ಸ್ಯಾನ್ ಪ್ರಾನ್ಸಿಸ್ಕೋ: ಆನ್ಸೈಟ್ (ಕಚೇರಿಯಲ್ಲೇ ಕಾರ್ಯನಿರ್ವಣೆ) ಕೆಲಸಕ್ಕಿಂತ ರಿಮೋಟ್ ವರ್ಕ್ನಿಂದ (ಕಚೇರಿಗೆ ಬರದೇ ಎಲ್ಲಿಂದಲಾದರೂ ಕೆಲಸ ಮಾಡುವ ಸೌಲಭ್ಯ) ಶೇ 54ರಷ್ಟು ಕಡಿಮೆ ಇಂಗಾಲದ ಉತ್ಪಾದನೆ ಆಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಈ ಕುರಿತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದೆ. ಹೈಬ್ರಿಡ್ ಕೆಲಸದಿಂದ ವಾರದಲ್ಲಿ ಎರಡರಿಂದ ನಾಲ್ಕು ದಿನ ಮನೆಯಲ್ಲಿ ಕೆಲಸ ಮಾಡುವುದರಿಂದ ಶೇ 11ರಿಂದ 29ರಷ್ಟು ಇಂಗಾಲವನ್ನು ಕಡಿಮೆ ಮಾಡಬಹುದು. ಕೇವಲ ಒಂದು ದಿನ ಮಾತ್ರ ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುವುದರಿಂದ ಕೇವಲ 2ರಷ್ಟು ಇಂಗಾಲದ ಉತ್ಪಾದನೆ ಕಡಿಮೆ ಮಾಡಬಹುದು ಎಂದು ತೋರಿಸಿದೆ.
ಕೊರ್ನೆಲ್ ಯುನಿವರ್ಸಿಟಿ ಮತ್ತು ಮೈಕ್ರೋಸಾಫ್ಟ್ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ. ಸಮೀಕ್ಷೆಗಳ ದತ್ತಾಂಶ ಮತ್ತು ಸಮಯ-ಬಳಕೆಯ ಹಂಚಿಕೆ, ಪ್ರಯಾಣ-ಅಲ್ಲದ ದೂರ ಮತ್ತು ಸಾರಿಗೆ ಆಯ್ಕೆ, ವಸತಿ ಶಕ್ತಿಯ ಬಳಕೆ, ಸಂವಹನ ಸಾಧನ ಬಳಕೆ, ಮನೆಯ ಸದಸ್ಯರ ಸಂಖ್ಯೆ ಮತ್ತು ಆಸನ ಹಂಚಿಕೆ ಮತ್ತು ಕಟ್ಟಡದ ಗಾತ್ರದ ಮಾದರಿಗಳನ್ನು ಅಧ್ಯಯನಕ್ಕೆ ಬಳಸಲಾಗಿದೆ.
ರಿಮೋಟ್ ವರ್ಕ್ನಿಂದ ಶೂನ್ಯ ಇಂಗಾಲ ಉತ್ಪಾದನೆಯಾಗುತ್ತದೆ. ಹೈಬ್ರೀಡ್ ವರ್ಕ್ ಕೂಡ ಸಂಪೂರ್ಣವಾಗಿ ಲಾಭ ತೋರಿಸುವುದಿಲ್ಲ ಎಂದು ಅಧ್ಯಯನದ ಹಿರಿಯ ಲೇಖಕ ಫೆಂಗ್ವಿಯು ತಿಳಿಸಿದ್ದಾರೆ. ಹೈಬ್ರಿಡ್ ಕೆಲಸಗಾರರು ಕಚೇರಿಗೆ ಆಗಮಿಸುವಾಗ ಸೀಟು ಹಂಚಿಕೆ ಮೂಲಕ ಕಚೇರಿಯ ಸಂಪೂರ್ಣ ಹಾಜರಾತಿ ಪಡೆದರೂ ಇಂಗಾಲದ ಪ್ರಮಾಣವನ್ನು ಶೇಕಡಾ 28 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.