ಜಿನೀವಾ: ಕಳೆದ ವರ್ಷ, 2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಜನರಲ್ಲಿ ಟಿಬಿ ರೋಗ ಪತ್ತೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. 2021ರಲ್ಲಿ 10.3 ಮಿಲಿಯನ್ ಜನರು ಕ್ಷಯ ರೋಗಕ್ಕೆ ತುತ್ತಾಗಿದ್ದರು. ಇದೀಗ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಚೇತರಿಕೆ ಪ್ರಮಾಣದಿಂದ ರೋಗ ನಿರ್ಣಯ ಮಾಡಲು ಸಾಧ್ಯವಾಗಿದೆ. ಇದರಿಂದ ಚೇತರಿಕೆ ಪ್ರಮಾಣ ಕೂಡ ಹೆಚ್ಚಾಗಿದೆ.
2020-201ರಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ ದೇಶಗಳಲ್ಲಿ ಜಾಗತಿಕವಾಗಿ ಶೇ 60ರಷ್ಟು ರೋಗ ಪತ್ತೆಯಾಗಿದ್ದವು. ಈ ರೋಗದ ಬಗ್ಗೆ ಹೊಸ ಗುರಿಗಳನ್ನು ಸಾಧಿಸುವ ಪ್ರಯತ್ನಕ್ಕೆ ಕೂಡ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ನಮ್ಮ ಪೂರ್ವಜರು ಕ್ಷಯರೋಗದಿಂದ ಬಳಲಿ, ಅದರಿಂದ ಸಾವನ್ನಪ್ಪಿದ್ದು, ಇದಕ್ಕೆ ನಿಖರ ಕಾರಣವೇನು? ರೋಗಕ್ಕೆ ಚಿಕಿತ್ಸೆ ಏನು ಎಂಬುದು ಇರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೊಸ್ ಅಥನೊಮ್ ಗೇಬ್ರೆಯೆಸಸ್ ತಿಳಿಸಿದ್ದಾರೆ.
ಚಿಕಿತ್ಸೆಯ ಭರವಸೆ: ಇಂದು ನಾವು ಕಂಡ ಕನಸಿನಂತೆ ಜ್ಞಾನ ಮತ್ತು ಸಾಧನವನ್ನು ಹೊಂದಿದ್ದೇವೆ. ನಮಗೆ ರಾಜಕೀಯ ಬದ್ಧತೆ ಇದೆ. ಇಂದು ನಾವು ಯಾವುದೇ ಹಿಂದಿನ ಪೀಳಿಗೆ ಹೊಂದಿಲ್ಲದಂತಹ ಅವಕಾಶ ಹೊಂದಿದ್ದೇವೆ. ಈ ಅವಕಾಶದಿಂದ ಟಿಬಿಯ ಕಥೆಯ ಕೊನೆ ಅಧ್ಯಾಯವನ್ನು ಬರೆಯಬೇಕಿದೆ ಎಂದರು.
2022ರಲ್ಲಿ 10.6 ಮಿಲಿಯನ್ ಮಂದಿ ಟಿಬಿಗೆ ತುತ್ತಾಗಿದ್ದರೆ, 2021ರಲ್ಲಿ 10.3 ಮಿಲಿಯನ್ ಮಂದಿ ಕ್ಷಯ ರೋಗಕ್ಕೆ ಒಳಗಾಗಿದ್ದಾರು. ಭೌಗೋಳಿಕವಾಗಿ 2022ರಲ್ಲಿ ಆಗ್ನೇಯ ಏಷ್ಯ (46ರಷ್ಟು), ಆಫ್ರಿಕಾ (23ರಷ್ಟು) ಮತ್ತು ಪಾಶ್ಚಿಮಾತ್ಯ ಫೆಸಿಫಿಕ್ (18ರಷ್ಟು) ಪೂರ್ವ ಮಡೆಟೇರಿಯನ್ (8.1ರಷ್ಟು) ಮತ್ತು ಅಮೆರಿಕ (2.1) ಮತ್ತು ಯುರೋಪ್ (2.2ರಷ್ಟು) ಪ್ರಕರಣಗಳು ದಾಖಲಾಗಿದ್ದವು.