ಯಾದಗಿರಿ:ಮಹಿಳೆಯೋರ್ವಳು ಬಳ್ಳಾರಿ ಜಿಲ್ಲೆಯಲ್ಲಿ ಮೃತಪಟ್ಟಿದ್ದು, ಅವರ ಶವವನ್ನ ಸ್ವಗ್ರಾಮಕ್ಕೆ ತರಲು ಜಿಲ್ಲಾಡಳಿತ ನಿರಾಕರಿಸಿದೆ. ಹಾಗಾಗಿ ಮೃತ ಮಹಿಳೆಯ ವಿಕಲ ಚೇತನ ಮಗ ಅಪರ ಜಿಲ್ಲಾಧಿಕಾರಿ ಮುಂದೆ ಅಸಾಹಯಕನಾಗಿ ನಿಂತು ಕಣ್ಣೀರು ಹಾಕಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ತಾಯಿ: ಅಮ್ಮನ ಮೃತದೇಹ ತರಲಾಗದೇ ಅಪರ ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಡುತ್ತಿರುವ ಮಗ
ಯಾದಗಿರಿ ಮೂಲದ ಮಹಿಳೆಯೋರ್ವಳು ಲಾಕ್ಡೌನ್ಗೂ ಮುಂಚೆ ತನ್ನ ತವರು ಮನೆಯಾದ ಬಳ್ಳಾರಿಗೆ ತೆರಳಿದ್ದರು. ಆದ್ರೆ ಆ ನಂತರ ಯಾದಗಿರಿಗೆ ಬರಲಾಗಲಿಲ್ಲ. ಆದ್ರೆ ನಿನ್ನೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹವನ್ನ ಅಂತ್ಯಸಂಸ್ಕಾರಕ್ಕಾಗಿ ಸ್ವಗ್ರಾಮ ಬಾಡಿಹಾಳಕ್ಕೆ ತರಲಾಗದೇ, ಅವರ ವಿಕಲಚೇತನ ಮಗ ಮಲ್ಲಿಕಾರ್ಜುನ ಅಪರ ಜಿಲ್ಲಾಧಿಕಾರಿಯ ಮುಂದೆ ಕಣ್ಣೀರಿಟ್ಟಿದ್ದಾನೆ.
ಜಿಲ್ಲೆಯ ಬಾಡಿಹಾಳ ಗ್ರಾಮದ ನಿವಾಸಿಯಾದ ಮೃತ ರುದ್ರಮ್ಮ, ಲಾಕ್ಡೌನ್ ಮುಂಚೆ ತನ್ನ ತವರು ಮನೆಯಾದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗಿಗೆ ತೆರಳಿದ್ದರು. ಲಾಕ್ಡೌನ್ನಿಂದ ತನ್ನ ಗಂಡನ ಮನೆಗೆ ಬರಲಾಗದೇ ಅಲ್ಲೇ ಸಿಲುಕಿದ್ದರು.
ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ಆ ಮಹಿಳೆ ಮೃತಪಟ್ಟಿದ್ದು, ಅವರ ಮೃತದೇಹವನ್ನ ಅಂತ್ಯಸಂಸ್ಕಾರಕ್ಕಾಗಿ ಸ್ವಗ್ರಾಮ ಬಾಡಿಹಾಳಕ್ಕೆ ತರಲು ಮೃತ ಮಹಿಳೆಯ ಮಗ ಮಲ್ಲಿಕಾರ್ಜುನ ಜಿಲ್ಲಾಡಳಿತದಿಂದ ಪರವಾನಗಿ ಕೇಳಿದ್ದ. ಇದಕ್ಕೆ ಜಿಲ್ಲಾಡಳಿತ ನಿರಾಕರಿಸಿದೆ. ಮೃತ ತಾಯಿಯ ಶವಸಂಸ್ಕಾರಕ್ಕಾಗಿ ತನ್ನ ಸ್ವಗ್ರಾಮಕ್ಕೆ ತರಲು ಆಗದಿದ್ದರಿಂದ, ದುಃಖ ತಾಳಲಾರದೆ ಮೃತ ಮಹಿಳೆಯ ಮಗ ಮಲ್ಲಿಕಾರ್ಜುನ ಅಪರ ಜಿಲ್ಲಾಧಿಕಾರಿಯವರ ಮೊರೆ ಹೋಗಿದ್ದಾನೆ.