ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ 18 ಜನರಿಗೆ ಕೊರೊನಾ: ಸೋಂಕಿತರ ಸಂಪರ್ಕ ಪತ್ತೆ ಕಾರ್ಯದಲ್ಲಿ ಜಿಲ್ಲಾಡಳಿತ

ಲ್ಯಾಬ್ ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್​​ನಲ್ಲಿದ್ದ ಮುಂಬೈಯಿಂದ ಬಂದ ವಲಸಿಗರನ್ನ ಮನೆಗೆ ಕಳುಹಿಸಲಾಗಿದ್ದು, ಹೋಮ್ ಕ್ವಾರಂಟೈನ್​​ನಲ್ಲಿದ್ದ 18 ಜನರಗೆ ಸೋಂಕು ಇರುವುದು ಇಂದು ದೃಢಪಟ್ಟಿದೆ. ಜಿಲ್ಲಾಡಳಿತ ಮಾತ್ರ ವೈರಸ್​ ತಡೆಗಟ್ಟುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಸೋಂಕಿತರ ಸಂಪರ್ಕ ಪತ್ತೆ ಕಾರ್ಯದಲ್ಲಿ ಜಿಲ್ಲಾಡಳಿತ
ಸೋಂಕಿತರ ಸಂಪರ್ಕ ಪತ್ತೆ ಕಾರ್ಯದಲ್ಲಿ ಜಿಲ್ಲಾಡಳಿತಸೋಂಕಿತರ ಸಂಪರ್ಕ ಪತ್ತೆ ಕಾರ್ಯದಲ್ಲಿ ಜಿಲ್ಲಾಡಳಿತ

By

Published : Jun 9, 2020, 8:06 PM IST

ಯಾದಗಿರಿ:ಜಿಲ್ಲೆಯಲ್ಲಿ ಕೊರೊನಾ ವೈರಸ್​​ನ ಹಾವಳಿ ಮುಂದುವರೆದಿದ್ದು, ಜಿಲ್ಲಾಡಳಿತ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಲ್ಯಾಬ್ ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್​​ನಲ್ಲಿದ್ದ ಮುಂಬೈಯಿಂದ ಬಂದ ವಲಸಿಗರನ್ನ ಮನೆಗೆ ಕಳುಹಿಸಲಾಗಿದ್ದು, ಹೋಮ್ ಕ್ವಾರಂಟೈನ್​​ನಲ್ಲಿದ್ದ 18 ಜನರಗೆ ಇಂದು ಸೋಂಕು ಇರುವುದು ದೃಢಪಟ್ಟಿದೆ. ನಗರದ ವಾರ್ಡ್ ನಂ. 9 ತಪಾಡಗೇರಾದಲ್ಲಿ ಒಂದೇ ಕುಟುಂಬದ 15 ಜನರಿಗೆ ಸೋಂಕು ತಗುಲಿದ್ದು, ವಾರ್ಡ್ ನಂ. 25 ಲಕ್ಷ್ಮಿ ನಗರದ 1 ಓರ್ವ ಸೇರಿದಂತೆ ಕೊಳಿವಾಡ ಬಡಾವಣೆಯ ಇಬ್ಬರು ನಿವಾಸಿಗಳಿಗೆ ಸೋಂಕು ಇರುವುದು ದೃಢವಾಗಿದೆ.

ಸೋಂಕು ತಗುಲಿದ ಇವರೆಲ್ಲಾ ನಗರದ ವಿವಿಧೆಡೆ ಸಂಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೋಮ್​​ಕ್ವಾರಂಟೈನ್ ಮಾಡಿದವರ ಬಗ್ಗೆ ತೀವ್ರ ನಿಗಾ ವಹಿಸಬೇಕಾಗಿದ್ದ, ಜಿಲ್ಲಾಡಳಿತ ಈ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದೆ. ಸೋಂಕಿಗೆ ತುತ್ತಾದ ಇವರ ತಿರುಗಾಟದಿಂದ ಯಾದಗಿರಿ ನಗರದ ಜನತೆಯಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.

ಸೋಂಕು ತಗುಲಿದ 18 ಜನರ ಸಂಪರ್ಕ ಪತ್ತೆ ಕಾರ್ಯದಲ್ಲಿ ತೋಡಗಿರುವ ಜಿಲ್ಲಾಡಳಿತ, ಈಗ ನಗರದ ಕೊಳಿವಾಡ ಬಡಾವಣೆ ಮತ್ತು ಲಕ್ಷ್ಮಿ ನಗರದ 100 ಮೀಟರ್ ಕಂಟೈನ್ಮೆಂಟ್​ ಝೋನ್ ಏರಿಯಾ ಎಂದು ಆದೇಶ ಹೊರಡಿಸಿದೆ.

ABOUT THE AUTHOR

...view details