ಕರ್ನಾಟಕ

karnataka

ETV Bharat / sukhibhava

ಪುರುಷರಲ್ಲಿನ ಬಂಜೆತನಕ್ಕೂ ಇದೆ ಚಿಕಿತ್ಸೆ.. ವೀರ್ಯಾಣು ಲಸಿಕೆ ಕುರಿತು ಇಲ್ಲಿದೆ ಮಾಹಿತಿ

ಆಧುನಿಕ ಜಗತ್ತಿನ ಲೈಂಗಿಕ ಸಮಸ್ಯೆಗಳಲ್ಲಿ ಬಂಜೆತನವು ಈಗೀಗ ಅತೀಯಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಆದರೆ ಇತ್ತೀಚಿಗೆ ಕೃತಕ ಗರ್ಭದಾರಣೆಯ ಮೂಲಕ ಮಗು ಪಡೆಯುವುದು ಸಾಮಾನ್ಯವಾಗಿದೆ. ಹೀಗೆ ಮಹಿಳೆರಷ್ಟೇ ಅಲ್ಲ ಪುರುಷರು ಸಹ ಇಂಜೆಕ್ಷನ್​​​​​ ಪಡೆಯುವ ಮೂಲಕ ವೀರ್ಯಾಣು ಚಿಕಿತ್ಸೆ ಪಡೆಯಬಹುದಾಗಿದೆ.

http://10.10.50.85//karnataka/29-June-2021/gettyimages-12197986531624969280890-63_2906email_1624969293_1107.jpg
ಪುರುಷರಲ್ಲಿನ ಬಂಜೆತನಕ್ಕೂ ಇದೆ ಚಿಕಿತ್ಸೆ

By

Published : Jun 29, 2021, 10:26 PM IST

ಸಮಾಜದ ಕೌಟುಂಬಿಕ ಸಮಸ್ಯೆಗಳಲ್ಲಿ ಗಾಢವಾದ ಮತ್ತು ಅತ್ಯಂತ ಗುಪ್ತ ಸಮಸ್ಯೆ ಸಾಲಿನಲ್ಲಿ ಕಡಿಮೆ ವೀರ್ಯ ಸಂಖ್ಯೆಯಂತಹ ಸಂಕಷ್ಟವೂ ನಮ್ಮ ನಡುವೆ ಇದೆ. ಹೀಗಾಗಿ ಕೃತಕವಾಗಿ ವೀರ್ಯವನ್ನು ಇಂಜೆಕ್ಟ್​ ಮಾಡುವ ತಂತ್ರಜ್ಞಾನ ಈಗ ವೇಗವಾಗಿ ಬೆಳೆದಿದೆ. ಅಲ್ಲದೇ ಕಡಿಮೆ ವೀರ್ಯಾಣು ಸಮಸ್ಯೆಯಿಂದಾಗಿ ಮೂರನೇ ಒಂದು ಭಾಗದಷ್ಟು ದಂಪತಿಯೂ ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ.

ಐಸಿಎಸ್ಐ ಎಂದರೆ ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪೆರ್ಮ್ ಇಂಜೆಕ್ಷನ್. ಇದು ಸುಧಾರಿತ ತಂತ್ರಜ್ಞಾನವಾಗಿದ್ದು, ದಂಪತಿಯಲ್ಲಿ ಕಡಿಮೆ ವೀರ್ಯಾಣು ಎಣಿಕೆ ಕಂಡು ಬಂದರೆ ಅಂತಹ ಪ್ರಾಥಮಿಕ ಹಂತದಲ್ಲಿ ಲಸಿಕೆ ಮೂಲಕ ಗರ್ಭದಾರಣೆಗೆ ಕಾರಣವಾಗಿದೆ.

ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ ಸಲಹೆ ಪಡೆಯಬಹುದೆ..?

  • ಪುರುಷರಿಂದ ಬಂಜೆತನಕ್ಕೆ ಕಾರಣವಾಗಿದ್ದರೆ ಈ ಇಂಜೆಕ್ಷನ್​ಗೆ ಸಲಹೆ ನೀಡಲಾಗುತ್ತದೆ.
  • ಆಲಿಗೋಸ್ಪೆರ್ಮಿಯಾ: ಕಡಿಮೆ ವೀರ್ಯಾಣುಗಳ ಸಂಖ್ಯೆ ಹೊಂದಿದ್ದರೆ.
  • ಕಡಿಮೆ ವೀರ್ಯ ಚಲನಶೀಲತೆ
  • ಅಸಹಜ ವೀರ್ಯಾಣು ರೂಪವಿಜ್ಞಾನ - ವೀರ್ಯದ ಆಕಾರ
  • ಸ್ಖಲನ-ಅಜೋಸ್ಪೆರ್ಮಿಯಾದಲ್ಲಿ ವೀರ್ಯವಿಲ್ಲದ ಪುರುಷರಲ್ಲಿ ಎಪಿಡಿಡಿಮಿಸ್ (ಪೆಸಾ) ಅಥವಾ ವೃಷಣಗಳಿಂದ (ಟೆಸಾ) ಶಸ್ತ್ರಚಿಕಿತ್ಸೆಯ ವೀರ್ಯ ಮರುಪಡೆಯುವಿಕೆ.
  • ವಿವರಿಸಲಾಗದ ಸಬ್ಸರ್ಟಿಲಿಟಿ ಹೊಂದಿರುವ ದಂಪತಿಗಳಲ್ಲಿ - ಫಲೀಕರಣದ ಸಮಸ್ಯೆಗಳನ್ನು ನಿರೀಕ್ಷಿಸಲಾಗಿದೆ.

ಐಸಿಎಸ್ಐ ಅನ್ನು ಹೇಗೆ ನಡೆಸಲಾಗುತ್ತದೆ?

ಐಸಿಎಸ್ಐನಲ್ಲಿ, ಮೈಕ್ರೊಮ್ಯಾನಿಪ್ಯುಲೇಟರ್ ಎಂಬ ಉಪಕರಣವನ್ನು ಬಳಸಿ, ಸೂಕ್ಷ್ಮದರ್ಶಕದ ಅಡಿ ಭ್ರೂಣಶಾಸ್ತ್ರಜ್ಞ ಕಾರ್ಯಸಾಧ್ಯವಾದ ಆರೋಗ್ಯವಂತ ಏಕೈಕ ವೀರ್ಯವನ್ನು ಆರಿಸುತ್ತಾನೆ. ನಂತರ ಅದನ್ನು ಮಹಿಳಾ ಎಗ್​ಗೆ ಚುಚ್ಚಲಾಗುತ್ತದೆ. ಇದರಿಂದಾಗಿ ವೀರ್ಯವು ನೈಸರ್ಗಿಕವಾಗಿ ಅಂಡಾಣು ಭೇದಿಸಬೇಕಾದ ಹಂತ ತಲುಪುತ್ತದೆ. ವೀರ್ಯವನ್ನು ಸಾಮಾನ್ಯವಾಗಿ ಸೂಕ್ಷ್ಮದರ್ಶಕದ ಅಡಿ 400 ಬಾರಿ ವರ್ಧಿಸಲಾಗುತ್ತದೆ.

ಇದರಿಂದಾಗಿ ವಿಜ್ಞಾನಿ ಅಂಡಾಣು ಚುಚ್ಚಲು ಅತ್ಯುತ್ತಮ ವೀರ್ಯವನ್ನು ಆಯ್ಕೆ ಮಾಡಬಹುದು. ಐಎಂಎಸ್ಐ ಎನ್ನುವುದು ತಾಂತ್ರಿಕವಾಗಿ ಮುಂದುವರಿದ ವಿಧಾನವಾಗಿದ್ದು, ಅಸಹಜವಾಗಿ ಕಾಣುವ ವೀರ್ಯವನ್ನು ಹೊಂದಿರುವ ಪುರುಷರಲ್ಲಿ ವೀರ್ಯಾಣು ಆಯ್ಕೆಯ ಪ್ರಕ್ರಿಯೆಯನ್ನು ಸುಧಾರಿಸಲು ವೀರ್ಯವನ್ನು 6,000 ಬಾರಿ ವರ್ಧಿಸಲಾಗುತ್ತದೆ.

ಐವಿಎಫ್ ಮತ್ತು ಐಸಿಎಸ್‌ಐ ನಡುವಿನ ವ್ಯತ್ಯಾಸ?

ಐವಿಎಫ್-ಇನ್ ವಿಟ್ರೊ ಫಲೀಕರಣದಲ್ಲಿ, ಸ್ತ್ರೀಯಿಂದ ಸಂಗ್ರಹಿಸಿದ ಅಂಡಾಣುಗಳನ್ನು ಲ್ಯಾಬ್‌ನಲ್ಲಿ ಮೋಟೈಲ್ ವೀರ್ಯದೊಂದಿಗೆ ಬೆರೆಸಲಾಗುತ್ತದೆ ಮತ್ತು ಮೋಟೈಲ್ ವೀರ್ಯವು ಅಂಡಾಣುವನ್ನು ಪ್ರವೇಶಿಸುತ್ತದೆ ಮತ್ತು ಫಲೀಕರಣದ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಐಸಿಎಸ್ಐನಲ್ಲಿ, ಮೈಕ್ರೊಮ್ಯಾನಿಪ್ಯುಲೇಟರ್ ಎಂಬ ಯಂತ್ರ ಬಳಸಿ, ಸೂಕ್ಷ್ಮದರ್ಶಕದ ಅಡಿ ಭ್ರೂಣಶಾಸ್ತ್ರಜ್ಞನು ಅಂಡಾಣುಯೊಳಗೆ ಒಂದೇ ವೀರ್ಯ ಚುಚ್ಚಿ ಫಲೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

ಅಂಡಾಣುಗಳ ಬೆಳವಣಿಗೆಗೆ ಸಹಾಯವಾಗುವಂತೆ ಗೊನಡೋಟ್ರೋಫಿನ್​ಗಳು ಎಂಬ ಹಾರ್ಮೋನ್ ಚುಚ್ಚುಮದ್ದನ್ನು ಸುಮಾರು 10 ದಿನಗಳವರೆಗೆ ನೀಡಲಾಗುತ್ತದೆ, ನಂತರ ಅವುಗಳನ್ನು ಅರಿವಳಿಕೆ ಅಡಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಅಂಡಾಣುಗಳನ್ನು ನಂತರ ವೀರ್ಯದಿಂದ ಐವಿಎಫ್ ಅಥವಾ ಐಸಿಎಸ್ಐ ಪ್ರಕ್ರಿಯೆಯನ್ನು ಬಳಸಿಕೊಂಡು ಭ್ರೂಣವನ್ನು ರಚಿಸಲಾಗುತ್ತದೆ ಮತ್ತು ಅದನ್ನು ಗರ್ಭಧಾರಣೆಯ ಸುಗಮಗೊಳಿಸಲು ಮಹಿಳೆಯ ಗರ್ಭದೊಳಗೆ ಬದಲಾಯಿಸಲಾಗುತ್ತದೆ.

ABOUT THE AUTHOR

...view details