ವಾಷಿಂಗ್ಟನ್: ಬಾಲ್ಯದಲ್ಲಿ ಆಘಾತ ಅನುಭವಿಸಿದ ಮಕ್ಕಳು ದೊಡ್ಡವರಾದ ಬಳಿಕ ಆತಂಕ, ಖಿನ್ನತೆ ಜೊತೆಗೆ ಕೋಪಿಷ್ಠ ಮನೋಭಾವನೆ ಮೂಡಿಸುವ ಸಾಧ್ಯತೆ ಇದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಬಾಲ್ಯದಲ್ಲಿ ಅನುಭವಿಸಿದ ಆಘಾತಗಳಿಂದ ವಯಸ್ಕರಾದ ಬಳಿಕ ಅವರನ್ನು ಹೆಚ್ಚು ಕ್ರೋಧಿತರನ್ನಾಗಿ ಮಾಡುತ್ತದೆ. ಇದರು ಸಾಮಾಜಿಕ ಸಂವಹನ ಮತ್ತು ಮಾನಸಿಕ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ಯಾರಿಸ್ನಲ್ಲಿನ ಯುರೋಪಿಯನ್ ಕಾಂಗ್ರೆಸ್ ಆಫ್ ಸೈಕಿಯಾಟ್ರಿಕ್ಸ್ ತಿಳಿಸಿದೆ.
ಈ ಹಿಂದಿನ ಸಂಶೋಧನೆಯಲ್ಲಿ ಆತಂಕ ಮತ್ತು ಖಿನ್ನತೆ ಎರಡನ್ನೂ ಹೊಂದಿರುವ ಶೇ 40ರಷ್ಟು ರೋಗಿಗಳು ಹೆಚ್ಚು ಕೋಪಕ್ಕೆ ಒಳಗಾಗುತ್ತಾರೆ ಎಂದು ತಿಳಿಸಲಾಗಿದೆ. ಇವರಲ್ಲಿ ಶೇ 5ರಷ್ಟು ಜನ ಆರೋಗ್ಯಕರ ನಿಯಂತ್ರಣ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಆತಂಕ ಮತ್ತು ಖಿನ್ನತೆ ನಡುವಿನ ಕೋಪದ ಸಂಬಂಧ ಅಧ್ಯಯನ ನಡೆಸಲು ನೆದರ್ಲ್ಯಾಂಡ್ ಅಧ್ಯಯನ ಡೇಟಾವನ್ನು ಒದಗಿಸಿದೆ.
2004ರಲ್ಲಿ ಈ ಅಧ್ಯಯನ ಆರಂಭಿಸಲಾಗಿತ್ತು. ಈ ವೇಳೆ 18ರಿಂದ 65 ವರ್ಷದ ಬಳಗಿನವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಬಾಲ್ಯದ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಅಧ್ಯಯನದಲ್ಲಿ 2276 ಮಂದಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಬಾಲ್ಯದಲ್ಲಿ ಆಘಾತ, ಪೋಷಕರನ್ನು ಕಳೆದುಕೊಂಡಿರುವುದು ಅಥವಾ ಪೋಷಕರ ವಿಚ್ಛೇದನ ಕುರಿತು ಪ್ರಶ್ನಾವಳಿಗಳನ್ನು ಕೇಳಲಾಗಿದೆ. ಇದೇ ವೇಳೆ ಅವರಿಗೆ ಬಾಲ್ಯದಲ್ಲಿ ಆದ ನಿರ್ಲಕ್ಷ್ಯದ ಅನುಭವ, ದೈಹಿಕ ಮತ್ತು ಲೈಂಗಿಕ ಕಿರುಕುಳದ ಕುರಿತು ಕೂಡ ಮಾಹಿತಿ ಪಡೆಯಲಾಗಿದೆ. ಅಧ್ಯಯನದ ಭಾಗಿದಾರರು ಕೂಡ ಅನೇಕ ಮಾನಸಿಕ ಆರೋಗ್ಯದ ಲಕ್ಷಣ ದಿಂದ ಒತ್ತಡ ಮತ್ತು ಖಿನ್ನತೆಗಳು ಕೋಪಕ್ಕೆ ಕಾರಣವಾಗಿರುವ ಕುರಿತು ಪರಿಶೀಲನೆ ನಡೆಸಿದ್ದಾರೆ.
ಅಧ್ಯಯನ ಕುರಿತು ಮಾತಾಡಿರುವ ಪ್ರಮುಖ ಸಂಶೋಧಕರ ನೈನ್ಕೆನ್ ಡೆ ಬ್ಲೆಸ್, ಸಾಮಾನ್ಯವಾಗಿ ಕೋಪದ ಬಗ್ಗೆ ಆಶ್ಚರ್ಯಕರವಾಗಿ ಕಡಿಮೆ ಸಂಶೋಧನೆ ಇದೆ. ಖಿನ್ನತೆ ಮತ್ತು ಆತಂಕದ ಕುರಿತು ನೆದರ್ಲ್ಯಾಂಡ್ ಅಧ್ಯಯನವಾಗಿದ್ದು, ಇದು ಸಾಕಷ್ಟು ಉತ್ತಮ ವೈಜ್ಞಾನಿಕ ದತ್ತಾಂಶ ನೀಡಿದೆ. ಬಾಲ್ಯದ ಆಘಾತದ ದತ್ತಾಂಶ ಕೋಪದ ಮಟ್ಟಕ್ಕೆ ಸಂಬಂಧಿಸಿದೆ ಎಂಬುದನ್ನು ಪತ್ತೆ ಮಾಡಲಾಗಿದೆ.