ಕರ್ನಾಟಕ

karnataka

ETV Bharat / sukhibhava

ಆರ್​ಟಿಪಿಸಿಆರ್​​ಗೆ ಪರ್ಯಾಯವಾದ ಪರೀಕ್ಷಾ ವಿಧಾನ ಪತ್ತೆ: ಅಗ್ಗ ಜೊತೆಗೆ ಸಾಮರ್ಥ್ಯದಾಯಕ - ಆರ್​ಟಿಪಿಸಿಆರ್​ ಪರೀಕ್ಷೆ ಮೊರೆ

ಈ ವಿಧಾನದ ಮೂಲಕವೂ ತೀವ್ರತರವಾದ ಸಾರ್ಸ್​- ಕೋವ್​-2 ಸೋಂಕನ್ನು ಪತ್ತೆ ಮಾಡಬಹುದಾಗಿದೆ ಇದಕ್ಕೆ ಆರ್​ಟಿಪಿಸಿಆರ್​ನಂತೆ ಕೌಶಲ್ಯಯುತ ಸಿಬ್ಬಂದಿಗಳ ಅಗತ್ಯವಿಲ್ಲ.

finding-an-alternative-test-method-to-rtpcr-cheap-as-well-as-efficient
finding-an-alternative-test-method-to-rtpcr-cheap-as-well-as-efficient

By

Published : Apr 6, 2023, 2:13 PM IST

ನವದೆಹಲಿ: ಕೋವಿಡ್​ ಸೋಂಕು ಮತ್ತು ಅದರ ಉಪತಳಿಗಳ ಪತ್ತೆಗೆ ಆರ್​ಟಿಪಿಸಿಆರ್​ ಪರೀಕ್ಷೆ ಮೊರೆ ಹೋಗಲಾಗುತ್ತಿತ್ತು. ಸೋಂಕಿತರ ಮೂಗು ಮತ್ತು ಗಂಟಲಿನ ಸ್ವಾಬ್​ ಪರೀಕ್ಷೆಯನ್ನು ಮಾಡುವಾಗ ಕಿರಿಕಿರಿ ಅನುಭವ ಆಗುತ್ತಿತ್ತು. ಇದೀಗ ಅದಕ್ಕೆ ಪರ್ಯಾಯ ಪರೀಕ್ಷೆಯನ್ನು ಕಂಡು ಹಿಡಿಯಲಾಗಿದ್ದು, ಇದರ ವೆಚ್ಚ ಕಡಿಮೆಯಾಗಿದ್ದು, ಮತ್ತು ಸೋಂಕು ಪತ್ತೆ ಪ್ರಕ್ರಿಯೆ ಕೂಡ ಸುಲಭದಾಯಕವಾಗಿದೆ. ಅದುವೆ ನ್ಯೂಟರಲ್​ ಫ್ಲೂ ಇಮ್ಯುನೊಅಸ್ಲೇ (ಇಎಲ್​ಐಎಸ್​ಎ). ಈ ವಿಧಾನದ ಮೂಲಕವೂ ತೀವ್ರತರವಾದ ಸಾರ್ಸ್​- ಕೋವ್​-2 ಸೋಂಕನ್ನು ಪತ್ತೆ ಮಾಡಬಹುದಾಗಿದೆ ಇದಕ್ಕೆ ಆರ್​ಟಿಪಿಸಿಆರ್​ನಂತೆ ಕೌಶಲ್ಯಯುತ ಸಿಬ್ಬಂದಿಗಳ ಅಗತ್ಯವಿಲ್ಲ. ಸುಲಭದಾಯಕವಾಗಿದೆ

ಏನಿದು ಪರ್ಯಾಯ ವಿಧಾನ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅನುಸಾರ, ಇದು ಸಾರ್ಸ್​-ಕೋವ್​-2ನ ಆರ್​ಬಿಡಿ ಆ್ಯಂಟಿಜೆನ್ ಪ್ರತಿಜನಕವನ್ನು ಸೋಂಕಿನ ಆರಂಭದಲ್ಲಿ ಪತ್ತೆ ಹಚ್ಚುತ್ತದೆ. ಆರ್​ಟಿಪಿಸಿಆರ್​ ನಂತೆ ಇಎಲ್​ಐಎಸ್​ಎ ಗುಣಮಟ್ಟದ ಸೋಂಕಿನ ಪರೀಕ್ಷೆ ಪ್ರಕ್ರಿಯೆಯಾಗಿದೆ. ಆರ್​ಟಿ ಪಿಸಿಆರ್​ ಕೌಶಲ್ಯಾಧರಿದ ತರಬೇತುದಾರರು ಸುಧಾರಿತ ಸಾಧನಗಳು ಇದಕ್ಕೆ ಬೇಕಿದ್ದು, ಸ್ಥಳದಲ್ಲೇ ಇದನ್ನು ಪತ್ತೆ ಮಾಡುವುದು ಅಸಾಧ್ಯ ​ವಾಗಿತ್ತು. ಈ ಸವಾಲುಗಳಿಂದ ಇದೀಗ ಹೊರ ಬಂದಿದ್ದು, ನ್ಯಾಷನಲ್​ ಇನ್ಸ್​​ಟಿಟ್ಯೂಟ್​ ಆಫ್​ ಅನಿಮಲ್​ ಬಯೋಟೆಕ್ನಾಲಜಿ- ಡಿಬಿಟಿ ಮತ್ತು ಗಾಂಧಿ ಮೆಡಿಕಲ್​ ಕಾಲೇಜ್​ ರುಬೊಸ್ಟೊ ವಿಧಾನವನ್ನು ಪತ್ತೆ ಮಾಡಿದೆ. ಇದು ಕೂಡ ಆರಂಭಿಕ ಹಂತದ ಸಾರ್ಸ್​ ಕೋವ್​-2 ಸೋಂಕನ್ನು ಪತ್ತೆ ಮಾಡಲಿದೆ.

ಇದರ ಗುಣಾತ್ಮಕ ವಿಶ್ಲೇಷಣೆಗೆ ಸ್ಮಾರ್ಟ್​ ಫೋನ್​ ಅಪ್ಲಿಕೇಷನ್​ (ಕಲರ್​ ಗ್ರಾಬ್​) ಅನ್ನು ಬಳಸಲಾಗಿದೆ. ನುರಿತ ತಜ್ಞರ ಅವಶ್ಯಕತೆ ಇಲ್ಲದೇ ಸೋಂಕನ್ನು ಇದರಲ್ಲಿ ಪತ್ತೆ ಮಾಡಬಹುದು. ವಿಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಸ್ಥೆಯಾದ ಎಸ್​ಇಆರ್​ಬಿ, ಆರ್​ಬಿಡಿ ಪ್ರೊಟೀನ್​ ಅಭಿವ್ಯಕ್ತಿಗೆ ಕಾರಣವಾದ ಜೀನ್​ ಅನ್ನು ಕ್ಲೋನ್​ ಮಾಡಿ ಪ್ರತಿಕಾಯ ಉತ್ಪಾದಿಸಲು ಮೊನೊಡಿಸ್ಪರ್ಸ್​ ನ್ಯಾನೊ ಪರ್ಟಿಕಲ್ಸ್​ ಅನ್ನು ಬಳಸಿದರು.

ಪರೀಕ್ಷೆ ಹೇಗೆ? ಈ ಫ್ಯಾಬ್ರಿಕೇಟ್​ ಎಲ್​ಎಫ್​ಐಎ ಸ್ಯಾಂಡ್​ವಿಚ್​ ಫಾರ್ಮೆಟ್​ನಲ್ಲಿ ಕೆಲಸ ಮಾಡಿದೆ. ಆರ್​​ಬಿಡಿ ಸರಳ ಪ್ರೊಸಿಡ್ಸ್​ ಗೋಲ್ಡ್​​ ನ್ಯಾನೊಪಾರ್ಟಿಲ್​ ಸಂಯೋಜಿತ ಆರ್​ಬಿಡಿ ಪ್ರತಿಕಾಯದೊಂದಿಗೆ ಸಂಕೀರ್ಣವನ್ನು ರೂಪಿಸುತ್ತದೆ. ಈ ಹೊಸ ವಿಧಾನ ವಿಶ್ಲೇಷಣೆ ಮತ್ತು ವಿಧಾನ ಸರಳವಾದ ಸ್ಮಾರ್ಟ್​ಫೋನ್​ ಆಧಾರಿತ ಅಪ್ಲಿಕೇಷನ್​ ಅನ್ನು ಬಳಸಿಕೊಂಡು ಪರೀಕ್ಷಾ ಸಾಲಿನ ಬ್ಯಾಂಡ್ ತೀವ್ರತೆ ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ. ಇದು ಯಾವುದೇ ಬಣ್ಣದ ಡೇಟಾವನ್ನು ಅದರ ಮೂರು ಪ್ರಾಥಮಿಕ ಬಣ್ಣ ಘಟಕಗಳಾಗಿ ವಿಭಜಿಸುತ್ತದೆ - ಕೆಂಪು, ಹಸಿರು ಮತ್ತು ನೀಲಿ. ಪ್ರತಿಯೊಂದು ಬಣ್ಣವೂ ಅದರ ಸಂಬಂಧಿಸಿದ ತೀವ್ರತೆಯನ್ನು ಸೂಚಿಸುತ್ತದೆ. ಈ ಅಧ್ಯಯನವನ್ನು ಜರ್ನಲ್​ ಆಫ್​​ ಮೆಡಿಕಲ್​ ವೈರೊಲಾಜಿಯಲ್ಲಿ ಪ್ರಕಟಿಸಲಾಗಿದೆ.

ಈ ಎಲ್​ಎಫ್​ಐಎ ಸ್ಟ್ರಿಪ್​​ ಪ್ರಯೋಜನಕಾರಿಯಾಗಿದ್ದು, ಸುಲಭವಾಗಿ ಎಲ್ಲಿಯಾದರೂ ಕೊಂಡೊಯ್ಯಬಹುದಾಗಿದೆ. ಜೊತೆ ಸ್ಥಳದಲ್ಲೇ ಇದನ್ನು ಪತ್ತೆ ಮಾಡಬಹುದು. ಅಲ್ಲದೇ ಆರ್​ಟಿ-ಪಿಸಿಆರ್​​ ಪರೀಕ್ಷೆಗಿಂತಲೂ ಈ ಎಲ್​ಎಫ್​ಐಎ ವೆಚ್ಚ ಕಡಿಮೆಯಾಗಿದ್ದು, ಕೈಗೆಟುಕುವ ದರ ಹೊಂದಿದೆ.

ಇದನ್ನೂ ಓದಿ: ತ್ಯಾಜ್ಯದಿಂದ ಗಾರ್ಡನ್​ನಲ್ಲಿ ತಲೆ ಎತ್ತಿದ ವಿವಿಧ ಕಲಾಕೃತಿಗಳು

ABOUT THE AUTHOR

...view details