ಕರ್ನಾಟಕ

karnataka

ETV Bharat / sukhibhava

ಈ ವರ್ಷದ ಮೊದಲ 9 ತಿಂಗಳು ಪ್ರತಿನಿತ್ಯ ಹವಾಮಾನ ವೈಪರೀತ್ಯ ಅನುಭವಿಸಿದ ಭಾರತ!

Report says India saw extreme weather situations this year: ಭಾರತ ಕಳೆದ 273 ದಿನಗಳ ಪೈಕಿ 235 ದಿನಗಳ ಕಾಲ ತೀವ್ರ ಸ್ವರೂಪದ ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಿದೆ. ಮಧ್ಯಪ್ರದೇಶ ಈ ರೀತಿಯ ಘಟನೆಯನ್ನು (138) ಹೆಚ್ಚು ಅನುಭವಿಸಿದೆ ಎಂದು ವರದಿಯಾಗಿದೆ.

extreme weather disaster event in india this year
extreme weather disaster event in india this year

By ETV Bharat Karnataka Team

Published : Nov 29, 2023, 12:57 PM IST

ನವದೆಹಲಿ: ಈ ವರ್ಷಾರಂಭದ ಮೊದಲ ಒಂಭತ್ತು ತಿಂಗಳಲ್ಲಿ ಪ್ರತಿನಿತ್ಯವೂ ಶೀತಗಾಳಿ, ಚಂಡಮಾರುತ, ಗುಡುಗು-ಮಿಂಚಿನಿಂದ ಕೂಡಿದ ಮಳೆ, ಪ್ರವಾಹ, ಭೂ ಕುಸಿತದಂತಹ ಒಂದಲ್ಲೊಂದು ರೀತಿಯ ಹವಾಮಾನ ವೈಪರೀತ್ಯವನ್ನು ಭಾರತ ದೇಶ ಕಂಡಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ತಿಳಿಸಿದೆ.

ಜನವರಿ 1ರಿಂದ ಸೆಪ್ಟೆಂಬರ್​ 30ರವರೆಗೆ ದೇಶದಲ್ಲಿ ಈ ರೀತಿಯ ಘಟನೆಗಳು ಜರುಗಿವೆ. ಇದರಿಂದ ಶೇ 86ರಷ್ಟು ಪರಿಣಾಮ ಕಂಡುಬಂದಿದೆ. ಈ ವಿಪತ್ತುಗಳು 2,923 ಜನರ ಪ್ರಾಣ ಹಾನಿಗೂ ಕಾರಣವಾಗಿವೆ. 1.84 ಮಿಲಿಯನ್​ ಹೆಕ್ಟೇರ್​​ ಬೆಳೆ ಪ್ರದೇಶ ಮತ್ತು 80 ಸಾವಿರ ಮನೆಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೇ 92 ಸಾವಿರ ಜಾನುವಾರುಗಳನ್ನು ಆಪೋಷನ ಪಡೆದಿದೆ. ಇದಕ್ಕಿಂತ ಹೆಚ್ಚು ಅಚ್ಚರಿಯ ಅಂಶವೆಂದರೆ ಈ ಎಲ್ಲಾ ಲೆಕ್ಕಾಚಾರ ನಗಣ್ಯವಾಗಿದೆ. ಏಕೆಂದರೆ ಇದರಲ್ಲಿ ಸಾರ್ವಜನಿಕ ಆಸ್ತಿ/ಕೃಷಿ ನಷ್ಟ ಲೆಕ್ಕ ಇಲ್ಲ!.

ಈ ಅಂಕಿಅಂಶಗಳನ್ನು ಸಿಎಸ್‌ಇ ಮತ್ತು ಡೌನ್ ಟು ಅರ್ಥ್ ಮ್ಯಾಗಜೀನ್‌ ಕಲೆ ಹಾಕಿದೆ. 2023ರಲ್ಲಿ ದೇಶದಲ್ಲಿ ವಿಪರೀತ ಹವಾಮಾನ ಘಟನೆಗಳು ನ್ಯೂ ಪ್ರಿ ಸಿಒಪಿ28 ಮೌಲ್ಯಮಾಪನದ ಭಾಗವಾಗಿದೆ. ಇದನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಇಂಡಿಯಾ 2023: ಆ್ಯನ್​ ಅಸೆಸ್​ಮೆಂಟ್​ ಆಫ್​ ಎಕ್ಸಿಟ್ರೀಮ್​ ವೆದರ್​ ಈವೆಂಟ್​ ಲೇಖನ ದೇಶದಲ್ಲಿ ವಿಪರೀತ ಹವಾಮಾನ ಘಟನೆಗಳು ಆವರ್ತನ ಮತ್ತು ಭೌಗೋಳಿಕತೆಯ ಮೇಲೆ ವಿಸ್ತರಿಸುತ್ತಿರುವುದಕ್ಕೆ ಸಾಕ್ಷ್ಯ ನೀಡಿದೆ. ಈ ಮೌಲ್ಯಮಾಪನದಲ್ಲಿ 2023ರಲ್ಲಿ ದೇಶದಲ್ಲಾಗಿರುವ ಘಟನೆಗಳು ಜಾಗತಿಕ ತಾಪಮಾನದಲ್ಲಿ ಹೊಸ ಅಸಹಜ ಬೆಳವಣಿಗೆ ಎಂದು ತೋರಿಸಿದ್ದಾಗಿ ಸಿಎಸ್​ಇ ಪ್ರಧಾನ ನಿರ್ದೇಶಕ ಸುನೀತ್​ ನರೈನ್​ ತಿಳಿಸಿದ್ದಾರೆ.

ಭಾರತ 273 ದಿನದಲ್ಲಿ 235 ದಿನಗಳ ಕಾಲ ವಿಪರೀತ ಹವಾಮಾನ ಬದಲಾವಣೆಯನ್ನು ಅನುಭವಿಸಿದೆ. ಮಧ್ಯಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚು. ಆದರೆ, ಅತಿ ಹೆಚ್ಚು ಜನ ಸಾವನ್ನಪ್ಪಿರುವುದು (642) ಬಿಹಾರದಲ್ಲಿ. ಹಿಮಾಚಲ​ ಪ್ರದೇಶದಲ್ಲಿ 365 ಮತ್ತು ಉತ್ತರ ಪ್ರದೇಶದಲ್ಲಿ 341 ಸಾವು ದಾಖಲಾಗಿದೆ.

ಪಂಜಾಬ್​ನಲ್ಲಿ ಅತಿ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದ್ದು, ಹಿಮಾಚಲ್​ ಪ್ರದೇಶದಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇನ್ನು ದಕ್ಷಿಣದ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಪರೀತ ಹವಾಮಾನದ ದಿನ (67) ದಾಖಲಾಗಿದೆ. ಇದರಲ್ಲಿ 60 ಸಾವು ದಾಖಲಾಗಿದೆ. ತೆಲಂಗಾಣದಲ್ಲಿ 62 ಸಾವಿರ ಹೆಕ್ಟೇರ್​​ ಬೆಳೆ ನಾಶವಾಗಿದ್ದು, 645 ಪ್ರಾಣಿಗಳು ಸಾವನ್ನಪ್ಪಿವೆ. 11 ಸಾವಿರ ಮನೆಗಳು ನಾಶವಾಗಿವೆ. ಕರ್ನಾಟಕ ಕೂಡ ಈ ಎಲ್ಲಾ ಘಟನೆಗಳಿಂದ ಹೊರಗುಳಿದಿಲ್ಲ.

ವಾಯುವ್ಯ ಭಾರತದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ತಾಮಮಾನ (113) ದಿನಕ್ಕೆ ಸಾಕ್ಷಿಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್​, ಹರಿಯಾಣ, ಉತ್ತರಾಖಂಡ್​ ಮತ್ತು ರಾಜಸ್ಥಾನ ಕೂಡ ಕೆಟ್ಟ ಹವಾಮಾನಕ್ಕೆ ಗುರಿಯಾಗಿದೆ.

ಪೂರ್ವ ಮತ್ತು ಈಶಾನ್ಯ ರಾಜ್ಯದಲ್ಲಿ ಅಸ್ಸಾಂನಲ್ಲಿ 102 ಘಟನೆಗಳು ಘಟಿಸಿದ್ದು, 159 ಪ್ರಾಣಿಗಳು ಸಾವನ್ನಪ್ಪಿವೆ. 48 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ನಾಗಾಲ್ಯಾಂಡ್​ನಲ್ಲಿ 1,900 ಮನೆಗಳು ನಾಶವಾಗಿವೆ.

ಸರಾಸರಿಗಿಂತ ಜನವರಿ ಕೊಂಚ ಬೆಚ್ಚಗಿನ ತಿಂಗಳಾಗಿದೆ. ಫೆಬ್ರವರಿಯಲ್ಲಿ 122 ವರ್ಷಗಳಲ್ಲಿ ದಾಖಲಾದ ಅತಿ ಬೆಚ್ಚಿಗಿನ ಮಾಸ. ಇದು ಹೆಚ್ಚು ಒಣ ತಿಂಗಳಾಗಿದೆ. ಆಗಸ್ಟ್​ ಕೂಡ 122 ವರ್ಷಗಳಲ್ಲೇ ಅತಿ ಹೆಚ್ಚು ಒಣ ಮಾಸವಾಗಿದೆ.

2022ಕ್ಕೆ ಹೋಲಿಸಿದರೆ 2023 ಹೆಚ್ಚು ವಿನಾಶವನ್ನು ಕಂಡಿದೆ ಎಂದು ವರದಿ ತಿಳಿಸಿದೆ. 2023ರಲ್ಲಿ ಇಡೀ ದೇಶದಾದ್ಯಂತ ಕೆಟ್ಟ ಹವಾಮಾನ ವೈಪರೀತ್ಯ ಅನುಭವಕ್ಕೆ ಬಂದಿದೆ. ಕಳೆದ ವರ್ಷ 34 ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಪರಿಣಾಮ ಕಂಡಿದೆ ಎಂದು ಸಿಎಸ್​ಇಯ ಪರಿಸರ ಸಂಪನ್ಮೂಲ ಘಟಕದ ಯೋಜನಾ ನಿರ್ದೇಶಕ ಕಿರಣ್​ ಪಾಂಡೆ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಅಮೆರಿಕದತ್ತ ತೆರಳುತ್ತಿರುವ ವಾಂಪೈರ್​ ಬಾವಲಿಗಳು; ರೇಬೀಸ್​ ಭೀತಿ

ABOUT THE AUTHOR

...view details