ನವದೆಹಲಿ: 2023ರಲ್ಲಿ ಕಂಡಂತಹ ಮಾರಣಾಂತಿಕ ಶಾಖದ ಅಲೆಗಳು ಮುಂಬರುವ ವರ್ಷದಲ್ಲಿ ಸಾಮಾನ್ಯವಾಗಲಿದೆ. ಕಳೆದ 20 ವರ್ಷದಲ್ಲಿ ಈ ಶಾಖದ ಅಲೆಯ ಅಪಾಯಗಳು, ಸಾವಿನ ಪ್ರಮಾಣಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನ ಜರ್ನಲ್ ನೇಚರ್ ಕಮ್ಯೂನಿಕೇಷನ್ ತಿಳಿಸಿದೆ.
ಈ ವರ್ಷ ಅಂದರೆ, 2023ರಲ್ಲಿ ಜಗತ್ತಿನೆಲ್ಲೆಡೆ ನಾವು ಇದೀಗ ಶಾಖದ ಅಲೆಯನ್ನು ಕಾಣುತ್ತಿದ್ದೇವೆ. ಯುರೋಪ್ನಲ್ಲಿ ತಾಪಮಾನ 47.5 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇತ್ತೀಚಿಗೆ ಜರುಗಿನ ಕೆಟ್ಟ ನೈಸರ್ಗಿಕ ವಿಕೋಪ ಇದಾಗಿದೆ. ಇದರಿಂದಾಗಿ 45,00 ರಿಂದ 70 ಸಾವಿರ ಸಂತ್ರಸ್ತರು ಪರಿಣಾಮಕ್ಕೆ ಒಳಗಾಗಿದ್ದಾರೆ.
ಬಿಸಿಲ ತಾಪದಿಂದ ಅರಣ್ಯಗಳಲ್ಲಿ ಕಾಡ್ಬಿಚ್ಚು ಕಂಡು ಬಂದವು, ಬೆಳೆಗಳು ನಾಶವಾದವು. ಶಾಖದ ಅಲೆಯಿಂದಾಗಿ ನಗರ ಪ್ರದೇಶದಲ್ಲಿ ತುರ್ತು ವಾರ್ಡ್ಗಳು ರೋಗಿಗಳಿಂದ ತುಂಬಿದವು. ಜಾಗತಿಕವಾಗಿ 13 ಬಿಲಿಯನ್ ನಷ್ಟ ಇದರಿಂದ ಉಂಟಾಯಿತು.
ಶತಮಾನ ಅಲ್ಲ ದಶಕಗಳಿಗೆ ಮರುಕಳಿಸುತ್ತಿರುವ ಶಾಖದ ಅಲೆ: 2023ಲ್ಲಿ ಅಧಿಕ ಬೇಸಿಗೆ ದಾಖಲಾಗಿದ್ದು, ಇದರಿಂದ ಅನೇಕ ಸಾವುಗಳು ಕಂಡು ಬಂದವು. ಈ ರೀತಿಯ ಘಟನೆ ಶತಮಾನದಲ್ಲಿ ಒಮ್ಮೆ ಬರುತ್ತಿತ್ತು. ಆದರೆ ಇದೀಗ ಇದನ್ನು ಪ್ರತಿ 10 ರಿಂದ 20 ವರ್ಷಕ್ಕೆ ಒಮ್ಮೆ ನಿರೀಕ್ಷಿಸುತ್ತಿದ್ದೇವೆ ಎಂದು ಸ್ವಿಟ್ಜರ್ಲೆಂಡ್ನ ಇನ್ಸುಟಿಟ್ಯೂಟ್ ಫಾರ್ ಎನ್ವರಮೆಂಟಲ್ ಡಿಸಿಷನ್ನ ಸಂಶೋಧಕರು, ಅಧ್ಯಯನದ ಮುಖ್ಯ ಲೇಖಕರಾದ ಸ್ಯಾಮ್ಯುಯಲ್ ಲುಥಿ ತಿಳಿಸಿದ್ದಾರೆ.
ಜಗತ್ತಿನ ಅನೇಕ ಪ್ರದೇಶದಲ್ಲಿ ಎರಡರಿಂದ ಮೂರು ವರ್ಷಕ್ಕೆ ಜಗತ್ತು 2 ಡಿಗ್ರಿ ಉಷ್ಣಾಂಶ ಏರಿಕೆ ಮಾಡುತ್ತಿದೆ. ಶಾಖದ ಸಾವಿನ ಪ್ರಮಾಣವನ್ನು ಪತ್ತೆ ಹಚ್ಚುವುದು ಹೆಚ್ಚು ಅಸಂಭವನೀಯ. ಇದು ಪ್ರತಿ 100 ವರ್ಷದಲ್ಲಿ 14 ಬಾರಿ ಆಗುತ್ತಿದ್ದು, 2 ಡಿಗ್ರಿ ತಾಪಮಾನ ಹೆಚ್ಚುತ್ತಿದೆ. ಈ ಶಾಖದ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಭಾವಿಸಿದರೆ, ಅಂತಹ ತೀವ್ರ ಶಾಖದ ಅಲೆಗಳಿಂದ ಮರಣದ ಸಂಭವನೀಯತೆಯು 69 ಅಂಶಗಳಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನವು ಹೇಳಿದೆ.