ಕರ್ನಾಟಕ

karnataka

ETV Bharat / sukhibhava

ಹೋಳಿ ಸಂಭ್ರಮ ದುಪ್ಪಟ್ಟುಗೊಳಿಸುವ ಟಾಪ್‌ 5 ಸಿಹಿ ತಿನಿಸು, ಪಾನೀಯಗಳು.. - ಹೋಳಿ ಹಬ್ಬಕ್ಕೆ ವಿಶೇಷ ಖಾದ್ಯಗಳು

ಹೋಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಹಂಚಲೆಂದೇ ವಿಶೇಷವಾಗಿ ಹಲವು ತಿಂಡಿ, ಪಾನೀಯಗಳನ್ನು ತಯಾರಿಸಲಾಗುತ್ತದೆ. ಬೇಸಿಗೆಯ ಬೇಗೆಯನ್ನು ತಣಿಸಲು ಕೆಲ ಪಾನೀಯಗಳು ಅನುಕೂಲ ಹಾಗೂ ಆರೋಗ್ಯಕರವೂ ಆಗಿವೆ.

5 delectable items to add to your Holi party menu
ಹೋಳಿ ಸಂಭ್ರಮ ದುಪ್ಪಟ್ಟುಗೊಳಿಸುವ ಟಾಪ್‌ 5 ಸಿಹಿ ತಿನಿಸು, ಪಾನೀಯಗಳು...

By

Published : Mar 18, 2022, 7:48 AM IST

ನವದೆಹಲಿ:ದೇಶದ ಎಲ್ಲ ಹಬ್ಬಗಳ ಸಮಯದಲ್ಲಿ ಸ್ನೇಹಿತರು, ಬಂಧು ಬಾಂಧವರು ಹಾಗೂ ಪ್ರೀತಿಪಾತ್ರರಿಗೆ ಶುಭಾಶಯ ಕೋರಿ ಸಹಿ ಹಂಚಿ ಸಂಭ್ರಮಿಸುವಂತೆ ಮಾಡುತ್ತದೆ. ಆದರೆ ಹೋಳಿ ಹಬ್ಬದಲ್ಲಿ ಇದು ಜಾಸ್ತಿಯೇ ಇರುತ್ತೆ. ಸೋದರಸಂಬಂಧಿಗಳು, ಸ್ನೇಹಿತರು ಹಾಗೂ ನೆರೆಹೊರೆಯವರು ಒಂದೇ ಸೂರಿನಡಿ ಒಟ್ಟುಗೂಡಿ ಆಚರಿಸಿದಾಗ ಮಾತ್ರ ನಿಜವಾದ ಹೋಳಿ ಎನಿಸುತ್ತದೆ.

ಎಲ್ಲ ಹಬ್ಬಗಳ ಪೈಕಿ ಕೆಲ ಹಬ್ಬಗಳಲ್ಲಿ ಮಾತ್ರ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇಂತಹ ಭಕ್ಷ್ಯಗಳು ಸಾಂಪ್ರದಾಯಿಕ ಹಬ್ಬದ ಹೊಳಪನ್ನು ಹೆಚ್ಚಿಸುತ್ತುವ ಜೊತೆಗೆ ಮೋಜು ಮತ್ತು ಉಲ್ಲಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೋಳಿಯೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಹೋಳಿ ಹಬ್ಬಕ್ಕಾಗಿ ಮಾಡುವಂತ ದೇಶದ ಟಾಪ್ 5 ರುಚಿಕರವಾದ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ.

ಥಂಡೈ: ಹಾಲು, ಸಕ್ಕರೆ, ಫೆನ್ನೆಲ್ ಬೀಜಗಳು, ಗುಲಾಬಿ ದಳ, ಮೆಣಸು, ಗಸಗಸೆ ಬೀಜ, ಏಲಕ್ಕಿ, ಕೇಸರಿ ಮಿಶ್ರಣದಿಂದ ತಯಾರಿಸಲಾದ ಭಾರತೀಯ ತಂಪು ಪಾನೀಯವೇ ಥಂಡೈ. ಇದನ್ನು ಸಾಮಾನ್ಯವಾಗಿ ಬಾದಾಮಿ ಅಂತಲೂ ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.

ಭುಜಿಯಾ: ಇದನ್ನು ಸಾಮಾನ್ಯವಾಗಿ ಭುಜಿಯಾ ಎಂದು ಕರೆಯಲಾಗುತ್ತದೆ, ಇದು ಭಾರತದ ಪಶ್ಚಿಮ ರಾಜ್ಯವಾದ ರಾಜಸ್ಥಾನದಲ್ಲಿರುವ ಬಿಕಾನೇರ್‌ ಮೂಲವಾಗಿದೆ. ಹುರುಳಿ ಹಿಟ್ಟು ಮತ್ತು ಮಸಾಲೆಗಳನ್ನು ಬಳಸಿ ತಯಾರಿಸಲಾಗುವ ಜನಪ್ರಿಯ ಗರಿಗರಿಯಾದ ತಿಂಡಿಯಾಗಿದೆ. ಇದು ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ.

ಬಾದಾಮ್ ಪಾನೀಯ: ತಂಪು ಪಾನೀಯ ಬಾದಾಮ್‌ ಮಿಲ್ಕ್‌ ತುಂಬಾ ರುಚಿಕರವಾಗಿರುತ್ತದೆ. ಬೇಸಿಗೆಯಾಗಿರುವುದರಿಂದ ಕೂಲ್ಡ್‌ ಬಾದಾಮ್‌ ಸೇವೆ ಚನ್ನಾಗಿ ಇರುತ್ತೆ. ಮಿಲ್ಕ್‌ ಶೇಕ್‌ಗಳನ್ನು ಕುಡಿಯುವ ಯುವಕರು ಬಾದಾಮ್‌ ಮಿಲ್ಕ್‌ ಅನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಹಾಲು, ಬಾದಾಮಿ ಪೌಂಡರ್‌, ಸರ್ಕರ ಮಿಶ್ರಣ ಮಾಡಿ ಇದನ್ನು ತಯಾರಿಸಲಾಗುತ್ತದೆ.

ರಸಗುಲ್ಲ: ಸಿಹಿ ತಿನಿಸುಗಳಲ್ಲಿ ರಸಗುಲ್ಲ ಕೂಡ ಒಂದಾಗಿದ್ದು, ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಇದನ್ನು ಹಂಚಿ ಸಂಭ್ರಸಲಾಗುತ್ತದೆ. ಜೊತೆಗೆ ಗುಲಾಬ್ ಜಾಮೂನ್, ಕೇಸರ್ ಅಂಗೂರಿ ಪೇಠಾ ಅಥವಾ ರಾಜ್ ಭೋಗ್ ಅನ್ನು ಸಹ ಆರಿಸಿಕೊಳ್ಳಬಹುದು.

ಗುಜಿಯಾ(ಕರಿಗಡುಬು): ಹೋಳಿ ಪಾರ್ಟಿ ಟೇಬಲ್‌ಗಳಲ್ಲಿ ನೋಡಬಹುದಾದ ಮತ್ತೊಂದು ಐಟಂ ಗುಜಿಯಾ. ಇದನ್ನು ಕರ್ನಾಟಕದಲ್ಲಿ ಕರಿಗಡುಬು ಅಂತ ಕರೆಯಲಾಗುತ್ತೆ. ಹೋಳಿ ಮತ್ತು ಗುಜಿಯಾ ಸರಳವಾಗಿ ಪರಸ್ಪರರ ಜೋಡಿಯಾಗಿದ್ದು, ಹಬ್ಬದ ಸಂದರ್ಭದಲ್ಲಿ ಈ ಸಿಹಿ ಮತ್ತಷ್ಟು ಖುಷಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:ಹೋಳಿ ಆಡುವ ಮೊದಲು ನಂತರ ನಿಮ್ಮ ಚರ್ಮ, ಕೂದಲಿನ ಆರೈಕೆ ಹೇಗೆ ? ವೈದ್ಯರ ಸಲಹೆಗಳೇನು

ABOUT THE AUTHOR

...view details