ಶಸ್ತ್ರಚಿಕಿತ್ಸೆಯ ಮೂಲಕ ಕನ್ಯತ್ವವನ್ನು ಮರಳಿ ಪಡೆಯಲು ಸಿದ್ಧರಿರುವ ಜನರ ಸಂಖ್ಯೆಯಲ್ಲಿ ಭಾರತದಾದ್ಯಂತ ಹಠಾತ್ ಹೆಚ್ಚಳ ಕಂಡುಬಂದಿದೆ. ಆಶ್ಚರ್ಯಕರ ಸಂಗತಿ ಎಂದರೆ, ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲ, ಮಧ್ಯಪ್ರದೇಶದ ಇಂದೋರ್‌ನಂತಹ ನಗರಗಳಲ್ಲಿಯೂ ಇದರ ಪ್ರಮಾಣ ಹೆಚ್ಚಿದೆ ಎಂದು ಇಂದೋರ್ ಮೂಲದ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಡಾ.ಅಶ್ವಿನ್ ಡ್ಯಾಶ್ ಮಾಹಿತಿ ನೀಡಿದರು. 'ಮಹಿಳೆಯರು ಮತ್ತು ಹುಡುಗಿಯರು ಹಿಂಜರಿಕೆಯಿಲ್ಲದೆ ಕನ್ಯತ್ವವನ್ನು ಮರಳಿ ಪಡೆಯಲು ಸಹಾಯ ಮಾಡುವ ಶಸ್ತ್ರಚಿಕಿತ್ಸೆಯಾದ 'ಹೈಮೆನೋಪ್ಲ್ಯಾಸ್ಟಿ' ಮಾಡಿಸಿಕೊಳ್ಳಲು ನನ್ನ ಬಳಿಗೆ ಬರುತ್ತಿದ್ದಾರೆ. ಈ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಮದುವೆಯಾಗಲಿರುವವರು' ಎಂದು ಅವರು ಹೇಳುತ್ತಾರೆ.
ಭಾರತದಲ್ಲಿ ಕನ್ಯತ್ವ ಎಂಬುದು ಒಂದು ಸೂಕ್ಷ್ಮ ವಿಷಯ. ಮಹಿಳೆಯು ತಾನು ಮದುವೆಯಾದ ಪುರುಷನೊಂದಿಗೆ ಮಾತ್ರ ಸಂಭೋಗಿಸಬೇಕು ಎಂದು ನಂಬಲಾಗಿದೆ. ಮದುವೆ ಮೊದಲಿನ ಸಂಬಂಧವನ್ನು ಭಾರತದಲ್ಲಿ ಒಪ್ಪುವುದಿಲ್ಲ. ಅಲ್ಲದೇ ಇದು ಮಹಿಳೆಯ ಖಾಸಗಿ ವ್ಯವಹಾರವೆಂದು ಪರಿಗಣಿಸಲ್ಪಟ್ಟಿದ್ದರೂ, ಇದರಲ್ಲಿ ಸಮಾಜದ ಒಳಗೊಳ್ಳುವಿಕೆ ಇದೆ.
ಮತ್ತೊಂದೆಡೆ, ಪುರುಷರೂ ಮದುವೆಗೂ ಮುಂಚೆ ತಮ್ಮ ಜೀವನದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದರೆ, ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಆದ್ರೆ ಪುರುಷರು ಸಮಾಜದ ಬಗ್ಗೆ ಮಾತ್ರವಲ್ಲದೇ, ಯಾವುದೇ ನೈತಿಕ ಮಾನದಂಡಗಳನ್ನು ಲೆಕ್ಕಿಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಬಳಿಕ ಬೇರೊಂದು ಹುಡುಗಿಯ ಜೊತೆ ಮದುವೆಯಾಗಲು ಬಯಸುತ್ತಾರೆ. ಆದ್ರೆ ಅವರು ಮದುವೆಯಾಗಲು ಸರಿಯಾದ ಹುಡುಗಿಯನ್ನು ಆಯ್ಕೆ ಮಾಡುವಾಗ ಕನ್ಯತ್ವವು ಒಂದು ಮಾನದಂಡವಾಗುತ್ತದೆ.
ಇದನ್ನೂ ಓದಿ:ವರ್ಕ್ ಫ್ರಮ್ ಹೋಮ್ ಕಾನ್ಸೆಪ್ಟ್‌ಗೆ ಒಗ್ಗಿದ್ದ ಐಟಿ ಮಂದಿ ; ಬ್ಯಾಕ್ ಟು ಆಫೀಸ್‌ನಿಂದಾಗಿ ಅಸ್ತಮಾ ಪ್ರಕರಣ ಹೆಚ್ಚಳ?
ಹೀಗಾಗಿ, ಒಂದು ಹುಡುಗಿ ಇಂತಹ ಕಟ್ಟುಪಾಡುಗಳಿಂದ ಬಂಧಿತಳಾಗಿದ್ದರೆ, ಅವಳು ನಿಸ್ಸಂದೇಹವಾಗಿ ಸಮಾಜದಲ್ಲಿ ಒಪ್ಪಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಾಳೆ. ಮಹಿಳೆಯರು ಹೈಮೆನೋಪ್ಲ್ಯಾಸ್ಟಿಗೆ ಒಳಗಾಗುವ ಪ್ರಕರಣಗಳಲ್ಲಿ ಹಠಾತ್ ಉಲ್ಬಣವು ಉಂಟಾಗಲು ಇದೇ ಕಾರಣ. ಈ ಒಂದು ಶಸ್ತ್ರಚಿಕಿತ್ಸೆಯ ಮೂಲಕ ಕನ್ಯಾಪೊರೆಯನ್ನು ಮರುಸ್ಥಾಪಿಸಬಹುದಾಗಿದೆ. ಲೈಂಗಿಕ ಸಂಭೋಗದಿಂದ ಅಥವಾ ಕೆಲವೊಮ್ಮೆ ಇತರ ಕಾರಣಗಳಿಂದ ಈ ಕನ್ಯಾಪೊರೆ ಎಂಬುದು ಹೋಗಿರಬಹುದು. ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮರುಸ್ಥಾಪಿಸಬಹುದಾಗಿದೆ. ಈ ಚಿಕಿತ್ಸೆಗೆ ಸುಮಾರು 50,000 ರೂಪಾಯಿ ಖರ್ಚಾಗಲಿದೆ.
ಕೈಗೆಟುಕುವ ದರದಲ್ಲಿ ಶಸ್ತ್ರಚಿಕಿತ್ಸೆ: ಶಸ್ತ್ರಚಿಕಿತ್ಸೆಯು ಕಡಿಮೆ ಸಮಯದಲ್ಲಿ ಕೈಗೆಟುಕುವ ದರದಲ್ಲಿ ಆಗುವುದರಿಂದ ಮಹಿಳೆಯರು ಇದನ್ನು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ನೀವು ಆಯ್ಕೆ ಮಾಡುವ ಆಸ್ಪತ್ರೆಯನ್ನು ಅವಲಂಬಿಸಿ ಸುಮಾರು 30,000 ರಿಂದ 70,000 ರೂ.ವರೆಗೆ ವೆಚ್ಚವಾಗುತ್ತದೆ. ಶಸ್ತ್ರಚಿಕಿತ್ಸೆಯೂ ತುಂಬಾ ಸರಳವಾಗಿದೆ. ಅಲ್ಲದೇ ಹೆಚ್ಚಿನ ಆರೈಕೆಯ ಅಗತ್ಯವಿರುವುದಿಲ್ಲ. ರೋಗಿಯು ಅದೇ ದಿನ ಮನೆಗೆ ಹಿಂತಿರುಗಬಹುದು ಮತ್ತು ಆಸ್ಪತ್ರೆಯಲ್ಲಿ ಉಳಿಯಬೇಕಾಗಿಲ್ಲ. ಜೊತೆಗೆ, ಶಸ್ತ್ರಚಿಕಿತ್ಸೆಯ ನಂತರ ಸ್ವಲ್ಪ ಜಾಗರೂಕರಾಗಿರಬೇಕು ಮತ್ತು ಭಾರವಾದ ವಸ್ತುಗಳನ್ನು ಎತ್ತುವುದು ಅಥವಾ ವ್ಯಾಯಾಮದಿಂದ ದೂರವಿರಲು ಸಲಹೆ ನೀಡಲಾಗುತ್ತದೆ.
ಶಸ್ತ್ರಚಿಕಿತ್ಸೆ ಒಳ್ಳೆಯದೇ?: ವೈದ್ಯರ ಪ್ರಕಾರ, ಮದುವೆಯ ಸಮಯದಲ್ಲಿ ಶಸ್ತ್ರಚಿಕಿತ್ಸೆಗಳ ದರವು ವಿಶೇಷವಾಗಿ ಹೆಚ್ಚಾಗುತ್ತದೆ. ಮಹಿಳೆಯ ದೇಹದ ಮೇಲೆ ಅದರ ಪರಿಣಾಮಗಳ ಹೊರತಾಗಿ, ಶಸ್ತ್ರಚಿಕಿತ್ಸೆಯು ಎಲ್ಲೋ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರ ಜೀವನದುದ್ದಕ್ಕೂ ಸುಳ್ಳಿನೊಂದಿಗೆ ಬದುಕುವುದು ಸವಾಲಿನದ್ದಾಗಿರಬಹುದು ಮತ್ತು ತಪ್ಪಿತಸ್ಥ ಭಾವನೆ ಅವರಲ್ಲಿ ಕಾಡಬಹುದು. ಆದ್ದರಿಂದ, ಪ್ರಸ್ತುತ ಸನ್ನಿವೇಶದಲ್ಲಿ ಹೈಮೆನೋಪ್ಲ್ಯಾಸ್ಟಿ ಸ್ವಲ್ಪಮಟ್ಟಿಗೆ ಪ್ರವೃತ್ತಿಯಾಗಿದ್ದರೂ, ಮಹಿಳೆಯು ಅದನ್ನು ಮಾಡುವ ಮೊದಲು ಅದರ ಬಗ್ಗೆ ಕೂಲಂಕಷವಾಗಿ ಯೋಚಿಸಬೇಕು. ಸಾಮಾಜಿಕ ಮಾನದಂಡಗಳನ್ನು ಲೆಕ್ಕಿಸದೆ ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಳ್ಳಬೇಕು.