ಲಿವರ್‌ಪೂಲ್ ಯೂನಿವರ್ಸಿಟಿ ಹಾಸ್ಪಿಟಲ್ಸ್‌ನ ಸಂಶೋಧಕರ ತಂಡದ ನೇತೃತ್ವದ ಸಂಶೋಧನೆಯು 2018 ಮತ್ತು 2021ರ ನಡುವೆ ನಡೆದ ಯುಕೆಯ ಏಳು ಹಿಂದಿನ ಪ್ರಕರಣಗಳ ವಿಶ್ಲೇಷಣೆಯನ್ನು ಆಧರಿಸಿದೆ. ಈ ಪ್ರಮುಖ ಸಂಶೋಧನೆಯ ಪ್ರಕಾರ, ಯುಕೆಯ ಹಿಂದಿನ ಏಳು ಪ್ರಕರಣಗಳಲ್ಲಿ ಒಬ್ಬರು ತಮ್ಮ 40ರ ಹರೆಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಮೊದಲು ನೈಜೀರಿಯಾದಲ್ಲಿ ಮಂಕಿಪಾಕ್ಸ್‌ಗೆ ತುತ್ತಾಗಿದ್ದರು. ಅನಾರೋಗ್ಯಕ್ಕೆ ಒಳಗಾದ 76 ದಿನಗಳ ನಂತರವೂ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇತ್ತು ಎಂದು ಸಂಶೋಧನೆಯ ವರದಿಯನ್ನು ಡೈಲಿ ಮೇಲ್ ವರದಿ ಮಾಡಿದೆ.
ಆ ವ್ಯಕ್ತಿಯನ್ನು ಚಿಕಿತ್ಸೆಗೆ ಒಳಪಡಿಸಿ ಕೆಲವು ವಾರಗಳ ನಂತರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಇದಾದ ಆರು ವಾರಗಳ ನಂತರ ಮೊದಲ ಬಾರಿಗೆ ಸೆಕ್ಸ್ ಮಾಡಿದ್ದಾರೆ. ಪರಿಣಾಮ ಈ ವೈರಸ್ ಮತ್ತೆ ವಕ್ಕರಿಸಿದೆ. ಬಳಿಕ ಆತ ವೈದ್ಯರ ಬಳಿ ಹೋಗಿ ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದರ ಬಗ್ಗೆ ತಿಳಿಸಿದ್ದಾನೆ. ಇದರಿಂದ ಸ್ವಲ್ಪ ತಲೆಕೆಸಿಕೊಂಡ ವೈದ್ಯರಿಗೆ ಕಂಡು ಬಂದಿದ್ದೇ ಇದು ಮಂಕಿಪಾಕ್ಸ್‌ನ ಲಕ್ಷಣವಾಗಿದೆ ಎಂದು.
ಈ ಎಲ್ಲಾ ಘಟನೆಯ ನಂತರ ವ್ಯಕ್ತಿಗೆ PCR ಪರೀಕ್ಷೆ ನಡೆಸಲಾಗಿ ಪಾಸಿಟಿವ್ ಬಂದಿದೆ. ಆದರೆ, ವ್ಯಕ್ತಿಗೆ ಯಾವುದೇ ಗಂಭೀರ ಸಮಸ್ಯೆಗಳ ಲಕ್ಷಣ ಮೊದಲಿನಂತೆ ಕಂಡು ಬರಲಿಲ್ಲ. ರಕ್ತ ಮತ್ತು ಗಂಟಲಿನ ಸ್ವ್ಯಾಬ್‌ಗಳಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದೆ ಎಂದು ಅಧ್ಯಯನವು ವರದಿ ಮಾಡಿದ್ದರೂ ಸಹ ಆಸ್ಪತ್ರೆಯ ಪ್ರಮುಖ ಲೇಖಕ ಡಾ. ಹಗ್ ಆಡ್ಲರ್ ಅವರು ಅಷ್ಟು ಸಮಯದವರೆಗೆ ವೈರಸ್ ಗಂಟಲು ಮತ್ತು ರಕ್ತದಲ್ಲಿ ಇರಬಹುದೇ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕವಾಗಿ ಮಂಕಿಪಾಕ್ಸ್ ರೋಗವನ್ನು ಸಾಂಕ್ರಾಮಿಕ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದಕ್ಕೆ ಒಳಗಾದ ವ್ಯಕ್ತಿಗಳಲ್ಲಿ ವಿಶಿಷ್ಟವಾದ ದದ್ದು ಮತ್ತು ಗಾಯ ಉಂಟಾಗಲಿದೆ. ಇದು ಕೆಲವು ವಾರಗಳ ನಂತರ ಗುಣವಾಗುತ್ತದೆ. ಆದರೆ, ಈ ವ್ಯಕ್ತಿಗೆ ಎರಡನೇ ಬಾರಿಗೂ ದದ್ದು ಇತ್ತು, ಇದರರ್ಥ ಆತ ಮತ್ತೇ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರಬಹುದು ಎಂದು ವರದಿ ಹೇಳಿದೆ.