ನಮ್ಮ ಬದಲಾದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬ್ರೈನ್ ಸ್ಟ್ರೋಕ್‌ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ರೋಗಿಯ ದೇಹದ ಅರ್ಧಭಾಗದಲ್ಲಿ ಹಠಾತ್ ಆಗಿ ಪ್ರಜ್ಞೆ ಕಳೆದುಕೊಳ್ಳುವಂತಹ ಸ್ಥಿತಿ. ಪಾರ್ಶ್ವವಾಯು ಉಂಟಾದರೆ ನಮ್ಮ ಮೆದುಳಿನ ಮೇಲೆ ಹಾನಿ ಉಂಟು ಮಾಡುತ್ತದೆ. ದೇಹವನ್ನು ಮೆದುಳಿನ ನರಗಳು ಕಂಟ್ರೋಲ್ ಮಾಡುವ ಕಾರಣ ತನ್ನ ದೇಹಕ್ಕಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಬಹುದು.
ಪಾರ್ಶ್ವವಾಯು ಉಂಟಾದಾಗ ರಕ್ತದ ಪೂರೈಕೆ ಸಮಾನವಾಗಿರುವುದಿಲ್ಲ. ರಕ್ತ ಪೂರೈಕೆಯ ಕೊರತೆಯಿಂದಾಗಿ, ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ತಲೆತಿರುಗುವಿಕೆ, ಮೂರ್ಛೆ ಮುಂತಾದ ಸಮಸ್ಯೆಗಳು ಅಥವಾ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ರಕ್ತದೊತ್ತಡ ತುಂಬಾ ಹೆಚ್ಚಾಗಿ ಜನರು ಸಾವನ್ನಪ್ಪುವ ಸಂಭವವೂ ಇರುತ್ತದೆ.
ವಿಶೇಷವಾಗಿ ಈ ಸಮಸ್ಯೆಯು 40 ಮತ್ತು 50 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೃದ್ಧಾಪ್ಯದಲ್ಲಿ ಅಪಧಮನಿಗಳು ಕುಗ್ಗಲು ಪ್ರಾರಂಭಿಸುತ್ತವೆ. ಅಪಧಮನಿಗಳ ಕಿರಿದಾಗುವಿಕೆಯಿಂದಾಗಿ, ರಕ್ತದ ಪೂರೈಕೆಯು ಸಾಮಾನ್ಯದಂತೆ ಇರುವುದಿಲ್ಲ. ಅಂತಹ ಸಮಯದಲ್ಲಿ ಪಾರ್ಶ್ವವಾಯುಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸರಿಯಾದ ಆಹಾರ ಕ್ರಮ ಅನುಸರಿಸುವುದು ಒಳ್ಳೆಯದು.
ಬ್ರೈನ್ ಸ್ಟ್ರೋಕ್ ಸಮಯದಲ್ಲಿ ಡಯಟ್ ಮಾಡುವುದು ಹೇಗೆ?: ಡಯಟೀಷಿಯನ್ ಡಾ ಸಾರಿಕಾ ಶ್ರೀವಾಸ್ತವ ಹೇಳುವ ಪ್ರಕಾರ ಸ್ಟ್ರೋಕ್‌ನಂತಹ ಸಮಸ್ಯೆ ಕಂಡುಬಂದರೆ, ಮೊದಲು ಆಪಲ್ ಸೈಡರ್ ವಿನೆಗರ್ ಅನ್ನು ನಮ್ಮ ಆಹಾರದಲ್ಲಿ ಸೇರಿಸಬೇಕು. ಇದು ರಕ್ತ ಹೆಪ್ಪುಗಟ್ಟುವಿಕೆ ತೆಗೆದುಹಾಕಲು ಸಹಾಯ ಮಾಡುತ್ತದೆ. ಮಿದುಳಿನ ಪಾರ್ಶ್ವವಾಯು ಸಮಯದಲ್ಲಿ ಪಥ್ಯದಲ್ಲಿರಬೇಕು.