ಬೀಜಿಂಗ್: ಕಡಿಮೆ ಕಾರ್ಬೋಹೈಡ್ರೇಟ್ ಸೇವನೆಯಿಂದ ಅಕಾಲಿಕ ಸಾವಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನ ವರದಿ ಎಚ್ಚರಿಸಿದೆ. ಇದರ ಜೊತೆಗೆ ಕಡಿಮೆ ಕೊಬ್ಬಿನ ಆಹಾರಗಳು ಜೀವನಾವಧಿ ಹೆಚ್ಚಿಸಲು ಪೂರಕ ಎಂದು ತಿಳಿಸಿದೆ. ಈ ಸಂಬಂಧ ಅಲ್ಪ-ಕಾಲದ ಕ್ಲಿನಿಕಲ್ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಕಡಿಮೆ ಕೊಬ್ಬಿನಾಹಾರ ಸೇವನೆ ತೂಕ ನಷ್ಟದೊಂದಿಗೆ ಹೃದಯಸಂಬಂಧಿ ಪ್ರಯೋಜನ ಹೊಂದಿದೆ ಎಂದು ತೋರಿಸಿದೆ.
ಕಡಿಮೆ ಕೊಬ್ಬಿನ ಆಹಾರಗಳೆಂದರೆ, ಧಾನ್ಯಗಳ ಆಹಾರ, ತೆಳು ಮಾಂಸ, ಕೊಬ್ಬಿನ ಡೈರಿ ಉತ್ಪನ್ನಗಳ ಕಡಿತ, ತರಕಾರಿ, ಲೆಂಟಿಸ್ ಮತ್ತು ಸೊಪ್ಪು ಒಳಗೊಂಡಿದೆ. ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಪದ್ಧತಿಯಲ್ಲಿ ಸಾಮಾನ್ಯ ಅಹಾರಕ್ಕೆ ಹೋಲಿಕೆ ಮಾಡಿದಾಗ ನಿಯಮಿತ ಕಾರ್ಬೋಹೈಡ್ರೇಟ್ ಸೇವನೆಗೆ ಮಿತಿಗೊಳಿಸಲಾಗಿದೆ. ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳನ್ನು ಮಿತಿಗೊಳಿಸಲಾಗಿದೆ. ಇದನ್ನು ಹೆಚ್ಚಿನ ಕೊಬ್ಬು ಮತ್ತು ಪ್ರೊಟೀನ್ ಆಹಾರಗಳನ್ನು ಬದಲಾಯಿಸಿದ್ದು, ಕಾರ್ಬೋಹೈಡ್ರೇಟ್ ಆಹಾರವನ್ನು ಬದಲಾಯಿಸಲಾಗಿದೆ.
ಸುದೀರ್ಘ ಅಧ್ಯಯನ: ಚೀನಾದಲ್ಲಿನ ಪೀಕಿಂಗ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಶೋಧನಾ ತಂಡ ಹಾಗೂ ಅಮೆರಿಕದ ಹಾರ್ವರ್ಡ್ ಮತ್ತು ತುಲನೆ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ 50ರಿಂದ 71 ವರ್ಷದ ವಯೋಮಾನದ 3,17,159 ಜನರು ಭಾಗಿಯಾಗಿದ್ದರು. ಈ ಭಾಗೀದಾರರನ್ನು 23.5 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, 1,65,698 ಮಂದಿ ಸಾವನ್ನಪ್ಪಿದ್ದಾರೆ. ಅಧ್ಯಯನವನ್ನು ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಕಡಿಮೆ ಕೊಬ್ಬಿನ ಆಹಾರಗಳು ವರ್ಷದಿಂದ ವರ್ಷಕ್ಕೆ ಸಾವಿನ ಅಪಾಯ ಹೆಚ್ಚಿಸಿದ್ದು, ಶೇ 34ರಷ್ಟಿದೆ.