ಕರ್ನಾಟಕ

karnataka

ETV Bharat / state

ಬೆಂಕಿ ಹೊತ್ತಿರುವ ಬಿಜೆಪಿ ಮನೆಗೆ ಕಾಂಗ್ರೆಸ್​ ಶಾಸಕರು ಹೋಗಲ್ಲ: ಶರಣಬಸಪ್ಪ ದರ್ಶನಾಪುರ

ಬೆಂಕಿ ಹೊತ್ತಿರುವ ಬಿಜೆಪಿ ಮನೆಗೆ ಕಾಂಗ್ರೆಸ್​ ಶಾಸಕರಾರೂ ಹೋಗಲ್ಲ. ಕಾಂಗ್ರೆಸ್​​​ನ ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂದು ಬಿಪಿಪಿಯವರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

Sharanabasappa Darshanapur statement on present politics
ಶರಣಬಸಪ್ಪ ದರ್ಶನಾಪುರ

By

Published : May 30, 2020, 6:47 PM IST

ಯಾದಗಿರಿ: ಬಿಜೆಪಿ ಮನೆಗೆ ಈಗ ಬೆಂಕಿ ಹೊತ್ತಿದೆ. ಬೆಂಕಿ ಹೊತ್ತಿದ ಬಿಜೆಪಿ ಮನೆಗೆ ಕಾಂಗ್ರೆಸ್ ಶಾಸಕರ‍್ಯಾರೂ ಹೊಗಲ್ಲ ಎಂದು ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ಬಿಜೆಪಿ ನಾಯಕರ ನಡುವೆ ಭಿನ್ನಮತ ಭುಗಿಲೆದ್ದಿದೆ. ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಲ್ಲ. ಅಲ್ಲದೇ, ಕಾಂಗ್ರೆಸ್ ಶಾಸಕರ‍್ಯಾರೂ ಬಿಜೆಪಿಗೆ ಹೋಗಲ್ಲ ಎಂದು ಸಚಿವ ರಮೇಶ್​​ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

ಶಾಸಕ ಶರಣಬಸಪ್ಪ ದರ್ಶನಾಪುರ

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಾಸಕರು ಕಹಿ ಅನುಭವಿಸುತ್ತಿದ್ದಾರೆ. ಬಿಜೆಪಿ ಬೆಳವಣಿಗೆಯನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಿಜೆಪಿ ಅತೃಪ್ತ ಶಾಸಕರು ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸಮಾಧಾನಗೊಂಡ ಬಿಜೆಪಿ ಶಾಸಕರ ನಡೆ ಸರ್ಕಾರ ಬೀಳಿಸುವುದು, ಇಲ್ಲವೇ ಮುಖ್ಯ ನಾಯಕರ ಬದಲಾವಣೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕಾಂಗ್ರೆಸ್ ಆಪರೇಷನ್ ಹಸ್ತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details