ಚಳಿಗಾಲದಲ್ಲಿ ಬೇಗ ಎದ್ದರೂ ಸೋಂಬೇರಿತನ ನಮ್ಮನ್ನು ಕಾಡುತ್ತದೆ. ಇದರ ಜೊತೆಗೆ ಆಗ್ಗಿಂದಾಗ್ಗೆ ಆಗುವ ಶೀತ ಮತ್ತು ಕೆಮ್ಮ, ತಲೆನೋವು ವ್ಯಾಯಾಮದ ಕಡೆಗೆ ಗಮನ ನೀಡದಂತೆ ಮಾಡುತ್ತದೆ. ನಿಯಮಿತ ವ್ಯಾಯಮವಿಲ್ಲದೆ ತೂಕ ಕೂಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ದೇಹ ಮತ್ತು ಮನಸ್ಸು ಖುಷಿಯಿಂದ ಇರಬೇಕು ಎಂದರೆ, ನಿಮ್ಮ ಚಳಿಗಾಲದ ಆಹಾರ ವಿಚಾರದ ಬಗ್ಗೆ ಕೂಡ ಗಮನ ನೀಡಬೇಕು ಎನ್ನುತ್ತಾರೆ ತಜ್ಞರು.
ಕಿತ್ತಾಳೆ: ವಿಟಮಿನ್ ಸಿ ಯಥೇಚ್ಛವಾಗಿರುವ ಕಿತ್ತಾಳೆ ನಿಮ್ಮ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಇದು ದೇಹದ ಮೆಟಾಬಲಿಸಂ ಕೂಡ ಹೆಚ್ಚಿಸುತ್ತದೆ. ನೀರಿನ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಹೆಚ್ಚು ಹಸಿವೆಯಾಗದಂತೆ ನೋಡಿಕೊಳ್ಳುತ್ತದೆ.
ಫಿಗ್: ಅತಿ ಹೆಚ್ಚು ಫೈಬರ್ ಹೊಂದಿರುವ ಈ ಹಣ್ಣು ಸೇವಿಸಿದರೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಇದರಲ್ಲಿನ ಪಿಸಿನ್ ಕಿಣ್ವಗಳು ಜೀರ್ಣಶಕ್ತಿಯನ್ನು ವೇಗಗೊಳಿಸಿ, ಹೊಟ್ಟೆಯ ಸುತ್ತ ಬೊಜ್ಜು ಸಂಗ್ರಹಗೊಳ್ಳದಂತೆ ತಡೆಯುತ್ತದೆ. ಇದು ಪೋಷಕಾಂಶ, ಮೆಗ್ನಿಶಿಯಂ, ಪೊಟಾಶಿಯಂ ಅನ್ನು ಕೂಡ ದೇಹಕ್ಕೆ ನೀಡುತ್ತದೆ.
ಸ್ಟಾರ್ಹಣ್ಣು: ಕ್ಯಾಲರಿ ಬರ್ನ್ ಮಾಡಬೇಕು ಎಂದರೆ ಇದು ಸೂಕ್ತವಾದ ಹಣ್ಣ. ಇದೇ ಕಾರಣಕ್ಕೆ ತೂಕ ನಷ್ಟ ಮಾಡಿಕೊಳ್ಳುವವರಿಗೆ ಇದು ಅತ್ಯುತ್ತಮ ಆಯ್ಕೆ ಎನ್ನುತ್ತೇವೆ. ಜೊತೆಗೆ ಇದು ಹೊಟ್ಟೆ ತುಂಬಿಸುತ್ತದೆ ಮತ್ತು ಬೇಗ ಹಸಿವೆಗೆ ಒಳಗಾಗದಂತೆ ತಡೆಯುತ್ತದೆ. ಇದು ಕೂಡ ಬೊಜ್ಜನ್ನು ಕರಗಿಸಿ, ತೂಕ ನಷ್ಟಕ್ಕೆ ಸಹಕರಿಸುತ್ತದೆ. ಗ್ಯಾಸ್, ತೇಗಿನ ಸಮಸ್ಯೆಗೆ ಇದು ಉತ್ತಮ ಮದ್ದು.
ಸೀಬೆ ಹಣ್ಣು: ಚಳಿಗಾಲದಲ್ಲಿ ಸ್ನಾಕ್ಗೆ ಉತ್ತಮ ಆಯ್ಕೆ ಇದಾಗಿದೆ. ಸಿಹಿ ತಿನ್ನಬೇಕು ಎಂದು ಮನಸು ಆದಾಗ ಆರೋಗ್ಯ ದೃಷ್ಟಿ ಜೊತೆಗೆ ರುಚಿಯಿಂದಲೂ ಇದು ಉತ್ತಮ. ಜ್ವರ ತಡೆಗೂ ಇದು ಉತ್ತಮ ಆಯ್ಕೆ. ಅತಿ ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಸಿ ಹೊಂದಿರುವ ಹಿನ್ನೆಲೆಯಲ್ಲಿ ಇದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೀತಾಫಲ: ವಿಟಮಿನ್ ಮತ್ತು ಮಿನರಲ್ ಸಮೃದ್ಧವಾಗಿರುವ ಹಣ್ಣ ಸೀತಾಫಲ. ವಿಟಮಿನ್ ಎ ಮತ್ತು ಸಿ, ಕಬ್ಬಿಣಮ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ತಾಮ್ರದ ಅಂಶ ಇದರಲ್ಲಿ ಹೇರಳವಾಗಿದೆ. ಮಲಬದ್ದತೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗೆ ಇದು ಉತ್ತಮವಾಗಿದ್ದು, ಜೀರ್ಣಶಕ್ತಿಯ ಸಮಸ್ಯೆಗೆ ಸಹಕಾರಿಯಾಗಿದೆ. ಜೊತೆಗೆ ಇದು ನಿಮ್ಮ ಚರ್ಮದ ಆರೈಕೆಗೆ ಉತ್ತಮವಾಗಿದೆ.
ಇದನ್ನೂ ಓದಿ:ಮಗುವಿನ ಜೊತೆ ಪ್ರಯಾಣ ಮಾಡುವಿರಾ? ಈ 10 ವಸ್ತುಗಳನ್ನು ಮರೆಯದಿರಿ..