ಸುರಪುರ(ಯಾದಗಿರಿ) :ಸುರಪುರ ತಾಲೂಕಿನ ಅರಕೇರಾ ಜೆ ಗ್ರಾಮದ ವಿದ್ಯಾರ್ಥಿ ಮೇಲೆ ಕಲಬುರ್ಗಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹುಡುಗಿಯ ವಿಚಾರವಾಗಿ ಯುವಕನಿಗೆ ಮನಬಂದಂತೆ ಹಲ್ಲೆ ನಡೆಸಿದ ರಾಕ್ಷಸ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಅರಕೇರಾ ಗ್ರಾಮದ ಯುವಕ ಭೀಮನಗೌಡ ಪಾಟೀಲ್ ಎಂಬುವನು ಕಲಬುರ್ಗಿಯಲ್ಲಿ ಎಂಬಿಎ ಓದುತ್ತಿದ್ದ. ಅದೇ ತರಗತಿಯಲ್ಲಿದ್ದ ಯುವತಿಯನ್ನು ಪ್ರೀತಿಸುತ್ತಿದ್ದಿಯಾ ಎಂದು ಕಲಬುರ್ಗಿ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕೆಲವು ದುಷ್ಟರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಯುವಕನ ಎರಡೂ ಕೈಗಳು ಮುರಿದಿವೆ. ಹಲ್ಲೆ ಎಸಗಿದವರ ವಿರುದ್ಧ ಭೀಮನಗೌಡನ ತಂದೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.