ಕೋವಿಡ್ ಇಂದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿಲ್ಲ. ಮೂರು ವರ್ಷಗಳ ಹಿಂದೆ ಇದ್ದ ಇದರ ಭಯ ಕಣ್ಮರೆಯಾಗಿದೆ. ಸಹಜ ಜನಜೀವನಕ್ಕೆ ಮರಳಲಾಗಿದೆ. ಸೋಂಕು ಗಣನೀಯ ಮಟ್ಟದಲ್ಲಿ ಕಡಿಮೆಯಾದರೂ, ಸೋಂಕಿನ ಪರಿಣಾಮ ಮಾತ್ರ ಹಾಗೇ ಉಳಿದಿದೆ.
ಅದರಲ್ಲೂ ಸಾರ್ಸ್-ಕೋವ್-2ನಂತಹ ದೀರ್ಘಾವಧಿ ಕೋವಿಡ್ನಿಂದ ಜಗತ್ತು ಬಳಲುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈ ದೀರ್ಘಾವಧಿ ಸೋಂಕು ವ್ಯಕ್ತಿಯ ಆರೋಗ್ಯ ಮಟ್ಟವನ್ನು ಕುಗ್ಗಿಸಿದೆ. ಇನ್ನು ಈ ದೀರ್ಘಾವಧಿಯ ಸೋಂಕಿನ ಲಕ್ಷಣಗಳು ಏನು ಎಂಬ ಬಗ್ಗೆ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ರಿಸರ್ಚಿಂಗ್ ಕೋವಿಡ್ ತಿ ಎನ್ಹ್ಯಾನ್ಸಸ್ ರಿಕವರಿ (ರಿಕವರಿ ಅಡಲ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಕೋವಿಡ್ ಲಕ್ಷಣ ಮತ್ತು ತೀವ್ರತೆ ತಿಳಿಯುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ ಸಂಶೋಧನಾ ತಂಡ ದೀರ್ಘ ಕೋವಿಡ್ನ ಅಂದರೆ ಕೋವಿಡ್ ಸೋಂಕು ತಗುಲಿದ ಬಳಿಕ 30 ದಿನಗಳ ಕಾಲ ಇದರಿಂದ ಬಾಧಿತರದಲ್ಲಿ ಕಂಡು ಬಂದ 12 ಲಕ್ಷಣವನ್ನು ತಿಳಿಸಿದೆ. ಸಾರ್ಸ್-ಕೋವ್-2 ಸೋಂಕು ಜಾಗತಿಕವಾಗಿ 650 ಮಿಲಿಯನ್ ಜನರು ದೀರ್ಘಾವಧಿ ಸೋಂಕಿಗೆ ತುತ್ತಾಗಿದ್ದು, ಇದರಿಂದ ಸೋಂಕಿತರ ಆರೋಗ್ಯ ಸೇರಿದಂತೆ ಜೀವನದ ಗುಣಮಟ್ಟ, ಸಂಪಾದನೆ, ವೈದ್ಯಕೀಯ ವೆಚ್ಚದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.
ಹೀಗಿದೆ ಲಕ್ಷಣ: ದೀರ್ಘಾವಧಿ ಕೋವಿಡ್ ಹೊಂದಿಲ್ಲದವರಿಗೆ ಗಮನಿಸಿದಾಗ ಈ 12 ಲಕ್ಷಣಗಳು ದೀರ್ಘಾವಧಿ ಕೋವಿಡ್ ಹೊಂದಿರುವವರಲ್ಲಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಕೆಲಸದ ನಂತರ ಅಸ್ವಸ್ಥತೆ ಅಂದರೆ ಸಣ್ಣ ದೈಹಿಕ ಚಟುವಟಿಕೆಯಿಂದಲೂ ಬಳಲುವುದು ಅಥವಾ ಮಾನಸಿಕ ಅಸ್ವಸ್ಥತೆ, ಆಯಾಸ, ಬ್ರೈನ್ ಫಾಗ್, ಆಲಸ್ಯ, ಜೀರ್ಣಾಂಗವ್ಯೂಹದ ಸಮಸ್ಯೆ, ಹೃದಯ ಬಡಿತ, ಲೈಂಗಿಕ ಬಯಕೆ ಅಥವಾ ಸಾಮರ್ಥ್ಯದ ಸಮಸ್ಯೆ, ವಾಸನೆ ಅಥವಾ ರುಚಿ ನಷ್ಟ, ಬಾಯಾರಿಕೆ, ದೀರ್ಘಕಾಲದ ಕೆಮ್ಮು, ಎದೆ ನೋವು ಮತ್ತು ಅಸಹಜ ಚಲನೆಗಳಾಗಿವೆ.