ಕರ್ನಾಟಕ

karnataka

ETV Bharat / state

ರಾತ್ರಿಯನ್ನೂ ಲೆಕ್ಕಿಸದೆ ಕಾರ್ಯಾಚರಣೆಗಿಳಿದ ಎನ್​​ಡಿಆರ್​ಎಫ್ ತಂಡ: ವಸತಿ ಶಾಲೆಯಲ್ಲಿ ಸಿಲುಕಿದವರ ರಕ್ಷಣೆ

ಸೇಡಂ ತಾಲೂಕಿನ ಸಂಗಾವಿ ಗ್ರಾಮದ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದವರನ್ನು ಎನ್​​ಡಿಆರ್​ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸಿ ನಸುಕಿನ ಜಾವ ರಕ್ಷಿಸಲಾಗಿದೆ.

Morarji residential school staff reused by NDRF
ವಸತಿ ಶಾಲೆಯಲ್ಲಿ ಸಿಲುಕಿದವರ ರಕ್ಷಣೆ

By

Published : Oct 15, 2020, 7:01 AM IST

ಸೇಡಂ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾಗಿಣಾ ನದಿ ಪಾತ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ ಇಬ್ಬರು ಪುಟ್ಟ ಮಕ್ಕಳು ಸೇರಿ 7 ಜನರನ್ನು ರಕ್ಷಿಸುವಲ್ಲಿ ಎನ್​​ಡಿಆರ್​ಎಫ್ ತಂಡ ಯಶಸ್ವಿಯಾಗಿದೆ.

ಹೌದು, ಸೇಡಂ ತಾಲೂಕಿನ ಸಂಗಾವಿ ಗ್ರಾಮದ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದವರನ್ನು ನಿರಂತರ ಕಾರ್ಯಾಚರಣೆ ನಡೆಸಿ ನಸುಕಿನ ಜಾವ ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಭೀಕರ ನದಿ ಪ್ರವಾಹದಿಂದ ವಸತಿ ಶಾಲೆಯ ಒಂದನೇ ಮಹಡಿ ಸಂಪೂರ್ಣ ಮುಳುಗಡೆಯಾಗಿ ಎರಡನೇ ಮಹಡಿಯಲ್ಲಿ ನೀರು ಬರಲಾರಂಭಿಸಿತ್ತು. ಕಡೆಯ ಅವಕಾಶವಾದ ಮೇಲ್ಛಾವಣಿಗೆ ಏರಲು ಮೆಟ್ಟಿಲುಗಳಿಲ್ಲದಿದ್ದರೂ ಪುಟ್ಟ ಕಂದಮ್ಮಗಳ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಲ್ಲಿ ಸಿಲಿಕಿದ್ದ ಜನರು ಹರಸಾಹಸ ಪಟ್ಟು ಮೇಲ್ಛಾವಣಿ ಹತ್ತಿ ಸಹಾಯಕ್ಕಾಗಿ ಹಾತೊರೆಯುತ್ತಿದ್ದರು. ಆಡಿಯೋ ಸಂದೇಶ ಕಳುಹಿಸಿ, ಕಣ್ಣೀರಿಡುತ್ತಾ ಕಾಪಾಡಿ ಕಾಪಾಡಿ ಎಂದು ಅಂಗಲಾಚಿದ್ದರು.

ಆದರೆ ಸುಲೇಪೆಟ ಭಾಗದಲ್ಲಿ ಕಾರ್ಯನಿರ್ವಹಿಸಿ ಸೇಡಂ ಮಾರ್ಗವಾಗಿ ಮೊರಾರ್ಜಿ ದೇಸಾಯಿ ಶಾಲೆಗೆ ಎನ್‌ಡಿಅರ್​ಎಫ್ ತಂಡ ತಲುಪುವಷ್ಟೊತ್ತಿಗೆ ಮಧ್ಯರಾತ್ರಿಯಾಗಿತ್ತು. ಆದರೂ ಸಹ ಜೀವದ ಹಂಗನ್ನು ತೊರೆದು 2 ಪುರುಷರು, 3 ಮಹಿಳೆಯರು ಮತ್ತು ಒಂದೂವರೆ ವರ್ಷದ ಗಂಡು ಮಗು ಮತ್ತು 3 ವರ್ಷದ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಇಡೀ ರಾತ್ರಿ ಸ್ಥಳದಲ್ಲೇ ಬೀಡುಬಿಟ್ಟು ರಕ್ಷಣಾ ಕಾರ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿದ ತಹಶೀಲ್ದಾರ್​ ಬಸವರಾಜ ಬೆಣ್ಣಿಶಿರೂರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಮಾಜ ಸೇವಕ ರಾಜು ಕಟ್ಟಿ ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅಪಾಯದ ಅರಿವು ಮೂಡಿಸಿ ರಕ್ಷಣೆಗೆ ಸಹಕರಿಸಿದ್ದಾರೆ.

ABOUT THE AUTHOR

...view details