ಚಳಿಗಾಲದಲ್ಲಿ ಒಣತ್ವಚೆ ಮತ್ತು ಡ್ಯಾಂಡ್ರಪ್ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಅಧಿಕ ಚಳಿಯಿಂದಾಗಿ ಚರ್ಮವೂ ಬಹುಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಚರ್ಮವೂ ಬಿರಿಯುತ್ತದೆ. ಇದರಿಂದಾಗಿ ಮುಖದ ಅಂದಕ್ಕೂ ಹಾನಿಯಾಗುತ್ತದೆ. ಇದರ ಜೊತೆಗೆ ಕೂದಲು ಕೂಡ ಒಣಗಿ, ಸೀಳಾಗುತ್ತದೆ. ತಲೆ ಹೊಟ್ಟಿನ ಸಮಸ್ಯೆ ಅಧಿಕವಾಗಿರುತ್ತದೆ. ಚಳಿಗಾಲದ ಈ ಸಮಸ್ಯೆಗಳಿಗೆ ತಜ್ಞರು ಕೆಲವು ಸಲಹೆ ಮತ್ತು ಪರಿಹಾರಗಳನ್ನು ತಿಳಿಸಿದ್ದಾರೆ.
ಚರ್ಮದ ಆರೈಕೆ..
- ಚಳಿ ಅಧಿಕ ಎಂದು ಅತಿ ಹೆಚ್ಚು ಕಾಲ ಬಿಸಿಲಿನಲ್ಲಿರುವುದು ಒಳ್ಳೆಯದಲ್ಲ. ಇದು ಸನ್ ಅಲರ್ಜಿಗೆ ಕಾರಣವಾಗುತ್ತದೆ.
- ಸ್ನಾನಕ್ಕೆ ಅತಿ ಬಿಸಿ ಮತ್ತು ಅತಿ ತಣ್ಣಗಿನ ನೀರಿನ ಬದಲು ಬೆಚ್ಚಗಿನ ನೀರು ಬಳಸಿ
- ಚಳಿಗಾಲದಲ್ಲೂ ಸನ್ಸ್ಕ್ರೀನ್ ಅನ್ನು ತಪ್ಪದೇ ಬಳಕೆ ಮಾಡಿ
- ಮಾಶ್ಚರೈಸರ್ ಅನ್ನು ಬಳಕೆ ಮಾಡಿ. ಸ್ನಾನ ಅಥವಾ ಮುಖ ತೊಳೆದ ಬಳಿಕ ಮಖ, ಕೈ, ಕಾಲಿಗೆ ಮಾಶ್ಚರೈಸರ್ ಬಳಕೆ ಮಾಡುವುದು ಉತ್ತಮ.
- ಚಳಿ ಮತ್ತು ಅತಿ ಹೆಚ್ಚಿನ ಶಾಖದಿಂದ ಚರ್ಮವನ್ನು ಮುಚ್ಚಿಕೊಳ್ಳುವುದು ಉತ್ತಮ
- ಚರ್ಮದ ಮೇಲೆ ಪರಿಣಾಮ ಬೀರುವ ಒರಟಾದ ಸೋಪ್ ಬಳಕೆ ಬೇಡ. ಗ್ಲಿಸರಿನ್ ಸೋಪ್ ಬಳಕೆ ಉತ್ತಮ.
- ಚರ್ಮ ತುಂಬ ಒಣಗಿದೆ ಎನಿಸಿದರೆ ಥಿಕ್ ಮಾಶ್ಚರೈಸರ್ ಬಳಸಿ
- ದೇಹದಲ್ಲಿನ ನಿರ್ಜಲೀಕರಣದಿಂದಲೂ ಕೂಡ ಚರ್ಮ ಒಣಗುತ್ತದೆ. ಅಂತಹ ವೇಳೆ ಜ್ಯೂಸ್ನಂತಹ ನೀರಿನ ಪಾನೀಯ ಸೇವಿಸಿ.
- ಧೂಮಪಾನ ಕೂಡ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಇಂತಹ ಕಟ್ಟ ಅಭ್ಯಾಸಗಳನ್ನು ಕಡಿಮೆ ಮಾಡುವುದು ಉತ್ತಮ
- ಹೆಚ್ಚಿನ ಒತ್ತಡ ತೆಗೆದುಕೊಳ್ಳಬೇಡಿ.
- ಹೆಚ್ಚೆಚ್ಚು ನೀರು ಕುಡಿಯಿರಿ.