ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: 50ಕ್ಕೂ ಅಧಿಕ ಕಾರ್ಮಿಕರಿಗೆ ಉಚಿತ ಮಾಸ್ಕ್​, ಸ್ಯಾನಿಟೈಸರ್ ವಿತರಣೆ

ಅಸುರಕ್ಷಿತವಾಗಿ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ತಾಲೂಕು ಅಧಿಕಾರಿಗಳು ಮಾಸ್ಕ್, ಗ್ಲೌಸ್​ ಹಾಗೂ ಸ್ಯಾನಿಟೈಸರ್​ ನೀಡಿದರು. ಈ ಕುರಿತು ಈಚೆಗೆ ಈ ಟಿವಿ ಭಾರತ ವಿಶೇಷ ವರದಿ ಪ್ರಕಟಿಸಿತ್ತು.

etv bharat impact in yadagiri
ಈಟಿವಿ ಭಾರತ ಫಲಶೃತಿ

By

Published : Apr 4, 2020, 9:27 PM IST

ಯಾದಗಿರಿ: ಅಸುರಕ್ಷತೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಕುರಿತು ಇತ್ತೀಚೆಗೆ ಈಟಿವಿ ಭಾರತ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ತಾಲೂಕು ಅಧಿಕಾರಿಗಳು ಎಚ್ಚೆತ್ತುಕೊಂಡು, ಕಾರ್ಮಿಕರಿಗೆ ಉಚಿತ ಮಾಸ್ಕ್, ಗ್ಲೌಸ್​ ಹಾಗೂ ಸ್ಯಾನಿಟೈಸರ್​​ ನೀಡಿದ್ದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರು.

ಈಟಿವಿ ಭಾರತ ಫಲಶೃತಿ

ಶಹಾಪುರ ತಾಲೂಕಿನ ದೋರನಹಳ್ಳಿ ಹೊರವಲಯದ ಹೊಸಕೆರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರಾಗಿದ್ದಾರೆ.

ದಿನೇ, ದಿನೆ ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ಹೆಚ್ಚುತ್ತಿದ್ದು ಅಗತ್ಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರದ ಸೂಚಿಸುತ್ತಿದೆ.

ಅಸುರಕ್ಷಿತದ ಮಧ್ಯೆ ಮಹಿಳೆಯರು ಕೆಲಸ ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತುವ ಕೆಲಸ ಮಾಡುತ್ತಿದ್ದರು. ಈ ಸ್ಥಳಕ್ಕೆ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಗಾರ ಭೇಟಿ‌ ನೀಡಿ ಮಹಿಳಾ ಕೂಲಿ‌ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.

ಶಹಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ್ ಮೂರ್ತಿ, ದೋರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ್ ಅಲಿ, ಎಡಿ ಶಾರದಾ, ಟಿಪಿಒ ಭೀಮರಾಯ ಬಿರಾದರ,ಜಿಲ್ಲಾ ಪಂಚಾಯಿತಿ ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ, ಶಹಾಪುರ ಟಿ ಸಿ ರವೀಂದ್ರ ದೇಸಾಯಿ,ದೋರನಹಳ್ಳಿ ಪಿಡಿಒ ಗೋವಿಂದ, ಟಿಐಇಸಿ ಭೀಮರೆಡ್ಡಿ, ಟಿಎಇ ಅಭಿಲಾಷ ರೆಡ್ಡಿ ಇದ್ದರು.

ABOUT THE AUTHOR

...view details