ಕರ್ನಾಟಕ

karnataka

ETV Bharat / sukhibhava

ಹೋಳಿ 2023: ಆರೋಗ್ಯಯುತ ಹೋಳಿ ಆಚರಣೆಗೆ ಈ ಮುನ್ನೆಚ್ಚರಿಕೆ ಪಾಲಿಸಿ

ಹೋಳಿ ಹಬ್ಬದ ಸಂಭ್ರಮದ ಜೊತೆಗೆ ಚರ್ಮ ಸೇರಿದಂತೆ ಅನೇಕ ಅನಾರೋಗ್ಯದ ಸಮಸ್ಯೆಗೆ ಕೆಲವೊಮ್ಮೆ ಕಾರಣವಾಗುತ್ತದೆ. ಈ ಹಿನ್ನೆಲೆ ಕೆಲವು ಮುನ್ನೆಚ್ಚರಿಕೆ ವಹಿಸಬೇಕಿದೆ.

Holi 2023: Follow these precautions for a healthy Holi celebration
Holi 2023: Follow these precautions for a healthy Holi celebration

By

Published : Mar 6, 2023, 5:13 PM IST

ಹೈದರಾಬಾದ್​: ಚಿಕ್ಕವರು, ದೊಡ್ಡವರು ಎಂಬ ಬೇಧ - ಭಾವ ಇಲ್ಲದೇ ಎಲ್ಲರೂ ಸಂತಸದಿಂದ ಭಾಗಿಯಾಗುವ ಹಬ್ಬ ಹೋಳಿ. ಈ ರಂಗಿನಾಟ ಎಷ್ಟು ಸಂಭ್ರಮ ನೀಡುತ್ತದೆಯೋ ಅಷ್ಟೇ ಹಲವರಿಗೆ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೋಳಿ ಹಬ್ಬದಂದು ತಮ್ಮ ಆತ್ಮೀಯರೊಂದಿಗೆ ಬಣ್ಣದಾಟವಾಡುವ ಸಮಯದಲ್ಲಿ ಈ ಬಣ್ಣಗಳು ಅವರ ಕಣ್ಣು, ಕೂದಲಿಗೆ ಹಾನಿ ಮಾಡಬಹುದು. ಜೊತೆಗೆ ಈ ಹಬ್ಬದಂದು ಸೇವಿಸುವ ಪಕೋಡಾ ಸೇರಿದಂತೆ ಚಾಟ್​, ಭಾಂಗ್​ ಅಥವಾ ಆಲ್ಕೋಹಾಲ್​ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಇದರಿಂದಾಗಿ ಹೋಳಿ ಹಬ್ಬದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಕಡಿಮೆ ಇಲ್ಲ.

ಸೋಂಕಿನ ಸಮಸ್ಯೆ: ಈ ಸಂಬಂಧ ಮಾತನಾಡಿರುವ ಡಾ ರಾಜೇಶ್​ ಶರ್ಮಾ, ಈ ಹಬ್ಬದ ಸಂದರ್ಭದಲ್ಲಿ ಅನೇಕರು ಜನರು ಚರ್ಮದ ಸಮಸ್ಯೆ, ಉಸಿರಾಟ ಮತ್ತು ಹೊಟ್ಟೆ ಸೋಂಕಿನಿಂದ ಬಳಲುತ್ತಾರೆ. ವಾತಾವರಣದಲ್ಲಿನ ಬದಲಾವಣೆ ಕೂಡ ಕೆಲವರು ಈ ಸಂದರ್ಭದಲ್ಲಿ ಗಾಳಿಯಿಂದ ಹರಡುವ ವೈರಸ್​​ಗೆ ತುತ್ತಾಗುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಮಕ್ಕಳು ಮತ್ತು ಹಿರಿಯರ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.

ಮಕ್ಕಳನ್ನು ಈ ಹೋಳಿ ಆಡದಂತೆ ತಡೆಯಲು ಸಾಧ್ಯವಿಲ್ಲ. ಮಕ್ಕಳು ಪಿಚಕಾರಿ, ಬಣ್ಣ ಮತ್ತು ನೀರಿನ ಬಲೂನ್​ನಲ್ಲಿ ಈ ಸಂದರ್ಭದಲ್ಲಿ ಆಟವಾಡುತ್ತಾರೆ. ಈ ವೇಳೆ ಬಣ್ಣಗಳಿಂದ ತುಂಬಿದ ಕೈಯಲ್ಲೇ ಅವರು ನೀರು ಸೇರಿದಂತೆ ಆಹಾರ ಸೇವಿಸುತ್ತಾರೆ. ಇದರಿಂದ ಅವರ ದೇಹದಲ್ಲಿ ಕೀಟಾಣುಗಳು ಸೇರಿ, ಅವರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೊಟ್ಟೆ ನೋವಿನ ಸಮಸ್ಯೆ ಅತಿಯಾಗಿ ಕಾಡಬಹುದು.

ಜ್ವರ- ಶೀತದ ಬಗ್ಗೆ ಎಚ್ಚರಿಕೆ ಇರಲಿ;ಶೀತ ಮತ್ತು ಜ್ವರದ ಸೋಂಕಿನ ಹೊರತಾಗಿ ಹವಾಮಾನ ವಿಚಾರದಲ್ಲಿ ಎಚ್ಚರವಹಿಸುವುದು ಅವಶ್ಯ. ಇತ್ತೀಚಿನ ದಿನದಲ್ಲಿ ಕೋವಿಡ್​ -19ನಿಂದ ರೋಗ ನಿರೋಧಕ ಶಕ್ತಿ ಕೂಡ ದುರ್ಬಲವಾಗಿದ್ದು, ಅನಾರೋಗ್ಯದ ಪ್ರಕರಣ ಹೆಚ್ಚಾಗಿದೆ. ಅನೇಕ ಮಕ್ಕಳು ಜೀರ್ಣ ಸಮಸ್ಯೆ, ಆಯಾಸ ಮತ್ತು ವೀಕ್​ನೆಸ್​ನಿಂದ ಬಳಲುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಆರೋಗ್ಯ ಹದಗೆಡದಂತೆ ಕಾಪಾಡಲು ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಮಕ್ಕಳ ಡಯಟ್​ ಬಗ್ಗೆ ಹೆಚ್ಚಿನ ಬಗ್ಗೆ ಕಾಳಜಿವಹಿಸಬೇಕಿದೆ. ಸಾಧ್ಯವಾದಷ್ಟು ಮಟ್ಟಿಗೆ ಅವರಿ ಮನೆಯ ಊಟವನ್ನು ನೀಡಿ. ಮಕ್ಕಳು ಕೊಳಕಾದ ಕೈಗಳಿಂದ ಊಟವನ್ನು ಸೇವಿಸದಂತೆ ನೋಡಿಕೊಳ್ಳಿ. ಊಟ- ತಿಂಡಿಗೆ ಮೊದಲು ಮಕ್ಕಳು ಸೋಪಿನಿಂದ ಚೆನ್ನಾಗಿ ಕೈ ತೊಳೆಯುವಂತೆ ಮನವರಿಕೆ ಮಾಡಿಕೊಡಬೇಕಿದೆ.

ಬಣ್ಣದ ಕೈಯಿಂದ ತಿನ್ನಲು ಬಿಡಬೇಡಿ:ಮಕ್ಕಳಿಗೆ ಅತಿ ತಂಪು ಪಾನೀಯ, ಚಿಪ್ಸ್​, ಸಂಸ್ಕರಿಸಿದ ಮತ್ತು ಉಪ್ಪು ಭರಿತ ಅಹಾರ ಮತ್ತು ಸಿಹಿ ಹೆಚ್ಚಿಗೆ ನೀಡಬೇಡಿ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ಡ್ರೈ ಪ್ರೂಟ್ಸ್​​, ತಾಜಾ ಹಣ್ಣಿನ ರಸ ಮತ್ತು ಎಳನೀರು ಅನ್ನು ನೀಡಿ. ಪರ್ಮನೆಂಟ್​ ಮತ್ತು ಕೆಮಿಕಲ್​ ಯುಕ್ತ ಬಣ್ಣಗಳ ಬಳಕೆಯಿಂದ ಹಾನಿ ಆಗುವ ಕುರಿತು ಮಕ್ಕಳಿಗೆ ತಿಳಿ ಹೇಳಿ. ಹೋಳಿಯಲ್ಲಿ ಆಟವಾಡುವ ಮುನ್ನವೇ ಮಕ್ಕಳ ದೇಹಕ್ಕೆ ಎಣ್ಣೆ ಹಚ್ಚಿ, ಜೊತೆಗೆ ಅವರ ದೇಹವನ್ನು ಬಟ್ಟೆಯಿಂದ ಆದಷ್ಟು ಕವರ್​ ಆಗಿರುವಂತೆ ನೋಡಿಕೊಳ್ಳುವ ಮೂಲಕ ಚರ್ಮ ಮತ್ತು ಕೂದಲಿಗೆ ಹಾನಿ ತಡೆಗಟ್ಟುಬಹುದು.

ಹಸಿ ಬಟ್ಟೆಯಲ್ಲೇ ಮಕ್ಕಳನ್ನ ದೀರ್ಘಕಾಲ ಬಿಡಬೇಡಿ:ಮಕ್ಕಳನ್ನು ದೀರ್ಘಕಾಲದ ಕಾಲ ಹಸಿ ಬಟ್ಟೆಯಲ್ಲಿ ಬಿಡಬೇಡಿ. ಮಕ್ಕಳ ಜೊತೆಗೆ ದೊಡ್ಡವರೂ ಕೂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ. ದೊಡ್ಡವರು ಕೂಡ ಈ ಸಮಯದಲ್ಲು ಚರ್ಮದ ಸಮಸ್ಯೆ ಅಥವಾ ಜೀರ್ಣದ ಸಮಸ್ಯೆ ಕಾಡಬಹುದು. ಅಲ್ಲದೇ, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಆಲ್ಕೋಹಾಲ್​ ಸೇವನೆಯಿಂದಾಗಿ ರಸ್ತೆ ಅಪಘಾತ ಅಥವಾ ಇನ್ನಿತರ ಗಾಯಗಳಿಗೆ ಕಾಣಬಹುದಾಗಿದೆ. ದೀರ್ಘಕೋವಿಡ್​ ಲಕ್ಷಣವಿದ್ದವರಲ್ಲಿ ಹೃದಯದ ಬಡಿತ, ಉಸಿರಾಟದ ಸಮಸ್ಯೆ, ವೀಕ್​ನೆಸ್​ ಸೇರಿದಂತೆ ಇನ್ನಿತರ ಸಮಸ್ಯೆ ಕಾಡಲಿದೆ. ಜೊತೆಗೆ ಋತುಮಾನದ ವೈಪರೀತ್ಯದಿಂದ ಸೋಂಕು ತಗಲಿದ್ದು, ಈ ಸಂಬಂಧ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.

ಉಸಿರಾಟ ಸಮಸ್ಯೆ ಮತ್ತು ಚರ್ಮದ ಆಲರ್ಜಿ ತಪ್ಪಿಸಲು ಕೆಮಿಕಲ್​ ಹೊರತಾದ ಬಣ್ಣಗಳ ಬಳಕೆ ಮಾಡಿ. ಡಯಟ್​ನಲ್ಲಿ ಎಚ್ಚರಿಕೆ ಇರಲಿದೆ. ಸಿಹಿ, ಆಹಾರ ಸೇರಿದಂತೆ ಮುಂತಾದ ಆಹಾರ ಸೇವನೆಯಲ್ಲಿ ಎಚ್ಚರ ಇರಲಿ. ಡಯಾಬೀಟಿಸ್​, ಹೃದಯದ ಸಮಸ್ಯೆ ಅಥವಾ ಹೈಪರ್​ಟೆನ್ಷನ್​ ಸಮಸ್ಯೆಯಿಂದ ಮುಕ್ತಿ ಪಡೆಯಲು ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ನೀರುನ್ನು ಸೇವಿಸಿ.

ಇದನ್ನೂ ಓದಿ: ಈ ಬಾರಿಯ ಹೋಳಿ ಕಾಮ ದಹನಕ್ಕೆ ಶುಭ ಮೂಹೂರ್ತ ಯಾವುದು ಗೊತ್ತಾ..?

ABOUT THE AUTHOR

...view details