ಕರ್ನಾಟಕ

karnataka

ETV Bharat / state

ನಾರಾಯಣಪೇಟ್​ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ನೇಹಿತರಿಬ್ಬರು ದುರ್ಮರಣ - Two friends electrocuted to death in Yadgir

ಹೋಟೆಲ್​ ಮೇಲೆ ಊಟ ಮಾಡಿ ವಾಪಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ನೇಹಿತರಿಬ್ಬರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ನಾರಾಯಣಪೇಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

two-friends-electrocuted-to-death-in-yadgir
ವಿದ್ಯುತ್ ತಂತಿ ಸ್ಪರ್ಶಿಸಿ ಸ್ನೇಹಿತರಿಬ್ಬರು ದುರ್ಮರಣ

By

Published : Nov 8, 2021, 8:21 AM IST

ಗುರುಮಠಕಲ್ (ಯಾದಗಿರಿ): ಹೋಟೆಲ್​​ನಲ್ಲಿ ಊಟ ಮಾಡಿ ವಾಪಸಾಗುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ನಾರಾಯಣಪೇಟ್​​ನಲ್ಲಿ ನಡೆದಿದೆ.

ಮೃತರನ್ನು ಗುರುಮಠಕಲ್​​ನ ವಂಶಿರಾಜ್ ಪತ್ತಿ (21) ರವಿ ಹೂಗಾರ್ (22) ಎಂದು ಗುರುತಿಸಲಾಗಿದೆ. ಹೋಟೆಲ್​​ ಟೆರೆಸ್​ನಲ್ಲಿ ಊಟ ಮಾಡಿ ಮರಳುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ ಸಂಭವಿಸಿದೆ.

ಹೋಟೆಲ್ ಮೇಲ್ಭಾಗ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಸ್ನೇಹಿತನಿಗೆ ಶಾಕ್ ಹೊಡೆಯುತ್ತಿರುವುದನ್ನು ಕಂಡು ಆತನನ್ನು ತಪ್ಪಿಸಲು ಹೋಗಿ ಇನ್ನೋರ್ವನಿಗೂ ವಿದ್ಯುತ್ ತಗುಲಿದೆ. ಈ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ನಾರಾಯಣಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಬೆಂಗಳೂರಲ್ಲಿ ಪಾರ್ಕಿಂಗ್ ಸಿಬ್ಬಂದಿ ಯಾಮಾರಿಸಿ ಕಾರ್​ ಕದ್ದೊಯ್ದ​ ಖದೀಮರು

ABOUT THE AUTHOR

...view details