ವಾಷಿಂಗ್ಟನ್:ವಿಶ್ವವನ್ನೇ ಕಾಡಿದ್ದ ಕೋವಿಡ್ ಮಹಾಮಾರಿ ಅದೆಷ್ಟೋ ಜನರ ಪ್ರಾಣಾಹುತಿ ಪಡೆದಿದೆ. ದೈಹಿಕ, ಮಾನಸಿಕವಾಗಿ ಹಿಂಡಿ ಹಿಪ್ಪೆ ಮಾಡಿದೆ. ಇದೆಲ್ಲವನ್ನೂ ಮೀರಿದ ಅಧ್ಯಯನವೊಂದು ಅಮೆರಿಕದಲ್ಲಿ ನಡೆದಿದೆ. ಕೊರೊನಾ ಸೋಕಿದ ಬಳಿಕ 16 ವರ್ಷದ ಬಾಲಕರು 70 ವರ್ಷದ ವೃದ್ಧರಂತೆ ವರ್ತಿಸುತ್ತಿದ್ದಾರೆ. ಏನೇ ಹೇಳಿದರೂ, ಕೇಳಿದರೂ ಕ್ಷಣಮಾತ್ರದಲ್ಲೇ ಮರೆಯುತ್ತಾರಂತೆ. ಇದು ಕೋವಿಡ್ ನೀಡಿದ ಮರ್ಮಾಘಾತ ಎಂಬುದು ಅಧ್ಯಯನ ಹೇಳಿದೆ.
ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಇದರ ಮಾಹಿತಿಯನ್ನು ಗ್ಲೋಬಲ್ ಓಪನ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಮಕ್ಕಳಿಗೆ ಕೋವಿಡ್ ವಕ್ಕರಿಸಿದ ಬಳಿಕ ಅದು ಎಷ್ಟರ ಮಟ್ಟಿಗೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ವಿವರಣೆ ನೀಡಿರುವ ಸ್ಟ್ಯಾನ್‌ಫೋರ್ಡ್ ವಿವಿಯ ನ್ಯೂರೋ ಡೆವಲಪ್‌ಮೆಂಟ್, ಅಫೆಕ್ಟ್ ಮತ್ತು ಸೈಕೋಪಾಥಾಲಜಿ ಲ್ಯಾಬ್‌ನ ನಿರ್ದೇಶಕ ಇಯಾನ್ ಗಾಟ್ಲೀಬ್, ಕೋವಿಡ್ ಯುವಕರ ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ ಎಂದು ಕಂಡುಕೊಳ್ಳಲಾಗಿತ್ತು. ಆದರೆ, ದೈಹಿಕ ನೂನ್ಯತೆ ಉಂಟು ಮಾಡುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಈ ಅಧ್ಯಯನ ಭಯ ಬೀಳಿಸುತ್ತದೆ ಎಂದು ಹೇಳಿದ್ದಾರೆ.