ನ್ಯೂಯಾರ್ಕ್: ಭೂಮಿಯ ಅತ್ಯಂತ ಶೀತ ಮತ್ತು ಶುಷ್ಕ ಖಂಡವಾಗಿರುವ ಅಂಟಾರ್ಟಿಕ ಇದೀಗ ಶಾಖದ ಅಲೆ ಮತ್ತು 2022ರಲ್ಲಿ ತೀವ್ರ ಮಳೆ ಕಂಡಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.
33ನೇ ವಾರ್ಷಿಕ ಹವಾಮಾನ ವರದಿಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ವಿಶ್ಲೇಷಣೆ ಕುರಿತು ಅಮೆರಿಕನ್ ಮೆಟ್ರೋಲಾಜಿಕಲ್ ಸೊಸೈಟಿಯಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ 2022ರಲ್ಲಿ ವಿಶ್ವವೂ ಕಾಣುತ್ತಿರುವ ವಿಪರೀತ ಹವಾಮಾನ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ವರದಿ ಮಾಡಿದೆ. ಈ ತಾಪಮಾನ ಏರಿಕೆ ಮತ್ತು ಸಮುದ್ರ ಮಟ್ಟದ ಏರಿಕೆಯಿಂದ ಅಂಟಾರ್ಟಿಕಾ ಕೂಡ ಹೊರತಾಗಿಲ್ಲ ಎಂದಿದೆ.
ಈ ಧ್ರುವ ಪ್ರದೇಶದಲ್ಲಿ ಸೂಕ್ಷ್ಮತೆ ಮತ್ತು ಸಂಕೀರ್ಣತೆಗಳನ್ನು ಸಾರ್ವಜನಿಕರು ನೋಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಂಶೋಧನಾ ಸಹಾಯಕರಾಗಿರುವ ರಾಜಶ್ರೀ ತ್ರಿ ದತ್ತ್ ತಿಳಿಸಿದ್ದಾರೆ. ಅಂಟಾರ್ಟಿಕಾ ಜಗತ್ತಿನಿಂದ ಪ್ರತ್ಯೇಕವಾಗಿದೆ ಎಂದು ಕಾಣಿಸುತ್ತದೆ. ಆದರೆ, ಹಿಮದ ಖಂಡದಲ್ಲಿ ಗಮನಾರ್ಹ ಬದಲಾವಣೆ ಆಗಿರುವುದರಿಂದ ಇದರ ಪರಿಣಾಮ ಜಗತ್ತಿನ ಮೇಲೆ ಆಗುತ್ತಿದೆ.
ನಮ್ಮ ಗ್ರಹದ ಬಹುತೇಕ ಶುದ್ದ ನೀರು ಅಂಟಾರ್ಟಿಕದ ಹಿಮಗಳು ಹಿಡಿದಿಟ್ಟುಕೊಂಡಿರುತ್ತದೆ. ಇಲ್ಲಿ ಆಗುವ ಪರಿಣಾಮ ಜಗತ್ತಿನ ಎಲ್ಲ ಕರಾವಳಿಗಳ ಮೇಲೆ ಬೀರುತ್ತದೆ. ಇದು ಕೃಷಿ ಸೇರಿದಂತೆ ಎಲ್ಲದರ ಮೇಲೆ ಪರಿಣಾಮವನ್ನು ಹೊಂದಿದೆ.
ಇತ್ತೀದಿನ ವರ್ಷಗಳಲ್ಲಿ ಸಮುದ್ರ ಮಟ್ಟದ ಏರಿಕೆ ಮತ್ತು ಹಿಮ ಕರಗುವಿಕೆಯನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇದು ತಾಪಮಾನದ ಪರಿಣಾ, ಪಶ್ಚಿಮ ಅಂಟಾರ್ಟಿಕಾದಂತಹ ಅಂಟಾರ್ಟಿಕಾ ಪ್ರದೇಶದ ಹಿಮಗಳು ಶೀಘ್ರದಲ್ಲಿ ಕರಗುತ್ತಿದ್ದು, ಸಮುದ್ರ ಮಟ್ಟ ಏರಿಕೆಗೆ ಕೊಡುಗೆ ನೀಡುತ್ತಿದೆ.