ಯಾದಗಿರಿ:ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಬಳಿಯ ಕೃಷ್ಣಾ ಬ್ಯಾರೇಜ್ ಬಳಿ ಕಳೆದೆರಡು ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ನಿನ್ನೆ ರೈತರ ಮನವೊಲಿಸಲು ಬಂದ ಆರ್ಟಿಪಿಎಸ್ ಅಧಿಕಾರಿಯನ್ನು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ರೆ ಸ್ಥಳಕ್ಕೆ ಬಂದಿದ್ದು ಯಾಕೆ ಅಂತಾ ತಹಶೀಲ್ದಾರ್ ಸಂತೋಷಿರಾಣಿ, ಆರ್ಟಿಪಿಎಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ತಹಶೀಲ್ದಾರ್ ಜೊತೆ ರೈತರು ಸಹ ಅಧಿಕಾರಿಯ ಬೆವರಿಳಿಸಿದ್ದಾರೆ.
ಆರ್ಟಿಪಿಎಸ್ ಅಧಿಕಾರಿಗೆ ತಹಶೀಲ್ದಾರ್ ಫುಲ್ ಕ್ಲಾಸ್ ಎರಡು ದಿನದಿಂದ ಶಿವಪುರ, ಗುಡ್ಲೂರು, ಗೋನಾಲ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ರೈತ ಕುಟುಂಬಗಳು ಬ್ರಿಡ್ಜ್ ಬಳಿ ಪ್ರತಿಭಟನೆ ನಡೆಸುತ್ತಿವೆ. ಬ್ರಿಡ್ಜ್ ಹಿನ್ನೀರಿನಿಂದಾಗಿ ನದಿ ಮಧ್ಯದ ಜಮೀನು ಜಲಾವೃತಗೊಂಡು ವ್ಯವಸಾಯಕ್ಕೆ ತೊಂದರೆಯಾಗ್ತಿದೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಬ್ರಿಡ್ಜ್ ನಿರ್ಮಾಣಕ್ಕೂ ಮೊದಲು ನದಿ ಮಧ್ಯದ ಜಮೀನು ಮಳೆಗಾಲದಲ್ಲಿ ಜಲಾವೃತವಾಗ್ತಿತ್ತು. ಆದರೀಗ ಬ್ರಿಡ್ಜ್ ನಿರ್ಮಾಣದಿಂದ ವರ್ಷದ ಹನ್ನೆರಡು ತಿಂಗಳು ರೈತರ ಜಮೀನುಗಳು ಜಲಾವೃತವಾಗುತ್ತಿರುವುದರಿಂದ ವ್ಯವಸಾಯ ಮಾಡಲು ಸಾಧ್ಯವಾಗ್ತಿಲ್ಲ. ಹಾಗಾಗಿ ಅಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಿದ್ದರು.
ಮನವಿ ಮಾಡಿದ್ದರೂ ಸಹ ಏನೂ ಪ್ರಯೋಜನವಾಗದ ಕಾರಣ ಶಿವಪುರ, ಗೋನಾಲ, ಗುಂಡ್ಲೂರು ಗ್ರಾಮದ ರೈತರು ಧರಣಿ ನಡೆಸುತ್ತಿದ್ದಾರೆ. ಧರಣಿ ಕೈ ಬಿಡುವಂತೆ ಮನವೊಲಿಸಲು ಬಂದ ಆರ್ಟಿಪಿಎಸ್ ಅಧಿಕಾರಿಗೆ ಧರಣಿನಿರತ ರೈತರು ಕ್ಲಾಸ್ ತೆಗೆದುಕೊಂಡ ಪರಿಣಾಮ ಬಂದ ಹಾದಿಗೆ ಸುಂಕವಿಲ್ಲವೆಂದು ತಿಳಿದ ಅಧಿಕಾರಿ ವಾಪಸ್ ತೆರಳಿದ್ದಾರೆ.