ಕರ್ನಾಟಕ

karnataka

ETV Bharat / sukhibhava

ರೆಟಿನಾದಲ್ಲಿ ಕೊಲೆಸ್ಟ್ರಾಲ್​ಗೆ ಕಾರಣವಾಗುತ್ತೆ ಮಧುಮೇಹ; ಇದರಿಂದ ದೃಷ್ಟಿಗೆ ಹಾನಿ ಎನ್ನುತ್ತಿದೆ ಅಧ್ಯಯನ

ಡಯಾಬಿಟಿಕಲ್ ರೆಟಿನೋಪತಿ ಮಧುಮೇಹದ ಗಂಭೀರವಾಗಿ ಕಣ್ಣಿನ ದೃಷ್ಟಿಗೆ ಬೆದರಿಕೆವೊಡ್ಡುವ ಸಮಸ್ಯೆಯಾಗಿದ್ದು, ಇದು ಶಾಶ್ವತವಾಗಿ ದೃಷ್ಟಿ ಹಾನಿ ಮತ್ತು ಕುರುಡುತನಕ್ಕೆ ಕಾರಣವಾಗಬಹುದು ಎಂಬ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ.

Diabetes builds up cholesterol on the retina; It damages the eyesight
Diabetes builds up cholesterol on the retina; It damages the eyesight

By ETV Bharat Karnataka Team

Published : Sep 6, 2023, 5:12 PM IST

ನ್ಯೂಯಾರ್ಕ್​:ಮಧುಮೇಹ, ವಯಸ್ಸಿಗೆ ಸಂಬಂಧಿತ ಆರೋಗ್ಯ ಸಮಸ್ಯೆ ಮತ್ತಿತರೆ ಚಯಾಪಚಯ ಸಮಸ್ಯೆಗಳು ರೆಟಿನಾದಲ್ಲಿ ಕೊಲೆಸ್ಟ್ರಾಲ್​ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದು ದೃಷ್ಟಿಗೋಚರತೆ ಮತ್ತು ಡಯಾಬಿಟಿಕಲ್​ ರೆಟಿನೋಪತಿಗೆ ಅಭಿವೃದ್ಧಿಗೆ ಕಾರಣವಾಗಬಹುದು. ಡಯಾಬಿಟಿಕಲ್ ರೆಟಿನೋಪತಿ ಮಧುಮೇಹದ ಗಂಭೀರವಾಗಿ ಕಣ್ಣಿನ ದೃಷ್ಟಿಗೆ ಬೆದರಿಕೆವೊಡ್ಡುವ ಸಮಸ್ಯೆಯಾಗಿದ್ದು, ಇದು ಶಾಶ್ವತವಾಗಿ ದೃಷ್ಟಿ ಹಾನಿ ಮತ್ತು ಕುರುಡುತನಕ್ಕೆ ಕಾರಣವಾಗಬಹುದು.

ಅಮೆರಿಕದ ಮಿಚಿಗನ್​ ಸ್ಟೇಟ್​ ಯುನಿವರ್ಸಿಟಿ ಈ ಅಧ್ಯಯನ ನಡೆಸಿದೆ. ಕ್ರಿಸ್ಟಲೈಸಡ್​ ಡೆಪೊಸಿಟ್​​ ಪ್ರತಿಫಲಿತವಾಗಿದ್ದು, ಇದರ ಇಮೇಜ್​ ಅನ್ನು ರೇಟಿನಾದಲ್ಲಿ ಕಾಣಬಹುದಾಗಿದೆ. ಇದು ಮುಖ್ಯ ಯಾಕೆ ಎಂದರೆ ಇದು ಆಕ್ರಮಣಶೀಲವಲ್ಲದ ರೆಟಿನಾ ಆಪ್ಟೋಮೆಟ್ರಿಸ್ಟ್‌ಗನ್ನು ಹೊಂದಿದೆ. ಇದು ಮೊದಲೇ ರೋಗ ನಿರ್ಣಯದ ಅವಕಾಶವನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಡಯಬೀಟೊಲೊಜಿಯಾ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ

ಕುರುಡುತನಕ್ಕೆ ಕಾರಣವಾಗುವ ರೆಟಿನೊಪತಿ ಎಂಬುದು ತಡೆಗಟ್ಟಬಹುದಾದ ಕುರುಡುತನವಾಗಿದ್ದು, ಟೈಪ್​ 1 ಮತ್ತು ಟೈಪ್​ 2 ಮಧುಮೇಹ ಭೀತಿಯನ್ನು ಹೊಂದಿದೆ ಎಂದು ಎಂಎಸ್​ಯು ಪ್ರೊಫೆಸರ್​ ಜುಲಿಯಾ ಬುಸಿಕ್​ ತಿಳಿಸಿದ್ದಾರೆ. ಮಧುಮೇಹದ 20 ವರ್ಷದ ಅಭಿವೃದ್ಧಿಯಲ್ಲಿ ಟೈಪ್​ 1 ಅಥವಾ ಟೈಪ್​ 2 ಮಧುಮೇಹ ಹೊಂದಿರುವ ವ್ಯಕ್ತಿ ಸ್ವಲ್ಪ ಪ್ರಮಾಣದ ರೆಟಿನೊಪತಿಯನ್ನು ಹೊಂದಿರುತ್ತದೆ. ಪ್ರಸ್ತುತ ಚಿಕಿತ್ಸೆ ತುಂಬಾ ಆಕ್ರಮಣಕಾರಿ ಮತ್ತು ರೆಟಿನೋಪತಿಯ ನೇರ ಚಿಕಿತ್ಸೆಯ ಕೊನೆ ಹಂತವಾಗಿದೆ.

ಅಧ್ಯಯನದಲ್ಲಿ ಸಂಶೋಧಕರು ಕೊಲೆಸ್ಟ್ರಾಲ್​ ಕ್ರಿಸ್ಟಲ್ಸ್​ ಪತ್ತೆ ಮಾಡಿದ್ದಾರೆ. ಈ ಕ್ರಿಸ್ಟಲ್​ಗಳು ಹೃದಯಾಘಾತಕ್ಕೆ ಕಾರಣವಾಗುವ ಅರ್ಥರೊಸ್ಕೆರೊಟಿಲ್​ ಪ್ಲಕ್ಯೂವನ್ನು ಹೊಂದಿದೆ. ಕಾರ್ಡಿಯಾಲಾಜಿಯ ಎಂಎಸ್​ಯು ವಿಭಾಗದ ಮುಖ್ಯಸ್ಥ ಜಾರ್ಜ್​ ಅಬೆಲಾ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯನ್ನು ಸ್ಕ್ಯಾನಿಂಗ್ ಬಳಸಿಕೊಂಡು ರೆಟಿನಾಗಳನ್ನು ಸ್ಕ್ಯಾನ್ ಮಾಡುವ ಮಾರ್ಗಗಳನ್ನು ಪತ್ತೆ ಮಾಡಲು ತಂಡಕ್ಕೆ ಸಹಾಯ ಮಾಡಿದರು. ಇದು ಸ್ಫಟಿಕಗಳ ಸಂಯೋಜನೆಯನ್ನು ವಿಶ್ಲೇಷಿಸಲು ಸಂಶೋಧಕರಿಗೆ ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇದ್ದಾಗ ಉಂಟಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ರೆಟಿನಾ ಎಂಬುದು ಮಿದುಳಿನಂತೆ ಪ್ರತ್ಯೇಕವಾಗಿರುವ ಅಂಗಾಂಶವಾಗಿದೆ. ದೇಹದ ಉಳಿದ ಭಾಗಗಳಿಂದ ಅವುಗಳನ್ನು ಪ್ರತ್ಯೇಕಿಸುವ ರಕ್ತದ ತಡೆಗೋಡೆಯನ್ನು ಹೊಂದಿವೆ. ಇದೇ ಕಾರಣದಿಂದ ರೆಟಿನಾವನ್ನು ಅಧ್ಯಯನ ಮಾಡುವುದು ಕಷ್ಟವಾಗಿದೆ. ಡಯಾಬಿಟಿಕ್ ರೆಟಿನೋಪತಿಯ ಪ್ರಸ್ತುತ ಆಯ್ಕೆಗಳಿಗಿಂತ ಕೊಲೆಸ್ಟ್ರಾಲ್‌ನಿಂದ ರೂಪುಗೊಂಡ ಕ್ರಿಸ್ಟಲ್​ ನಿವಾರಣೆಗೆ ಕಡಿಮೆ ಆಕ್ರಮಣಕಾರಿ ಹೊಸ ಚಿಕಿತ್ಸೆಯಾಗಿದೆ ಎಂದು ಅಧ್ಯಯನವೂ ಭರವಸೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮನೆಯಲ್ಲೇ ಸಿಗುವ ಈ ನೈಸರ್ಗಿಕ ವಸ್ತುಗಳಿಂದ ಕೂದಲಿಗೆ ಮಾಡಿ ನಿಮಿಷ್ಟದ ಕಲರ್​!

ABOUT THE AUTHOR

...view details