂಪಾಂತರ BF.7 ಭಾರತದಲ್ಲಿ ಪತ್ತೆ

XBB, BJ.1/BM.1.1.1 ಮರುಸಂಯೋಜಿತ ವಂಶಾವಳಿಯು ಸ್ಪೈಕ್ ಪ್ರೊಟೀನ್‌ನಲ್ಲಿ ಬ್ರೇಕ್‌ಪಾಯಿಂಟ್‌ನೊಂದಿಗೆ ಪ್ರಸ್ತುತ ಅನೇಕ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮರುಸಂಯೋಜಿತ ವಂಶಾವಳಿಯನ್ನು ಮೊದಲು ಸಿಂಗಾಪುರ ಮತ್ತು ಯುಎಸ್‌ನಲ್ಲಿ ಪತ್ತೆ ಮಾಡಲಾಯಿತು. ಇದೀಗ ಭಾರತದ ಅನೇಕ ರಾಜ್ಯಗಳಲ್ಲಿಯೂ ಗುರುತಿಸಲಾಗಿದೆ ಎಂದು ತಜ್ಞರ ಸಮಿತಿ ಮಾಹಿತಿ ನೀಡಿದೆ.

ಹೆಚ್ಚುವರಿ ರೂಪಾಂತರದೊಂದಿಗೆ XBB ಯ ಉಪ-ವಂಶವನ್ನು ಸಹ ಪತ್ತೆ ಮಾಡಲಾಗಿದೆ (XBB.1). ಸಿಂಗಾಪುರದಲ್ಲಿ XBB ಹರಡುವಿಕೆಯಲ್ಲಿ ಸಾಧಾರಣ ಹೆಚ್ಚಳವನ್ನು ಗಮನಿಸಲಾಗಿದೆ. ಆದಾಗ್ಯೂ, ರೋಗದ ತೀವ್ರತೆಯ ಹೆಚ್ಚಳ ಅಥವಾ ಈ ರೂಪಾಂತರಗಳಿಗೆ ಸಂಬಂಧಿಸಿ ಆಸ್ಪತ್ರೆಗೆ ಸೇರುವಿಕೆ ಹೆಚ್ಚಳದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಸಮಿತಿ ತಿಳಿಸಿದೆ.

ABOUT THE AUTHOR

...view details