ಕರ್ನಾಟಕ

karnataka

ETV Bharat / state

ಹುಣಸಗಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ .. ಓರ್ವನ ಬಂಧನ, ಇಬ್ಬರಿಗಾಗಿ ಪೊಲೀಸರ ಶೋಧ

ಯಾದಗಿರಿ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಯಿಂದ ನೊಂದು ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಕಾಮುಕರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹುಣಸಗಿ ಪಟ್ಟಣ ನಿವಾಸಿಗಳು ಮೃತದೇಹವನ್ನಿಟ್ಟುಕೊಂಡು ಕೆಲಕಾಲ ಮೌನ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.

repe-on-girl-accuse-in-surapura-hunasagi-city
ಸುರಪುರ ಅತ್ಯಾಚಾರ ಆರೋಪ

By

Published : May 9, 2021, 9:42 PM IST

Updated : May 10, 2021, 6:31 AM IST

ಸುರಪುರ : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

17 ವರ್ಷದ ಬಾಲಕಿ ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆಗೆ ತಮ್ಮ ಸಮೀಪದ ಮನೆಗೆ ಬಟ್ಟೆ ಹೊಲಿಸಿಕೊಂಡು ಬರಲು ಹೋಗಿದ್ದಳು. ಆಗ ಶಿವಕುಮಾರ್ ಬಾಚಿಮಟ್ಟಿ ಎಂಬ ಯುವಕ ತನ್ನ ಇಬ್ಬರು ಗೆಳೆಯರಾದ ಮಾಂತೇಶ ವಸ್ತ್ರದ ಮತ್ತು ಬಸನಗೌಡ ಪಾಟೀಲ್ ಎಂಬುವರೊಂದಿಗೆ ಬಂದು ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಸಿಂದಗಿ ತಾಲೂಕಿನ ಯಂಕಂಚಿಗೆ ಕರೆದೊಯ್ದಿದ್ದಾರೆ. ಅಲ್ಲಿನ ಲಾಡ್ಜ್ ಒಂದರಲ್ಲಿ ಬಾಲಕಿ ಮೇಲೆ ಶಿವಕುಮಾರ್ ಬಲವಂತದಿಂದ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗ್ತಿದೆ.

ಇತ್ತ ಮಗಳು ಕಾಣೆಯಾದ ಬಗ್ಗೆ ಪೋಷಕರು ಹುಡುಕಾಟ ನಡೆಸಿದಾಗ, ಹುಣಸಗಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಯುವಕರು ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ನಿಂತಾಗ ಅಲ್ಲಿಯ ಕೆಲಸಗಾರನೊಬ್ಬ ನೋಡಿರುವ ಕುರಿತು ಪೋಷಕರಿಗೆ ತಿಳಿಸಿದ್ದರು.

ಬಾಲಕಿ ಹಾಗೂ ಇಬ್ಬರು ಯುವಕರನ್ನು ಯಂಕಂಚಿಗೆ ಬಿಟ್ಟು ಮಹಾಂತೇಶ ವಸ್ತ್ರದ ಮರಳಿ ಬಂದಿದ್ದಾನೆ. ಈ ಸಂದರ್ಭದಲ್ಲಿ ಅವನನ್ನು ಥಳಿಸಿ ವಿಚಾರಿಸಿದಾಗ ಅಸಲಿ ಕಥೆಯನ್ನು ಬಾಯ್ಬಿಟ್ಟಿದ್ದಾನೆ. ನಂತರ ಪೋಷಕರು ಯಂಕಂಚಿಗೆ ಹೋದಾಗ ಬಸನಗೌಡ ಪೋಷಕರಿಗೆ ಸಿಕ್ಕಿದ್ದಾನೆ. ಅಲ್ಲದೆ, ಇಬ್ಬರು ಲಾಡ್ಜ್​ನಲ್ಲಿ ಇರುವುದಾಗಿ ತಿಳಿಸಿದ್ದಾನೆ. ಅಲ್ಲಿಗೆ ಪೋಷಕರು ಹೋಗಿ ನೋಡಿದಾಗ, ಬಾಲಕಿ ಹಾಗೂ ಶಿವಕುಮಾರ್​ ವಿಷ ಸೇವಿಸಿ ಒದ್ದಾಡುತ್ತಿರುವುದು ಕಂಡುಬಂದಿದೆ. ಇವರನ್ನು ತಕ್ಷಣ ಸಿಂದಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಅತ್ಯಾಚಾರ ಆರೋಪ

ಇತ್ತ ಯುವಕ ಶಿವಕುಮಾರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಬಾಲಕಿಯ ಸಂಬಂಧಿಕರು ತಮ್ಮ ಮಗಳು ಸಾಯುವಾಗ ಅತ್ಯಾಚಾರ ನಡೆದ ಬಗ್ಗೆ ಹೇಳಿದ್ದಾಳೆ ಎಂದು ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ನ್ಯಾಯಕ್ಕಾಗಿ ಮೌನ ಪ್ರತಿಭಟನೆ :ಮೃತ ಬಾಲಕಿಯ ಶವವನ್ನು ವಿಜಯಪುರ ಆಸ್ಪತ್ರೆಯಿಂದ ಹುಣಸಿಗಿಗೆ ತಂದು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹತ್ತು ನಿಮಿಷಗಳ ಕಾಲ ಶವವನ್ನಿಟ್ಟು ಮೌನ ಪ್ರತಿಭಟನೆಯನ್ನು ನಡೆಸಲಾಯಿತು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಮತ್ತು ಕುಟುಂಬಸ್ಥರು ಆಗ್ರಹಿಸಿ ನಂತರ ಶವಸಂಸ್ಕಾರ ನೆರವೇರಿಸಲಾಗಿದೆ.

Last Updated : May 10, 2021, 6:31 AM IST

ABOUT THE AUTHOR

...view details