ಸುರಪುರ (ಯಾದಗಿರಿ):ಕೊರೊನಾ ಮಹಾಮಾರಿ ಒಮ್ಮೆ ಬಂತೆಂದರೆ ಸಾವು ಖಚಿತ ಎಂಬ ಭಯ ಜನರನ್ನು ಕಾಡತೊಡಗಿದೆ. ಆದರೆ ಸೋಂಕಿತರೊಬ್ಬರು ತಾವು ಗುಣಮುಖರಾಗಿರುವ ಅನುಭವದ ಕುರಿತು ವಿಡಿಯೊ ಮಾಡಿ ಜನರಲ್ಲಿ ಅರಿವು ಮೂಡಿಸಿದ್ದಾರೆ.
'ಕೊರೊನಾ ಎಂದರೆ ಭಯ ಬೇಡ..'ವಿಡಿಯೊ ಮೂಲಕ ಸೋಂಕಿತ ವ್ಯಕ್ತಿಯಿಂದ ಜಾಗೃತಿ
ಕೊರೊನಾ ಯಾವುದೇ ದೊಡ್ಡ ಕಾಯಿಲೆ ಏನಲ್ಲ, ಜನರು ಇದರ ಬಗ್ಗೆ ಭಯಪಡದೆ ಸೋಂಕು ಕಾಣಿಸಿಕೊಂಡಲ್ಲಿ ಪರೀಕ್ಷೆಗೊಳಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬೇಗನೆ ಗುಣಮುಖರಾಗುತ್ತಾರೆ ಎಂದು ಸೋಂಕಿತ ವ್ಯಕ್ತಿಯೊಬ್ಬರು ವಿಡಿಯೊ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಎಂದರೆ ಭಯ ಬೇಡ...ವಿಡಿಯೋ ಮೂಲಕ ಜಾಗೃತಿಗಿಳಿದ ಸೋಂಕಿತ
ಕಳೆದ 5 ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತನೊಬ್ಬ ಚಿಕಿತ್ಸೆ ಪಡೆಯುತ್ತಿದ್ದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಜನರಲ್ಲಿರುವ ಭಯ ದೂರಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಕೊರೊನಾ ಯಾವುದೇ ದೊಡ್ಡ ಕಾಯಿಲೆ ಏನಲ್ಲ. ಜನರು ಇದರ ಬಗ್ಗೆ ಭಯಪಡದೆ ಸೋಂಕು ಕಾಣಿಸಿಕೊಂಡಲ್ಲಿ ಪರೀಕ್ಷೆಗೊಳಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬೇಗನೆ ಗುಣಮುಖರಾಗುತ್ತಾರೆ. ಇದರ ಬಗ್ಗೆ ಯಾವುದೇ ಭಯ ಬೇಡ ಎಂದಿದ್ದಾರೆ.