ಕರ್ನಾಟಕ

karnataka

ETV Bharat / sukhibhava

ಎಚ್ಚರ! ಪಾರ್ಕಿನ್ಸನ್​ ರೋಗ ಅಪಾಯ ಹೆಚ್ಚಿಸುತ್ತದೆ ವಾಯು ಮಾಲಿನ್ಯ - ವಾಯು ಮಾಲಿನ್ಯದ ಪ್ರದೇಶದಲ್ಲಿ

ಈ ಹಿಂದಿನ ಅಧ್ಯಯನದಲ್ಲಿ ಧೂಳಿನ ಸೂಕ್ಷ್ಮ ಕಣಗಳು ಮಿದುಳಿನ ಊರಿಯೂತಕ್ಕೆ ಕಾರಣವಾಗುತ್ತವೆ ಎಂಬುದನ್ನು ತೋರಿಸಿದ್ದವು.

Air pollution increases the risk of Parkinson's disease
Air pollution increases the risk of Parkinson's disease

By ETV Bharat Karnataka Team

Published : Oct 31, 2023, 5:26 PM IST

ನವದೆಹಲಿ: ಕಡಿಮೆ ಮಟ್ಟದ ವಾಯು ಮಾಲಿನ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹೋಲಿಸಿದಾಗ ಮಧ್ಯಮ ಮಟ್ಟದ ವಾಯು ಮಾಲಿನ್ಯದ ಪ್ರದೇಶದಲ್ಲಿ ಜೀವಿಸುವ ಮಂದಿಯಲ್ಲಿ ಪಾರ್ಕಿನ್ಸನ್​ ರೋಗ ಅಭಿವೃದ್ಧಿಯಾಗುವ ಸಾಧ್ಯತೆ ಶೇ 56ರಷ್ಟಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಧ್ಯಯನವನ್ನು ಆನ್​ಲೈನ್​ ಪಬ್ಲಿಕೇಷನ್​ ಆದ ಜರ್ನಲ್​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ಪಾರ್ಕಿನ್ಸನ್ ಕಾಯಿಲೆಯ ಭೌಗೋಳಿಕ ಮಾದರಿಗಳು ಮತ್ತು ಸೂಕ್ಷ್ಮ ಕಣಗಳೊಂದಿಗಿನ ರಾಷ್ಟ್ರವ್ಯಾಪಿ ಮತ್ತು ಪ್ರದೇಶ-ನಿರ್ದಿಷ್ಟ ಸಂಬಂಧಗಳ ಪರೀಕ್ಷೆ ನಡೆಸಲಾಗಿದೆ. ಜನಸಂಖ್ಯೆ ಆಧಾರಿತ ಭೌಗೋಳಿಕ ಅಧ್ಯಯನವೂ ಸರಿಸುಮಾರು 90 ಸಾವಿರ ಜನರಲ್ಲಿ ಪಾರ್ಕಿನ್ಸನ್ ​ ರೋಗವನ್ನು ಪತ್ತೆ ಮಾಡಲಾಗಿದೆ.

ಈ ಹಿಂದಿನ ಅಧ್ಯಯನದಲ್ಲಿ ಧೂಳಿನ ಸೂಕ್ಷ್ಮ ಕಣಗಳು ಮಿದುಳಿನ ಊರಿಯುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತೋರಿಸಿದ್ದವು. ಇದರಿಂದ ಪಾರ್ಕಿನ್ಸ್​​ ರೋಗ ಅಭಿವೃದ್ಧಿಯಾಗುತ್ತದೆ ಎಂಬುದು ತಿಳಿದು ಬಂದಿತ್ತು ಎಂದು ಅಧ್ಯಯನ ಲೇಖಕ ಅಮೆರಿಕದ ಬ್ಯಾರೋ ನ್ಯೂರೋಲಾಜಿಕಲ್​ ಇನ್ಸುಟಿಟ್ಯೂಟ್​​ನ ಬ್ರಿಟ್ಟ್ನಿ ತಿಳಿಸಿದ್ದಾರೆ.

ವಾಯು ಮಾಲಿನ್ಯ-ಪಾರ್ಕಿನ್ಸನ್​ ನಡುವಿನ ಸಂಬಂಧ: ಈ ಅಧ್ಯಯನಕ್ಕೆ ಅತ್ಯಾಧುನಿಕ ಭೂಗೋಳ ವಿಶ್ಲೇಷಣೆ​ ತಂತ್ರವನ್ನು ಬಳಕೆ ಮಾಡಲಾಗಿದೆ. ಮೊದಲ ಬಾರಿಗೆ ನಾವು ಅಮೆರಿಕದಲ್ಲಿ ಪಾರ್ಕಿನ್ಸನ್​​​​ ರೋಗ ಮತ್ತು ಸೂಕ್ಷ್ಮ ಕಣಗಳ ಮಾದರಿ ನಡುವಿನ ಬಲವಾದ ಸಂಬಂಧ ಕಂಡಿದ್ದೇವೆ. ಅಧ್ಯಯನದಲ್ಲಿ ವಾಯು ಮಾಲಿನ್ಯ ಮತ್ತು ಪಾರ್ಕಿನ್ಸನ್​ ರೋಗದ ನಡುವಿನ ಸಂಬಂಧವೂ ದೇಶಾದ್ಯಂತ ಇರುವ ಎಲ್ಲಾ ಭಾಗಗಳಲ್ಲಿ ಒಂದೇ ರೀತಿಯಾಗಿದೆ ಎಂಬುದು ಕಂಡುಬಂದಿಲ್ಲ. ಆ ಪ್ರದೇಶದ ವಾಯು ಮಾಲಿನ್ಯಕ್ಕೆ ತಕ್ಕಂತೆ ಇದರಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

ಪ್ರದೇಶವಾರು ವಿಭಿನ್ನತೆ: ಪಾರ್ಕಿನ್ಸ್​​ ರೋಗದಲ್ಲಿನ ಈ ಪ್ರಾದೇಶವಾರು ವ್ಯತ್ಯಾಸವೂ ಸೂಕ್ಷ್ಮಕಣಗಳ ಮಾದರಿಯಲ್ಲಿನ ಸಂಯುಕ್ತದಲ್ಲಿನ ಪ್ರದೇಶವಾರು ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ. ಕೆಲವು ಪ್ರದೇಶದಲ್ಲಿ ಸೂಕ್ಷ್ಮ ಕಣಗಳು ಹೆಚ್ಚಿ ವಿಷಪೂರಿತ ಅಂಶ ಹೊಂದಿರುವುದು ಕಂಡುಬಂದಿದೆ ಎಂದಿದ್ದಾರೆ. ಈ ಸಂಶೋಧನೆ ದತ್ತಾಂಶವೂ ಈ ಸಂಬಂಧ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಮತ್ತು ಪಾರ್ಕಿನ್ಸನ್​​ ಮತ್ತು ಇತರೆ ಸಂಬಂಧಿತ ಅನಾರೋಗ್ಯದ ಅಪಾಯ ಕಡಿಮೆ ಮಾಡುವಲ್ಲಿ ಸಹಾಯಕವಾಗಲಿದೆ.

ಅನೇಕ ವರ್ಷಗಳಿಂದಲೂ ಸಂಶೋಧಕರು ಪಾರ್ಕಿನ್ಸನ್​ ರೋಗದ ಮೇಲೆ ಪರಿಸರದ ಅಪಾಯ ಅಂಶವನ್ನು ಪತ್ತೆ ಮಾಡುತ್ತಲೇ ಇದ್ದಾರೆ. ಬಹುತೇಕ ಈ ಪ್ರಯತ್ನಗಳು ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿವೆ. ಈ ಅಧ್ಯಯನವೂ ವಾಯು ಮಾಲಿನ್ಯವೂ ಪಾರ್ಕಿನ್ಸನ್​​ ರೋಗದ ಅಭಿವೃದ್ಧಿಯ ಕೊಡುಗೆಯನ್ನು ನಾವು ನೋಡಬೇಕಿದೆ ಎಂದು ಸಲಹೆ ನೀಡುತ್ತದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ:ಪಾರ್ಕಿನ್ಸನ್​ ಕಾಯಿಲೆ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ ಇದು!

ABOUT THE AUTHOR

...view details