2018ರಲ್ಲಿ 14.1 (ಅಂದಾಜು 1.41 ಕೋಟಿ) ಮಿಲಿಯನ್ ಜನರು ಅನುಸರಿಸುವ ಕಳಪೆ ಆಹಾರ ಪದ್ದತಿಯೂ ಟೈಪ್ 2 ಡಯಾಬಿಟೀಸ್‌ಗೆ ಕಾರಣವಾಗಿದೆ. ಜಾಗತಿಕವಾಗಿ ಇದು ಶೇ 70ರಷ್ಟು ಪ್ರತಿನಿಧಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ. ಜಗತ್ತಿನ ಶೇ 30ರಷ್ಟು ಜನಸಂಖ್ಯೆ ಹೊಂದಿರುವ ದೇಶಗಳಾದ ಭಾರತ, ನೈಜೀರಿಯಾ ಮತ್ತು ಇಥಿಯೋಪಿಯಾದಲ್ಲಿ ಟೈಪ್ 2 ಡಯಾಬಿಟೀಸ್‌ಗೆ ಅನಾರೋಗ್ಯಕರ ಆಹಾರ ಪದ್ಧತಿ ಸಂಬಂಧ ಹೊಂದಿದೆ.
ಈ ಕುರಿತು ಜರ್ನಲ್ ನೇಚರ್ ಮೆಡಿಸಿನ್ ಸಂಶೋಧನಾತ್ಮಕ ವರದಿ ಪ್ರಕಟಿಸಿದೆ. 1990 ಮತ್ತು 2018ರ ದತ್ತಾಂಶವನ್ನು ವಿಶ್ಲೇಷಿಸಿದಾಗ ಜಾಗತಿಕ ಪ್ರದೇಶದಲ್ಲಿ ಆಹಾರ ಪದ್ದತಿ ಟೈಪ್ 2 ಡಯಾಬಿಟೀಸ್‌ಗೆ ಕಾರಣ ಎಂಬುದನ್ನು ತೋರಿಸಿದೆ. 11 ಆಹಾರ ಪದ್ದತಿಗಳನ್ನು ಗಮನಿಸಿದಾಗ 3 ಆಹಾರಗಳು ಅತಿ ಹೆಚ್ಚಿನ ಕೊಡುಗೆ ನೀಡಿರುವುದು ಗೊತ್ತಾಗಿದೆ. ಅವುಗಳೆಂದರೆ, ಅಧಿಕ ಅನ್ನ ಮತ್ತು ಗೋಧಿ ಬಳಕೆ, ಧಾನ್ಯಗಳ ಬಳಕೆ ಮತ್ತು ಅತಿಯಾದ ಮಾಂಸದ ಬಳಕೆ ಆಗಿದೆ.
ಅಧಿಕ ಜ್ಯೂಸ್ ಸೇವನೆ, ಪಿಷ್ಟವಿಲ್ಲದ ಹಣ್ಣು, ಒಣಹಣ್ಣು ಅಥವಾ ಬೀಜ ಕೂಡ ಪರಿಣಾಮ ಬೀರುತ್ತಿದೆ ಎಂಬುದು ಕೂಡಾ ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಳಪೆ ಕಾರ್ಬೋಹೈಡ್ರೇಟ್ ಗುಣಮಟ್ಟವೂ ಆಹಾರ ಪದ್ಧತಿ ಟೈಪ್ 2 ಡಯಾಬಿಟೀಸ್‌ಗೆ ಜಾಗತಿಕವಾಗಿ ಕಾರಣವಾಗಿದೆ ಎಂದು ಅಮೆರಿಕದ ಟುಫ್ಟಸ್ ಯುನಿವರ್ಸಿಟಿ ತಿಳಿಸಿದೆ.
ಟೈಪ್ 2 ಡಯಾಬಿಟೀಸ್ ದೇಹದ ಇನ್ಸುಲಿನ್ ಜೀವಕೋಶಗಳ ಪ್ರತಿರೋಧದಿಂದ ಇರುತ್ತದೆ. ಇದು ಹಾರ್ಮೋನ್ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. 1990 ಮತ್ತು 2018ರ ನಡುವೆ 184 ದೇಶಗಳಲ್ಲಿ ಟೈಪ್ 2 ಡಯಾಬಿಟೀಸ್ ಪ್ರಕರಣಗಳು ಹೆಚ್ಚಾಗಿವೆ. ಇದು ವ್ಯಕ್ತಿಯ ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.