ಕರ್ನಾಟಕ

karnataka

ETV Bharat / sukhibhava

ವಿವಾಹ ವಿಚ್ಛೇದನ: ಬದಲಾಗುತ್ತಿದೆ ಭಾರತೀಯ ಮಹಿಳೆಯರ ಮನೋಭಾವನೆ - ವಿವಾಹ ವಿಚ್ಛೇದನ ಕಾರಣ

ವಿಚ್ಛೇದನ ಪ್ರಮಾಣ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೆ ಎಲ್ಲ ವಿವಾಹ ಸಂಬಂಧಗಳು ಸುಖದಿಂದ ನಡೆದಿವೆ ಎಂದು ಹೇಳಲಾಗದು. ವಿಚ್ಛೇದನ ಪಡೆದರೆ ಮುಂದೇನು ಗತಿ ಎಂಬ ಆತಂಕ, ಸಮಾಜದಲ್ಲಿ ಹೇಗೆ ತಲೆ ಎತ್ತಿ ಬಾಳುವುದು ಎಂಬ ಹಿಂಜರಿಕೆ ಹೀಗೆ ನಾನಾ ಕಾರಣಗಳಿಂದ ಹೆಣ್ಣು ಮಕ್ಕಳು ಕಷ್ಟವಾದರೂ ವಿಚ್ಛೇದನಕ್ಕೆ ಮುಂದಾಗುವುದಿಲ್ಲ.

Breaking stigma around divorce, Indian women are finding solace in singlehood
Breaking stigma around divorce, Indian women are finding solace in singlehood

By

Published : Jul 8, 2022, 5:23 PM IST

ಹೈದರಾಬಾದ್: ಹದಿಹರೆಯದ ಆಕೆಯ ಹೆಸರು ಬಾನಿ ಶ್ರೀವಾಸ್ತವ (ಹೆಸರು ಬದಲಾಯಿಸಲಾಗಿದೆ) ಎಂದಿಟ್ಟುಕೊಳ್ಳೋಣ. ಆಕೆಗೆ ಮದುವೆ ಮುಂತಾದ ವಿಷಯಗಳಲ್ಲಿ ಎಂದಿಗೂ ಆಸಕ್ತಿ ಇರಲಿಲ್ಲ. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಸೈಕಲ್ ಓಡಿಸುವುದರಲ್ಲಿ ಆಕೆಗೆ ಸಿಕ್ಕಾಪಟ್ಟೆ ಖುಷಿ. ಪಾಂಡಿಚೇರಿಯ ಪುರಾತನ ಫ್ರೆಂಚ್ ವಾಸ್ತುಶೈಲಿಯ ಕಟ್ಟಡಗಳ ಸಾಲಿನಲ್ಲಿ ತನ್ನದೇ ಲೋಕದಲ್ಲಿ ಸೈಕಲ್ ಓಡಿಸುತ್ತ ಆಕೆ ಖುಷಿಯಾಗಿದ್ದರು. ದೊಡ್ಡವಳಾಗಿ ಟೀಚರ್ ಆಗಬೇಕಿತ್ತು ಆ ಕನಸುಕಂಗಳ ಬಾಲೆಗೆ.

ಆದರೂ ಈ ಎಲ್ಲ ಖುಷಿಯ ಸಮಯ ಮುಗಿದು ಎಲ್ಲೋ ಒಂದು ಕಡೆ ಸೆಟಲ್ ಆಗಲೇಬೇಕು ಎಂಬ ಆರಿವು ಈಗ ಆಕೆಗೆ ಮೂಡತೊಡಗಿತ್ತು. ಕೊನೆಗೂ ಕೆಲ ದಿನಗಳ ನಂತರ ತಂದೆ - ತಾಯಿಗಳ ಮಾತಿಗೆ ಎದುರು ಮಾತನಾಡಲು ಆಗದೇ ಮದುವೆಗೆ ಒಪ್ಪಲೇಬೇಕಾಯಿತು. ತಂದೆ - ತಾಯಿ, ಬಂಧುಗಳು ಹಾಗೂ ಕುಟುಂಬದ ಮಿತ್ರರು ಎಲ್ಲ ಸೇರಿ ಆಕೆಯ ಇಡೀ ಜೀವನದ ಒಂದು ನಿರ್ಧಾರವನ್ನು ಕೆಲವೇ ವಾರಗಳಲ್ಲಿ ಮಾಡಿದ್ದರು.

ಹೊಸ ವಿವಾಹ ಜೀವನವು ಆರಂಭದಲ್ಲಿ ತುಂಬಾ ಖುಷಿಯಾಗೇ ನಡೆದಿತ್ತು. ಆಕೆಯ ಗಂಡ ದೆಹಲಿಯಲ್ಲಿ ಇಂಜಿನಿಯರ್ ಆಗಿದ್ದ. ಆಕೆಗೆ ಹೂಗುಚ್ಛ ಕಳಿಸುತ್ತಿದ್ದ, ವೀಕೆಂಡ್ ಡಿನ್ನರ್ ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಇದೆಲ್ಲವೂ ರೋಮ್ಯಾಂಟಿಕ್ ಆಗಿದ್ದು ಆಕೆಗೆ ಖುಷಿಯೇ ಇತ್ತು. ಕೊನೆಗೆ ಆಕೆಯ ಗಂಡನಿರುವ ಊರಿನಲ್ಲಿ ಮನೆಯ ಹತ್ತಿರದ ಶಾಲೆಯೊಂದರಲ್ಲಿ ಟೀಚರ್ ಕೆಲಸ ಸಿಕ್ಕಿತ್ತು.

ಇಷ್ಟಾಗುತ್ತಲೇ ಅವರಿಬ್ಬರ ಸಂಬಂಧ ಯಾಕೋ ಒಂಚೂರು ಹಳಸಲಾರಂಭಿಸಿತ್ತು. ಚಿಕ್ಕ ಪುಟ್ಟ ವಾದಗಳು ದೊಡ್ಡ ಜಗಳಗಳಾಗಿ ಬೆಳೆದು ನಿಲ್ಲತೊಡಗಿದವು. ಅವರ ಗಂಡನ ಇನ್ನೊಂದು ಮುಖ ಅಂದರೆ ಕ್ರೌರ್ಯದ ಅನಾವರಣ ಆಕೆಗಾಗತೊಡಗಿತು. ಹಾಗೇ ಜಗಳದಲ್ಲಿ ಒಂದು ದಿನ ಗಂಡ ಆಕೆಯ ಕೆನ್ನೆಗೆ ಹೊಡೆದೂ ಬಿಟ್ಟ. "ಮದುವೆಯಾಗಿ ಎರಡೇ ತಿಂಗಳು, ಆತ ನನ್ನ ಮೇಲೆ ಕೈಮಾಡಿದ." ಅಳುತ್ತಲೇ ಆಕೆ ಹೇಳಿದಳು.

ಬಾನಿಗೆ ಟೈಪ್-1 ಮಾದರಿಯ ಡಯಾಬಿಟೀಸ್ ಇರುವುದು ಪತ್ತೆಯಾಗಿತ್ತು. ಆದರೆ, ಆಕೆಯ ಚಿಕಿತ್ಸೆಗೆ ಹಣ ನೀಡಲ್ಲ ಎಂದ ಗಂಡ. ಆತನ ಮನೆಯವರೂ ಅವಳನ್ನು ಕೀಳಾಗಿ ಕಾಣತೊಡಗಿದರು. ನನ್ನ ಜೀವನ ಇಂಥ ನರಕವಾಗಬಹುದೆಂದು ನಾನು ಎಣಿಸಿರಲಿಲ್ಲ. ಆದರೆ, ದೌರ್ಜನ್ಯ ಸಹಿಸಲ್ಲ ಎಂದು ತೀರ್ಮಾನಿಸಿ ವಿಚ್ಛೇದನ ಪಡೆಯಲು ನಾನು ರೆಡಿಯಾದೆ. ನನಗಿನ್ನೂ 30 ವರ್ಷ. ಇಡೀ ಜೀವನ ನನ್ನೆದುರಿಗಿದೆ ಎಂದಳಾಕೆ.

ಸದ್ಯಕ್ಕೆ ಬಾನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ.

ಒಬ್ಬಂಟಿ ಆಗಿರುವುದೇ ಲೇಸು ಅಂತಾರೆ ಅವರು:ಒಬ್ಬರನ್ನು ನಂಬುವುದು ಹಾಗೂ ಅವರು ನಂಬಿಕೆ ದ್ರೋಹ ಮಾಡಿದಾಗ ಭಯದಲ್ಲಿ ಜೀವಿಸುವುದಕ್ಕಿಂತ ನನ್ನನ್ನು ನಾನು ನಂಬಿಕೊಂಡು ಬದುಕುವುದೇ ಸರಿ ಅನಿಸಿದೆ. ಸದಾ ದೌರ್ಜನ್ಯ ಅನುಭವಿಸುವ ಸಂಬಂಧಕ್ಕಿಂತ ಒಬ್ಬಂಟಿಯಾಗಿರುವುದೇ ಲೇಸು ಅಂತಾರೆ ಅವರು.

ಅಂಕಿ-ಸಂಖ್ಯೆಗಳನ್ನು ನೋಡುವುದಾದರೆ, ಅತ್ಯಂತ ಕಡಿಮೆ ವಿವಾಹ ವಿಚ್ಛೇದನ ಹೊಂದಿರುವ ದೇಶವಾಗಿದೆ ನಮ್ಮ ಭಾರತ ದೇಶ. ವಿಶ್ವ ವಿಚ್ಛೇದನ ಸೂಚ್ಯಂಕದ ಪ್ರಕಾರ ಭಾರತದ ವಿಚ್ಛೇದನಗಳ ಪ್ರಮಾಣ ಶೇ 1 ಕ್ಕಿಂತಲೂ ಕಡಿಮೆಯಿದೆ. ಕಳೆದ ವರ್ಷದ ವರದಿಯೊಂದರ ಪ್ರಕಾರ, 1000 ಮದುವೆಗಳಲ್ಲಿ ಕೇವಲ 13 ಮಾತ್ರ ವಿಚ್ಛೇದನ ಹೊಂದುತ್ತವೆ. ಭಾರತದಲ್ಲಿ ಸುಮಾರು 1.36 ಮಿಲಿಯನ್ ವಿಚ್ಛೇದನಗಳು ನಡೆದಿವೆ. ಇದು ಮದುವೆಯಾದ ಜನಸಂಖ್ಯೆಯ ಶೇ 0.24 ಹಾಗೂ ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇ 0.11 ಆಗಿದೆ.

ವಿಚ್ಚೇದನ ಕಡಿಮೆ ಎಂದ ಮಾತ್ರ ಸುಖಸಂಸಾರ ಅಂದುಕೊಳ್ಳಬೇಡಿ:ಆದರೆ, ವಿಚ್ಛೇದನ ಪ್ರಮಾಣ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೆ ಎಲ್ಲ ವಿವಾಹ ಸಂಬಂಧಗಳು ಸುಖದಿಂದ ನಡೆದಿವೆ ಎಂದು ಹೇಳಲಾಗದು. ವಿಚ್ಛೇದನ ಪಡೆದರೆ ಮುಂದೇನು ಗತಿ ಎಂಬ ಆತಂಕ, ಸಮಾಜದಲ್ಲಿ ಹೇಗೆ ತಲೆ ಎತ್ತಿ ಬಾಳುವುದು ಎಂಬ ಹಿಂಜರಿಕೆ ಹೀಗೆ ನಾನಾ ಕಾರಣಗಳಿಂದ ಹೆಣ್ಣು ಮಕ್ಕಳು ಕಷ್ಟವಾದರೂ ವಿಚ್ಛೇದನಕ್ಕೆ ಮುಂದಾಗುವುದಿಲ್ಲ. ಹಣಕಾಸು ಅಭದ್ರತೆ ಹಾಗೂ ಹುಟ್ಟಿದ ಮನೆಗೆ ಅಪಮಾನವಾಗುತ್ತದೆ ಎಂಬ ಪ್ರಮುಖ ಕಾರಣಗಳಿಂದ ವಿಚ್ಛೇದನ ಪಡೆಯಲು ಹೆಣ್ಣು ಮಕ್ಕಳು ಮುಂದಾಗುವುದಿಲ್ಲ.

ಆದರೆ, ವರ್ಷಗಳು ಉರುಳಿದಂತೆ ಭಾರತೀಯ ಮಹಿಳೆಯ ಸ್ಥಿತಿಗತಿಗಳು ಹಾಗೂ ಅದಕ್ಕೆ ತಕ್ಕಂತೆ ಆಕೆಯ ಮನೋಭಾವನೆಗಳು ಬದಲಾಗುತ್ತಿವೆ. ಆಧುನಿಕ ಮಹಿಳೆ ಶಿಕ್ಷಣ ಪಡೆದಿದ್ದಾಳೆ, ಸ್ವತಂತ್ರಳಾಗಿದ್ದಾಳೆ, ಸಾಕಷ್ಟು ಧೈರ್ಯವಂತೆಯೂ ಆಗಿದ್ದಾಳೆ. ಆಕೆ ಹೊರಗಡೆಯ ಕೆಲಸ ಹಾಗೂ ಮಕ್ಕಳನ್ನು ಸಾಕುವುದು ಎರಡನ್ನೂ ನಿಭಾಯಿಸಬಲ್ಲಳು.

2022ರ ಜನಗಣತಿಯ ಪ್ರಕಾರ, 2001ರಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರ ಸಂಖ್ಯೆ 51.2 ಮಿಲಿಯನ್ ಆಗಿದ್ದು, 2011ರ ಹೊತ್ತಿಗೆ ಇದು 71.4 ಮಿಲಿಯನ್​ಗೆ ತಲುಪಿದೆ. ಮಾಧುರ್ಯವಿಲ್ಲದ ಸಂಬಂಧದಲ್ಲಿ ಇರುವುದಕ್ಕಿಂತ ಒಬ್ಬಂಟಿಯಾಗಿರುವುದೇ ಹಿತ ಎಂದು ಹೆಚ್ಚೆಚ್ಚು ಭಾರತೀಯ ಮಹಿಳೆಯರು ಭಾವಿಸುತ್ತಿರಬಹುದು.

ABOUT THE AUTHOR

...view details