ಕರ್ನಾಟಕ

karnataka

ETV Bharat / state

ಸುರಪುರ: ಬಾವಿಯಲ್ಲಿ ಈಜಲು ಹೋಗಿ ಯುವಕ ಸಾವು - ಬಾವಿಯಲ್ಲಿ ಈಜು ಕಲಿಯುತ್ತಿದ್ದ ಯುವಕ ಸಾವು

ಸುರಪುರದಲ್ಲಿನ ಮೀನುಗಾರಿಕೆ ಇಲಾಖೆ ಬಳಿಯಿರುವ ತೆಂಗಿನ ಬಾವಿಯಲ್ಲಿ ಈಜು ಕಲಿಯಲು ಹೋಗಿದ್ದ ಯುವಕ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತೆಂಗಿನ ಬಾವಿಯಲ್ಲಿ ಈಜಲು ಹೋಗಿ ಯುವಕ ಸಾವು
Youth died when he learning swim in well at Surapura

By

Published : Apr 5, 2021, 7:33 AM IST

ಸುರಪುರ:ಮೀನುಗಾರಿಕೆ ಇಲಾಖೆ ಬಳಿಯಿರುವ ತೆಂಗಿನ ಬಾವಿಯಲ್ಲಿ ಯುವಕನೊಬ್ಬ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

ಬಾವಿಯಲ್ಲಿ ಈಜಲು ಹೋದ ಯುವಕ ಸಾವು

ನಗರದ ಫಕೀರ್ ಮೊಹಲ್ಲಾ ನಿವಾಸಿಯಾದ ಅಲ್ತಾಫ್ (21) ಮೃತ ಯುವಕ. ಈತನಿಗೆ ಈಜು ಬರುತ್ತಿರಲಿಲ್ಲ. ಹೀಗಾಗಿ ಗೆಳೆಯರೊಂದಿಗೆ ಈಜು ಕಲಿಯಲೆಂದು ಖಾಲಿ ಡಬ್ಬಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಮೀನುಗಾರಿಕೆ ಇಲಾಖೆ ಬಳಿಯಿರುವ ತೆಂಗಿನ ಬಾವಿಗೆ ಹಾರಿದ್ದಾನೆ. ಹೀಗೆ ಈಜುತ್ತಿರುವಾಗ ದಾರ ತುಂಡಾದ ಪರಿಣಾಮ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ನಗರದ ಭೋವಿಗಲ್ಲಿಯ ಮೀನುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಯುವಕರು ಧಾವಿಸಿ ಸತತ ಕಾರ್ಯಾಚರಣೆ ನಡೆಸಿ ಯುವಕನ ಶವವನ್ನು ಪತ್ತೆ ಮಾಡಿ, ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details