ಯಾದಗರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಬುದ್ಧ ವ್ಯಕ್ತಿಯಲ್ಲ. ದೇಶದ ಮುಂದಿನ ಭಾವಿ ಪ್ರಧಾನಿಯಾಗುವ ವ್ಯಕ್ತಿತ್ವ ಅವರಲ್ಲಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಬುದ್ಧ ವ್ಯಕ್ತಿಯಲ್ಲ: ಮಾಜಿ ಶಾಸಕ ಮಾಲಕರೆಡ್ಡಿ - ಪ್ರಬುದ್ಧ ವ್ಯಕ್ತಿ
ಕಾಂಗ್ರೆಸ್ ಪಕ್ಷವು ಸಂಸ್ಕಾರ, ಸಂಸ್ಕೃತಿ, ವಿನಯ, ಹಿರಿತನಕ್ಕೆ ಬೆಲೆ ಕೊಡದ ಪಕ್ಷವಾಗಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ ಹೇಳಿದ್ದಾರೆ.
ಮಾಲಕರೆಡ್ಡಿ
ಕಾಂಗ್ರೆಸ್ ಪಕ್ಷವು ಸಂಸ್ಕಾರ, ಸಂಸ್ಕೃತಿ, ವಿನಯ, ಹಿರಿತನಕ್ಕೆ ಬೆಲೆ ಕೊಡದ ಪಕ್ಷವಾಗಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುತ್ತೆ. ಮತ್ತೆ ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದರು. ಇನ್ನು ನಾನು ಇನ್ನು ಸ್ವಲ್ಪ ದಿನಗಳವರೆಗೆ ಬದುಕಬಲ್ಲೆ. ಆದ್ರೆ ನಾನು ಸಾಯುವವರೆಗೆ ಸುಭದ್ರ ಸರ್ಕಾರ ನೋಡಿ ಸಾಯಬೇಕು ಅಂತ ಆಸೆ ಇದೆ. ಸುಭದ್ರ ಸರ್ಕಾರ ರಚನೆಯಾಗುವುದು ಮೋದಿಯಿಂದ ಮಾತ್ರ ಸಾಧ್ಯ ಎಂದರು.