ಯಾದಗಿರಿ :ಸರ್ಕಾರ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಹಿಜಾಬ್ ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯವಲ್ಲ ಎಂಬ ಹೈಕೋರ್ಟ್‌ನ ತೀರ್ಪು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕೆಲ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಧಿಕ್ಕರಿಸಿ ಮನೆಯತ್ತ ತೆರಳಿದ ಘಟನೆ ಯಾದಗಿರಿ ಜಿಲ್ಲೆ ಕೆಂಭಾವಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ 300 ಶಾಲಾ-ಕಾಲೇಜುಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 3 ಡಿವೈಎಸ್ಪಿ, 15 ಪಿಐ, 30 ಪಿಎಸ್ಐ, 300 ಪೊಲೀಸ್ ಸಿಬ್ಬಂದಿ ಹಾಗೂ 4 ಡಿಎಆರ್ ತುಕಡಿಗಳನ್ನು ಇರಿಸಲಾಗಿತ್ತು. ಇದರಿಂದ ಯಾವುದೇ ಗಲಭೆ, ಅಹಿತಕರ ಘಟನೆ ನಡೆಯಲಿಲ್ಲ.