ಕರ್ನಾಟಕ

karnataka

ETV Bharat / sukhibhava

ಕೋವಿಡ್​ ರೋಗಿಗಳಲ್ಲಿ ವ್ಯಾಯಾಮ ಮಾಡುವ ಸಾಮರ್ಥ್ಯ ಕ್ಷೀಣಿಸಿದೆ: ಅಧ್ಯಯನ - ಕೆಲವರು ಕೋವಿಡ್​ 19 ಪರಿಣಾಮದಿಂದ ದೀರ್ಘವಾಗಿ

ಕೋವಿಡ್​ಗಿಂತ ಮುನ್ನ ಹೋಲಿಕೆ ಮಾಡಿದಾಗ ಸೋಂಕಿನ ಬಳಿಕ ವ್ಯಕ್ತಿಯ ವ್ಯಾಯಾಮ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿದೆ.

Decreased ability to exercise in covid patients
Decreased ability to exercise in covid patients

By

Published : May 25, 2023, 1:54 PM IST

ಕೆಲವರು ಸಾರ್ಸ್​-ಕೋವ್​-2 ಸೋಂಕಿನಿಂದ ಚೇತರಿಕೆ ಕಾಣಲು ಸಮರ್ಥರಾಗಿದ್ದರೆ, ಮತ್ತೆ ಕೆಲವರು ಕೋವಿಡ್​ ಪರಿಣಾಮದಿಂದ ದೀರ್ಘವಾಗಿ ಬಳಲುತ್ತಾರೆ. ಕೋವಿಡ್​ ದೀರ್ಘವಾಧಿ ಲಕ್ಷಣ ಹೊಂದಿರುವವರಲ್ಲಿ ವ್ಯಾಯಾಮದ ಸಾಮರ್ಥ್ಯಗಳು ಕೂಡ ಗಣನೀಯ ಮಟ್ಟದಲ್ಲಿ ಕಂಡು ಬರುವುದಿಲ್ಲ. ಈ ಬಗ್ಗೆ ಇನ್ನೂ ಉತ್ತರ ಸ್ಪಷ್ಟವಾಗಿಲ್ಲ. ಯಾಕೆ ಕೋವಿಡ್​ ರೋಗಿಗಳು ತಮ್ಮ ವ್ಯಾಯಾಮ ಸಾಮರ್ಥ್ಯವನ್ನು ಕಡಿಮೆ ಮಾಡಿದ್ದಾರೆ ಎಂಬ ಕುರಿತು ಅಮೆರಿಕ ಸ್ಯಾನ್​ ಪ್ರೋನ್ಸಿಸ್ಕೋ ಸಂಶೋಧಕರ ತಂಡ ಅಧ್ಯಯನ ನಡೆಸಿದೆ.

ಜರ್ನಲ್​ ಆಫ್​ ಇನ್​ಫೆಕ್ಷನ್​ ಡಿಸೀಸ್​ ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ದೀರ್ಘ ಕೋವಿಡ್​ ರೋಗಿಗಳು ನಿರೀಕ್ಷೆಗಿಂತ ಕಡಿಮೆ ವ್ಯಾಯಾಮ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಕಾಲಾನುಕ್ರಮದ ಅಸಮರ್ಥತೆ. ಅಂದರೆ, ವ್ಯಾಯಮದ ವೇಳೆ ಹೃದಯ ಬಡಿತ ಅಸಮಪರ್ಕವಾಗಿ ಹೆಚ್ಚುವುದು ಆಗಿದೆ. ಜೊತೆಗೆ ಅವರ ವ್ಯಾಯಾಮ ಸಾಮರ್ಥ್ಯ ಕಡಿಮೆ ಮತ್ತು ಕೋವಿಡ್​ ನಂತರದ ಊರಿಯುತದ ಬಯೋಮಾರ್ಕ್​ ನಡುವಿನ ಸಂಬಂಧ ಹೊಂದಿದ್ದಾರೆ. ವ್ಯಾಯಾಮದ ವೇಳೆ ಹೃದಯ ಬಡಿತ ಕಡಿಮೆಯಾಗುವುದು ಎಪಿಸ್ಟರಿನ್​ ಬರ್ರ್​​ ವೈರಸ್​ನೊಂದಿಗೆ ಸಂಬಂಧ ಹೊಂದಿದೆ.

ಈ ಅಧ್ಯಯನವನ್ನು ಕೋವಿಡ್ ನಂತರದ ರೋಗಲಕ್ಷಣಗಳ ಆಧಾರವಾಗಿರುವ ಹೃದಯದ ಸ್ಥಿತಿಗಳನ್ನು ಮೌಲ್ಯಮಾಪನ ಮಾಡಲು ಎಕೋಕಾರ್ಡಿಯೋಗ್ರಾಮ್‌ಗಳನ್ನು ಬಳಸಿಕೊಂಡು ನವೆಂಬರ್ 2020 ರಲ್ಲಿ ಅಧ್ಯಯನ ಪ್ರಾರಂಭಿಸಲಾಯಿತು ಎಂದು ಅಧ್ಯಯನದ ಪ್ರಮುಖ ಲೇಖಕ ಮ್ಯಾಥ್ಯು ಡರ್ಸ್ಟೆನ್‌ಫೆಲ್ಡ್ ತಿಳಿಸಿದ್ದಾರೆ.

ಆರಂಭದಲ್ಲಿನ ಎಕೋಕಾರ್ಡಿಯೋಗ್ರಾಮ್​ ಆಧಾರದ ಮೇಲೆ ಈ ಹೃದಯ ಕಾರ್ಯವಿಧಾನದ ರೋಗ ಲಕ್ಷಣಗಳನ್ನು ಬಹಿರಂಗಪಡಿಸಿಲ್ಲ. ಕಾರ್ಡಿಯಾಕ್ ಮೆಕ್ಥೆ ತಂಡವು ಒಂದು ವರ್ಷದ ನಂತರ ಅಧ್ಯಯನದಲ್ಲಿ ಭಾಗವಹಿಸುವವರೊಂದಿಗೆ ಎರಡನೇ ಭೇಟಿಯನ್ನು ನಡೆಸಲು ಅಧ್ಯಯನದ ಪ್ರೋಟೋಕಾಲ್ ತಿದ್ದುಪಡಿ ಮಾಡಿದೆ. ಕಾರ್ಡಿಯೋಪಲ್ಮನರಿ ವ್ಯಾಯಾಮ ಪರೀಕ್ಷೆ ಸೇರಿದಂತೆ ಸುಧಾರಿತ ಪರೀಕ್ಷೆ ನಡೆಸಿದೆ. ಸಿಎಂಆರ್​ ಮತ್ತು ಆಂಬ್ಯುಲೇಟರಿ ಹಾರ್ಟ್​ ರೇಟಿಂಗ್​ ನಡೆಸಲಾಗಿದೆ. ಈ ವೇಳೆ ಭಾಗಿದಾರರ ರಕ್ತದ ಮಾದರಿ ಸಂಗ್ರಹ ಮತ್ತು ಎಕೋಕಾರ್ಡಿಯೋಗ್ರಾಮ್​ ವೇಳೆ ಸೆರಂ ಮತ್ತು ಪ್ಲಾಸ್ಮಾವನ್ನು ಸಂಸ್ಕರಿಸಲಾಗಿದೆ.

ಅಧ್ಯಯನಕ್ಕೆ 53 ವರ್ಷದ 60 ಭಾಗಿದಾರರನ್ನು ಒಂದೂವರೆಗಳ ವರ್ಷಗಳ ಕಾಲ ಅಧ್ಯಯನಕ್ಕೆ ಒಳಗಾಗಿಸಲಾಗಿದೆ. ಸಿಪಿಇಟಿ ರೋಗ ಲಕ್ಷಣಗಳಿಲ್ಲದ ಶೇ 16ಕ್ಕೆ ಹೋಲಿಸಿದರೆ ರೋಗಲಕ್ಷಣಗಳೊಂದಿಗೆ ಶೇ 49 ರಷ್ಟು ವ್ಯಾಯಾಮದ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ಕೋವಿಡ್​ ನಂತರದ ಮೊದಲ ಕೆಲವು ತಿಂಗಳುಗಳಲ್ಲಿ ಉರಿಯೂತದ ಬಯೋಮಾರ್ಕರ್‌ಗಳು ಮತ್ತು ಪ್ರತಿಕಾಯ ಮಟ್ಟಗಳು ಒಂದು ವರ್ಷದ ನಂತರ ಗರಿಷ್ಠ ವಿಒ2 ನೊಂದಿಗೆ ಋಣಾತ್ಮಕವಾಗಿ ಪರಸ್ಪರ ಸಂಬಂಧ ಹೊಂದಿವೆ.

ಆವಿಷ್ಕಾರಗಳು ಕ್ರೊನೊಟ್ರೊಪಿಕ್ ಅಸಮರ್ಥತೆ - ವ್ಯಾಯಾಮ ಮಾಡುವಾಗ ನಿರೀಕ್ಷಿತ ಗರಿಷ್ಠ ಹೃದಯ ಬಡಿತದ ಶೇ 80 ರಷ್ಟನ್ನು ಸಾಧಿಸಲು ವಿಫಲ ಮಾಡಿದೆ. ದೀರ್ಘ ಕೋವಿಡ್​ನಲ್ಲಿ ವ್ಯಾಯಾಮ ಮಿತಿಗಳಿಗೆ ಕೊಡುಗೆ ನೀಡುತ್ತದೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ. ಕ್ರೊನೊಟ್ರೊಪಿಕ್ ಅಸಮರ್ಥತೆ ಹೊಂದಿರುವ ಹೊಂದಿರುವ ವ್ಯಕ್ತಿಗಳ ಇಬಿವಿ ಪುನಃ ಸಕ್ರಿಯಗೊಳಿಸುವಿಕೆಯ ಪುರಾವೆ ಪತ್ತೆಯಾಗಿದೆ. ಆದರೂ ಮಯೋಕಾರ್ಡಿಟಿಸ್, ಹೃದಯದ ಅಸಮಾನ್ಯ ಕ್ರಿಯೆಗಳ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಾನಸಿಕ ಆರೋಗ್ಯ ಪತ್ತೆಗೆ ಧರಿಸುವ ಫಿಟ್ನೆಸ್‌ ಮಾನಿಟರ್‌ಗಳ ದತ್ತಾಂಶಗಳು ವರ: ಅಧ್ಯಯನ

ABOUT THE AUTHOR

...view details