ಸುರಪುರ (ಯಾದಗಿರಿ):ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಭತ್ತದ ಗದ್ದೆಗಳು ಜಲಾವೃತಗೊಂಡು ರೈತ ಕಂಗಾಲಾಗಿದ್ದಾನೆ.
ಸತತ ಮಳೆಯಿಂದ ಭತ್ತದ ಸಸಿ ನಾಶ: ರೈತರಿಗೆ ಗಾಯದ ಮೇಲೆ ಬರೆ
ಯಾದಗಿರಿ ಜಿಲ್ಲೆಯಲ್ಲಿ ಕೇವಲ ಮೂರೇ ದಿನಗಳಲ್ಲಿ ಸುಮಾರು 142 ಸೆಂಟಿಮೀಟರ್ ಮಳೆ ಸುರಿದಿದ್ದು, ಇದರಿಂದ ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಳೆಯಲಾರಂಭಿಸಿವೆ. ಇದರಿಂದ ತಿಂಗಳುಗಟ್ಟಲೆ ಭತ್ತದ ಸಸಿ ಬೆಳೆಸಿ, ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತ, ಸದ್ಯ ಮಳೆಯಿಂದ ಎಲ್ಲಾ ಬೆಳೆ ನೀರಲ್ಲಿರುವುದನ್ನು ಕಂಡು ಚಿಂತೆಗೀಡಾಗಿದ್ದಾನೆ.
ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರಿಗೂ ಸಂಕಷ್ಟ ತರಿಸಿದೆ. ತಾಲೂಕಿನ ಸತ್ಯಂಪೇಟೆಯ ರೈತರು ಗ್ರಾಮದ ಮುಂದಿನ ಹಳ್ಳದ ನೀರಿನಿಂದ ಸುಮಾರು 50 ಎಕರೆಯಷ್ಟು ಗದ್ದೆಗಳಲ್ಲಿ ಭತ್ತದ ಸಸಿ ನಾಟಿ ಮಾಡಿದ್ದರು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಮೂರೇ ದಿನಗಳಲ್ಲಿ ಸುಮಾರು 142 ಸೆಂಟಿಮೀಟರ್ ಮಳೆ ಸುರಿದಿದ್ದು, ಇದರಿಂದ ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಳೆಯಲಾರಂಭಿಸಿವೆ. ಇದರಿಂದ ತಿಂಗಳುಗಟ್ಟಲೆ ಭತ್ತದ ಸಸಿ ಬೆಳೆಸಿ, ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತ, ಸದ್ಯ ಮಳೆಯಿಂದ ಎಲ್ಲಾ ಬೆಳೆ ನೀರಲ್ಲಿರುವುದನ್ನು ಕಂಡು ಚಿಂತೆಗೀಡಾಗಿದ್ದಾನೆ.
ಈ ಬಗ್ಗೆ ಸತ್ಯಂಪೇಟೆ ಗ್ರಾಮದ ರೈತ ಶಿವರುದ್ರ ಉಳ್ಳಿ, ತುಟ್ಟಿ ಬೀಜ, ಗೊಬ್ಬರ ಹಾಕಿ ಭತ್ತದ ಸಸಿಗಳನ್ನು ಬೆಳೆಸಿದ್ದೆವು. ಆದರೆ ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ನಾಟಿ ಮಾಡಿದ ಸಸಿಗಳು ಕೊಳೆಯುತ್ತವೆ. ಇದರಿಂದ ಮತ್ತಿಷ್ಟು ಸಾಲದ ಹೊರೆ ಜೊತೆಗೆ ಪುನಃ ಭತ್ತದ ಸಸಿಗಳನ್ನು ತರಲು ಸಾಲ ಮಾಡಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಬರುವಂತೆ ವಿನಂತಿಸಿದ್ದಾರೆ.